ಬೆಂಗಳೂರು: ಇಂದು ಕೇತುಗ್ರಸ್ಥ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನೀರಿನಲ್ಲಿ ಒನಕೆ ನಿಲ್ಲಿಸಿ ಗ್ರಹಣ ವೀಕ್ಷಿಸಲಾಯಿತು.
ಚಾಮರಾಜನಗರ ತಾಲೂಕಿನ ಮೂಡ್ಲುಪುರದಲ್ಲಿ ಸೂರ್ಯಗ್ರಹಣ ವೇಳೆ ತಾಮ್ರದ ಪಾತ್ರೆಯ ನೀರಿನಲ್ಲಿ ಒನಕೆ ಇಟ್ಟು ಪರೀಕ್ಷೆ ನಡೆಸಲಾಗಿದೆ. ಗ್ರಹಣದ ವೇಳೆ ತಾಮ್ರದ ಪಾತ್ರೆಯ ನೀರಿನಲ್ಲಿ ನಿಂತು ಗ್ರಹಣ ಮೋಕ್ಷವಾಗುತ್ತಿದ್ದಂತೆ ಕೆಳಕ್ಕೆ ಬಿದ್ದು ಅಚ್ಚರಿ ಮೂಡಿಸಿದೆ. ಗ್ರಹಣದ ವೇಳೆ ಗುರುತ್ವಾಕರ್ಷಣೆ ಹೆಚ್ಚಾಗಿರುವುದರಿಂದ ಒನಕೆ ನೇರವಾಗಿ ನಿಲ್ಲುತ್ತದೆಂಬುದು ಪೂರ್ವಜರ ನಂಬಿಕೆಯಾಗಿದೆ. ಇದನ್ನು ಪರೀಕ್ಷೆಗೆ ಒಳಪಡಿಸಿ ಗ್ರಾಮಸ್ಥರು ಖಚಿತಪಡಿಸಿಕೊಂಡಿದ್ದಲ್ಲದೇ ಅಚ್ಚರಿಗೊಳಗಾಗಿದ್ದರೆ.
Advertisement
ಗ್ರಾಮದ ನಂದೀಶ್ ಎಂಬವರ ಮನೆಯಲ್ಲಿ ತಾಮ್ರದ ಪಾತ್ರೆಯಲ್ಲಿ ನೀರನ್ನು ತುಂಬಿ ಪರೀಕ್ಷೆ ನಡೆಸಿದರು, ಗ್ರಹಣದ ವೇಳೆ ಗುರುತ್ವಾಕರ್ಷಣೆ ಹೆಚ್ಚಾಗಿರುವುದರಿಂದ ಒನಕೆ ನೀರಿನಲ್ಲಿ ನಿಂತಿದ್ದು ಗ್ರಹಣ ಮೋಕ್ಷದ ನಂತರ ಬಿದ್ದ ಹೋಗಿದೆ. ಇದರಿಂದ ಮನೆಯವರು, ಗ್ರಾಮಸ್ಥರು ಅಚ್ಚರಿಗೊಳಗಾಗಿದ್ದಾರೆ.
Advertisement
Advertisement
ಬಾಗಲಕೋಟೆ ನಗರ ಹಾಗೂ ತೇರದಾಳ ಪಟ್ಟಣದಲ್ಲೂ ತಾಮ್ರದ ತಟ್ಟೆಯ ತಳಭಾಗದಲ್ಲಿ ನೀರು ಹಾಕಿ, ಒನಕೆಯನ್ನು ನೇರವಾಗಿ ಆ ತಟ್ಟೆಯ ಮೇಲಿಟ್ಟು ಪರೀಕ್ಷೆ ಮಾಡಲಾಯಿತು. ತಾಮ್ರದ ಪ್ಲೇಟ್‍ನಿಂದ ಒನಕೆ ನೇರವಾಗಿ ನಿಲ್ಲುವ ತನಕ ಗ್ರಹಣ ಇರುತ್ತದೆ. ಗ್ರಹಣ ಮೋಕ್ಷಗೊಂಡ ಕಾಲಕ್ಕೆ ಒನಕೆ ಕೆಳಗಡೆ ಬೀಳುತ್ತೆ ಎಂಬುದು ಜನರ ನಂಬಿಕೆ. ಹಾಗಾಗಿ ಇಂದು ತೇರದಾಳ ಪಟ್ಟಣದ ಅಮೀತ್ ಮಾಳೇದ್ ಹಾಗೂ ಬಾಗಲಕೋಟೆ ನಗರದ ಸುರೇಶ್ ಮಜ್ಜಗಿ ಅವರ ಮನೆಯಲ್ಲಿ ಈ ಪ್ರಯೋಗ ಮಾಡಲಾಯಿತು.
Advertisement
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೂಸನೂರು ಮತ್ತು ಹಿರೇಕೆರೂರು ತಾಲೂಕಿನ ಬೋಗಾವಿ ಗ್ರಾಮದ ನಿವಾಸಿಗಳು ಗ್ರಹಣ ಹಿಡಿದಾಗ ಬುಟ್ಟಿಯಲ್ಲಿ ನೀರು ಹಾಕಿ ಒನಕೆ ನಿಲ್ಲಿಸಿಟ್ಟಿದರು. ಒನಕೆ ನಿಲ್ಲಿಸಿದ ನಂತರ ಗ್ರಹಣ ವೀಕ್ಷಣೆ ಮಾಡಿದರು.
ಕಂಕಣ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲೂ ತಾಮ್ರದ ಪಾತ್ರೆಯಲ್ಲಿ ಒನಕೆ ನಿಲ್ಲಿಸಿ ಪರೀಕ್ಷಿಸಲಾಯಿತು. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮೇಟಿ ಎಂಬವರ ಮನೆಯಲ್ಲಿ ಈ ಪರೀಕ್ಷೆ ನಡೆಸಲಾಯಿತು. ಸೂರ್ಯ ಗ್ರಹಣ ಮುಕ್ತಾಯದ ವರೆಗೆ ತಾಮ್ರದ ಪಾತ್ರೆಯಲ್ಲಿ ಒನಕೆ ನಿಲ್ಲಿಸಲಾಗಿತ್ತು.