Connect with us

Latest

ವುಮೆನ್ಸ್ ಡೇ ಗೆ ಮಹಿಳೆಯರಿಗೆ ಗುಡ್‍ನ್ಯೂಸ್- ಇಂದಿನಿಂದ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತೆ ಸ್ಯಾನಿಟರಿ ಪ್ಯಾಡ್

Published

on

ನವದೆಹಲಿ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದೇ ಮಹಿಳೆಯರಿಗೆ ಗುಡ್‍ನ್ಯೂಸ್ ಸಿಕ್ಕಿದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಮಹಿಳೆಯರಿಗೆ ಗಿಫ್ಟ್ ನೀಡಿದೆ.

ಅತ್ಯಂತ ಕಡಿಮೆ ಬೆಲೆಯ ಸ್ಯಾನಿಟರಿ ಪ್ಯಾಡ್‍ಗಳನ್ನ ಇಂದು ಸರ್ಕಾರ ಬಿಡುಗಡೆ ಮಾಡಿದೆ. ಸುವಿಧ ಹೆಸರಿನ, ಮಣ್ಣಿನಲ್ಲಿ ಕರಗುವ ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್‍ಗಳು ಇದಾಗಿದೆ. ಸಾಮಾನ್ಯವಾಗಿ ಒಂದು ನ್ಯಾಪ್‍ಕಿನ್‍ಗೆ 8 ರೂ. ಬೆಲೆ ಇದ್ದು, ಈಗ ಬಿಡುಗಡೆ ಮಾಡಲಾಗಿರುವ ಪ್ಯಾಡ್ ಕೇವಲ 2.50 ರೂಪಾಯಿಗೆ ಒಂದು ಸ್ಯಾನಟರಿ ಪ್ಯಾಡ್ ದೊರಕಲಿದೆ. ದೇಶಾದ್ಯಂತ 589 ಜಿಲ್ಲೆಗಳಲ್ಲಿನ ಎಲ್ಲಾ 3200 ಜನೌಷಧಿ ಕೇಂದ್ರಗಳಲ್ಲಿ ಅಗ್ಗದ ಸ್ಯಾನಿಟರಿ ಪ್ಯಾಡ್ ಗಳು ಲಭ್ಯವಿರಲಿದೆ.

ಮಾರುಕಟ್ಟೆಯಲ್ಲಿ ವಿವಿಧ ಪ್ಯಾಡ್‍ಗಳ ಬೆಲೆ ಸರಾಸರಿ 30 ರಿಂದ 80 ರೂ.ವರೆಗೂ ಇದೆ. ಆದ್ರೆ 4 ಪ್ಯಾಡ್‍ಗಳ ಒಂದು ಸೆಟ್ ಸುವಿಧಾ ಪ್ಯಾಡ್ಸ್ ಬೆಲೆ ಕೇವಲ 10 ರೂ. ಇರಲಿದೆ. ಇವು ಮಾರುಕಟ್ಟೆಯಲ್ಲಿ ಲಭ್ಯವಿರುವ ಮೊಟ್ಟಮೊದಲ ಪರಿಸರ ಸ್ನೇಹಿ ಪ್ಯಾಡ್‍ಗಳು. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರೆ ಪ್ಯಾಡ್‍ಗಳಿಗಿಂತ ಇವು ಅಗ್ಗವಾಗಿವೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ಹೇಳಿದ್ದಾರೆ.

ಈ ಹಿಂದೆ ಸರ್ಕಾರ ಕ್ಯಾನ್ಸರ್, ಡಯಾಬಿಟಿಸ್, ಬಿಪಿ ಗೆ ಚಿಕಿತ್ಸೆ ನೀಡಲು ಬಳಸುವ ಔಷಧಿಗಳು ಸೇರಿದಂತೆ ಸುಮಾರು 800 ಔಷಧಿಗಳ ಬೆಲೆಯನ್ನ ಕಡಿಮೆ ಮಾಡಿತ್ತು. ಇತ್ತೀಚೆಗೆ ಸ್ಟೆಂಟ್‍ಗಳ ಬೆಲೆಯನ್ನೂ ಇಳಿಸಲಾಗಿತ್ತು.

Click to comment

Leave a Reply

Your email address will not be published. Required fields are marked *