ಭುವನೇಶ್ವರ: ಅಂಬುಲೆನ್ಸ್ ಚಾಲಕನೊಬ್ಬ (Ambulance Driver) ಆಸ್ಪತ್ರೆಗೆ ಹೋಗುತ್ತಿದ್ದ ದಾರಿಯಲ್ಲಿ ವಾಹನವನ್ನು ನಿಲ್ಲಿಸಿ, ಗಾಯಗೊಂಡಿದ್ದ ಪ್ರಯಾಣಿಕನಿಗೆ ಮದ್ಯ (Alcohol) ನೀಡಿದ್ದಲ್ಲದೇ ತಾನೂ ಸೇವಿಸಿರುವ ಘಟನೆ ಒಡಿಶಾದಲ್ಲಿ (Odisha) ನಡೆದಿದೆ. ಘಟನೆಯ ವೀಡಿಯೋವನ್ನು ಸೆರೆಹಿಡಿಯಲಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
ವರದಿಗಳ ಪ್ರಕಾರ ಅಂಬುಲೆನ್ಸ್ ಚಾಲಕ ಆಸ್ಪತ್ರೆಗೆ ಹೋಗುತ್ತಿದ್ದ ದಾರಿಯಲ್ಲಿ ವಾಹನವನ್ನು ಟೊರ್ಟೋಲ್ ಪ್ರದೇಶದ ಹೆದ್ದಾರಿಯ ಬದಿಯಲ್ಲಿ ನಿಲ್ಲಿಸಿದ್ದಾನೆ. ಬಳಿಕ 2 ಗ್ಲಾಸ್‌ಗಳಿಗೆ ಮದ್ಯವನ್ನು ಸುರಿದಿದ್ದಾನೆ. ಒಂದು ಗ್ಲಾಸ್ ಅನ್ನು ಅಂಬುಲೆನ್ಸ್ನಲ್ಲಿ ಮಲಗಿದ್ದ ಗಾಯಾಳುವಿಗೆ ನೀಡಿದ್ದು, ಇನ್ನೊಂದು ಗ್ಲಾಸ್‌ನಲ್ಲಿದ್ದ ಮದ್ಯವನ್ನು ತಾನು ಕುಡಿದಿದ್ದಾನೆ. ಈ ಎಲ್ಲಾ ದೃಶ್ಯಗಳು ಸೆರೆಹಿಡಿಯಲಾದ ವೀಡಿಯೋದಲ್ಲಿ ಕಂಡುಬಂದಿದೆ.
Advertisement
In a shocking incident that took place in #Odisha #india ,a video of an ambulance driver drinking with a patient while on their way to hospital. In the video, the ambulance driver can be seen drinking and even sharing the drink with a patient. pic.twitter.com/gNJ07tECV6
— S a m (@cheguwera) December 20, 2022
Advertisement
ಈ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಚಾಲಕನನ್ನು ಕೇಳಿದಾಗ ಆತ ಗಾಯಾಳುವೇ ತನ್ನ ಬಳಿ ಮದ್ಯ ನೀಡುವಂತೆ ಕೇಳಿದ್ದಾನೆ ಎಂದು ತಿಳಿಸಿದ್ದಾನೆ. ಅಂಬುಲೆನ್ಸ್‌ನಲ್ಲಿ ಒಬ್ಬ ಮಹಿಳೆ ಹಾಗೂ ಒಂದು ಮಗು ಇರುವುದೂ ಕಂಡುಬಂದಿದೆ.
Advertisement
ಘಟನೆ ಬಗ್ಗೆ ಮಾತನಾಡಿರುವ ಜಗತ್‌ಸಿಂಗ್‌ಪುರ ಮುಖ್ಯ ಜಿಲ್ಲಾ ವೈದ್ಯಾಧಿಕಾರಿ (ಸಿಡಿಎಂಒ) ಡಾ. ಕ್ಷೇತ್ರಬಸಿ ದಾಶ್, ಇದು ಖಾಸಗಿ ಅಂಬುಲೆನ್ಸ್ ಆಗಿರುವುದರಿಂದ ನಾವು ಈ ಬಗ್ಗೆ ಹೆಚ್ಚಿನದೇನನ್ನೂ ಹೇಳಲು ಸಾಧ್ಯವಿಲ್ಲ. ಆದರೆ ಈ ರೀತಿ ತಪ್ಪು ಮಾಡಿರುವ ಚಾಲಕನ ವಿರುದ್ಧ ಪ್ರಾದೇಶಿಕ ಸಾರಿಗೆ ಕಚೇರಿ ಹಾಗೂ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಅಫ್ಘಾನ್ ವಿದ್ಯಾರ್ಥಿನಿಯರಿಗೆ ವಿಶ್ವವಿದ್ಯಾನಿಲಯ ಶಿಕ್ಷಣಕ್ಕೂ ಅವಕಾಶವಿಲ್ಲ
Advertisement
ಕುಡಿದು ವಾಹನ ಚಾಲನೆ ಮಾಡುವುದು ಸಂಚಾರ ಅಪರಾಧ ಎಂದು ಪರಿಗಣಿಸಲಾಗಿದೆ. ಆದರೆ ಇಲ್ಲಿಯವರೆಗೆ ಅಂಬುಲೆನ್ಸ್ ಚಾಲಕನ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ. ಎಫ್‌ಐಆರ್ ದಾಖಲಾದರೆ ಮಾತ್ರವೇ ತನಿಖೆ ನಡೆಸಲಾಗುವುದು ಎಂದು ತಿರ್ತೋಲ್ ಪೊಲೀಸ್ ಠಾಣೆಯ ಪ್ರಭಾರಿ ಇನ್ಸ್ಪೆಕ್ಟರ್ ಜುಗಲ್ ಕಿಶೋರ್ ದಾಸ್ ತಿಳಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಿ ಅಂಬುಲೆನ್ಸ್ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರದೇಶದ ನಿವಾಸಿಗಳು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಒಂದೇ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು