– ತಮ್ಮ ವಿವಿಧ ಧಿರಿಸಿನ ಬಗ್ಗೆ ವ್ಯಂಗ್ಯವಾಡಿದವರಿಗೆ ತಿರುಗೇಟು
ನವದೆಹಲಿ: ಅಯೋಧ್ಯೆ ರಾಮಮಂದಿರದಲ್ಲಿ (Ayodhya Ram Mandir) ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೂ ಮುನ್ನ 11 ದಿನಗಳ ಕಾಲ ನರೇಂದ್ರ ಮೋದಿಯವರು ವ್ರತದಲ್ಲಿದ್ದರು. ಪ್ರಧಾನಿಗಳ ಈ ಕ್ರಮಕ್ಕೆ ವಿಪಕ್ಷಗಳು ಟೀಕೆ ವ್ಯಕ್ತಪಡಿಸಿದ್ದವು. ಈ ಟೀಕೆಗಳಿಗೆ ಮೋದಿಯವರು ಇಂದು ತಕ್ಕ ಉತ್ತರ ಕೊಟ್ಟಿದ್ದಾರೆ.
Advertisement
ಖಾಸಗಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದ ವೇಳೆ ರಾಮಮಂದಿರಕ್ಕೆ ರಾಜಕೀಯ ತಿರುವು ಕೊಟ್ಟ ವಿಚಾರದ ಬಗ್ಗೆ ಪ್ರಸ್ತಾಪ ಮಾಡಲಾಯಿತು. ಈ ವೇಳೆ ಪ್ರತಿಕ್ರಿಯಿಸಿದ ಪ್ರಧಾನಿಯವರು, ಈ ಪ್ರಕರಣದ ಇತ್ಯರ್ಥಕ್ಕೆ ಸಾಕಷ್ಟು ಅವಕಾಶಗಳಿದ್ದವು. ಇದು 500 ವರ್ಷಗಳ ನಿರಂತರ ಹೋರಾಟ, ಬಲಿದಾನ, ಕಾನೂನು ಹೋರಾಟವಾಗಿತ್ತು. ಕೆಲವರಿಗೆ ಮತಬ್ಯಾಂಕ್ ಗಾಗಿ ಇದೊಂದು ಅಸ್ತ್ರವಾಗಿತ್ತು. ಮಂದಿರ ನಿರ್ಮಾಣ ಮಾಡಿದ್ರೆ ಸಮಸ್ಯೆ ಎಂದು ಹೆಸರಿಸಲಾಯಿತು. ಇಂದು ನಾವು ಮಂದಿರ ನಿರ್ಮಾಣ ಮಾಡಿದೆವು, ಏನಾಯಿತು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಎಳನೀರು ಸೇವನೆ, ನೆಲದಲ್ಲೇ ನಿದ್ದೆ, ಸಾತ್ವಿಕ ಆಹಾರ- ರಾಮನ ಪ್ರತಿಷ್ಠಾಪನೆಗೆ ಪ್ರಧಾನಿ ಮೋದಿ ಕಠಿಣ ವ್ರತ
Advertisement
Advertisement
ಇದು ನನಗೆ ಇವೆಂಟ್ ಆಗಿರ್ಲಿಲ್ಲ: ರಾಮ ಮಂದಿರ ಉದ್ಫಾಟನೆಗೂ ಮುನ್ನ ವೃತ ಆರಂಭಿಸಿದೆ. ರಾಮ ಎಲ್ಲೆಲ್ಲಿ ಹೋಗಿದ್ದರು ನಾನು ಅಲ್ಲಿಗೆ ಹೋಗಲು ಪ್ರಯತ್ನಿಸಿದೆ. ದಕ್ಷಿಣ ಭಾರತದಲ್ಲೂ ಶ್ರೀರಾಮನ ಬಗ್ಗೆ ಅಪಾರ ಪ್ರೀತಿ ಇದೆ. ಅವರ ಭಾವನೆಯಲ್ಲಿ ನನಗೆ ಅರಿವಾಗುತ್ತಿತ್ತು. ಈ 11 ದಿನಗಳ ಬಹಳಷ್ಟು ಗಂಭೀರವಾಗಿ ಪರಿಗಣಿಸಿದ್ದೆ. ಇದು ನನಗೆ ಇವೆಂಟ್ ಆಗಿರಲಿಲ್ಲ ಎಂದು ಟೀಕೆಗಳಿಗೆ ಮೋದಿ ತಕ್ಕ ಉತ್ತರ ಕೊಟ್ಟರು. ಇದನ್ನೂ ಓದಿ: ಪ್ರಧಾನಿ ಮೋದಿ 11 ದಿನಗಳ ವ್ರತದ ಮಹತ್ವ ಏನು?
Advertisement
#WATCH | On the issue of Ram Temple, "For them (opposition), it was a political weapon. Now it has been built, so the issue has gone out of their hands" says PM Narendra Modi. pic.twitter.com/DVXrxykxMJ
— ANI (@ANI) April 15, 2024
ರಾಮ ಮಂದಿರದ ಆಹ್ವಾನವನ್ನು ತಿರಸ್ಕರಿಸಲಾಯಿತು. ಇದನ್ನು ಹೆಮ್ಮೆ ಪಡೆಬೇಕಿತ್ತು. ಆದರೆ ಮತಬ್ಯಾಂಕ್ ಅವರಿಗೆ ಅನಿವಾರ್ಯವಾಗಿತ್ತು. ರಾಮ ಮಂದಿರ ಮುಂದಿನ ಪೀಳಿಗೆಗೆ ಪ್ರೇರಣೆ ಎಂದು ಪ್ರಧಾನಿ ಮೋದಿ (Narendra Modi) ಹೇಳಿದರು. ಇದನ್ನೂ ಓದಿ: ಮೋದಿ ನಾಸಿಕ್‌ನಿಂದಲೇ ವ್ರತ ಆರಂಭಿಸಿದ್ದು ಯಾಕೆ? ರಾಮಾಯಣಕ್ಕೂ ನಾಸಿಕ್‌ಗೂ ಏನು ಸಂಬಂಧ?
ಧಿರಿಸಿನ ವ್ಯಂಗ್ಯಕ್ಕೆ ತಿರುಗೇಟು: ನಾನು ಯಾವ ರಾಜ್ಯಕ್ಕೆ ಹೊಗ್ತೀನೋ ಅಲ್ಲಿಯ ಜನರು ಪ್ರೀತಿಯಿಂದ ಅಲ್ಲಿನ ಧಿರಸು ಧರಿಸಲು ನೀಡುತ್ತಾರೆ. ಆದರೆ ಇದನ್ನೂ ವ್ಯಂಗ್ಯ ಮಾಡುತ್ತಾರೆ. ಇಷ್ಟು ದ್ವೇಷ ಹರಡುವುದು ಒಳಿತಲ್ಲ ಎಂದು ವಿರೋಧಿಗಳ ವಿರುದ್ಧ ಪ್ರಧಾನಿ ವಾಗ್ದಾಳಿ ನಡೆಸಿದರು.