ನವದೆಹಲಿ: ಬೆಳಕಿನ ಹಬ್ಬ ಅಂದ್ರೆ ಅದು ದೀಪಾವಳಿ (Deepavali). ಈ ದೀಪಾವಳಿಯನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ವಿಶಿಷ್ಟವಾಗಿ ಆಚರಿಸುತ್ತಿದ್ದಾರೆ. ಅದರಂತೆ ಇಂದು ರಾಮ ಜನ್ಮಭೂಮಿ ಅಯೋಧ್ಯೆ (Ayodhya) ಗೆ ಭೇಟಿ ನೀಡುತ್ತಿದ್ದು, ಬೆಳಕಿನ ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ.
On the eve of Deepavali today, PM Modi will visit Ayodhya, Uttar Pradesh.
PM will offer prayers to Lord Ramlala Virajman, followed by an inspection of the Shree Ram Janmabhoomi Teerth Kshetra site. He'll perform the Rajyabhishek of symbolic Bhagwan Shree Ram: PMO
(file pic) pic.twitter.com/SIyU9P3sCH
— ANI (@ANI) October 23, 2022
Advertisement
ಹೌದು. ಪ್ರತಿ ವರ್ಷದಂತೆ ಪ್ರಧಾನಿ ನರೇಂದ್ರ ಮೋದಿ ನಾಳೆ ದೇಶದ ಸೈನಿಕರ ಜೊತೆಗೆ ದೀಪಾವಳಿಯನ್ನು ಆಚರಿಸಲಿದ್ದಾರೆ. ಆದರೆ ಅದಕ್ಕೂ ಮುನ್ನ ಇಂದು ಅಯೋಧ್ಯೆಯಲ್ಲಿ ಬೆಳಕಿನ ಹಬ್ಬಕ್ಕೆ ಚಾಲನೆ ನೀಡುತ್ತಿದ್ದಾರೆ. ಅಲ್ಲಿ ನಡೆಯುವ ದಾಖಲೆಯ ದೀಪೋತ್ಸವ ಕಾರ್ಯಕ್ರಮಕ್ಕೆ ಸಾಕ್ಷಿಯಾಗುತ್ತಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಅಯೋಧ್ಯೆಯಲ್ಲಿ ವಿಶೇಷವಾಗಿ ದೀಪಾವಳಿಯನ್ನು ಉತ್ತರ ಪ್ರದೇಶ (Uttar Pradesh) ಸರ್ಕಾರ ಆಚರಿಸುತ್ತಿದೆ. ಸರಯೂ ನದಿ ನಟದಲ್ಲಿ 15 ಲಕ್ಷ ದೀಪಗಳನ್ನು ಹಚ್ಚುವ ಮೂಲಕ ಹೊಸ ಗಿನ್ನಿಸ್ ದಾಖಲೆ ಸೃಷ್ಟಿ ಮಾಡಲಾಗುತ್ತಿದೆ. ಈಗಾಗಲೇ ಗಿನ್ನಿಸ್ ರೆಕಾರ್ಡ್ ತಂಡ ಅಯೋಧ್ಯೆ ತಲುಪಿದ್ದು, ಹಣತೆಗಳ ಎಣಿಕೆ ಶುರು ಮಾಡಿದೆ. ಇಂದು ಸಂಜೆ ಈ ಎಲ್ಲ ದೀಪಗಳು ಬೆಳಗಲಿದ್ದು, ಬಳಿಕ ಅಯೋಧ್ಯೆಯಲ್ಲಿ ಹೊಸ ದಾಖಲೆ ಸೃಷ್ಟಿಯಾಲಿದೆ. ಇಂಥ ಅದ್ಭುತ ದೀಪೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಸಾಕ್ಷಿಯಾಗುತ್ತಿದ್ದಾರೆ.
Advertisement
Advertisement
ಇಂದು ಸಂಜೆ 5 ಗಂಟೆಗೆ ಉತ್ತರ ಪ್ರದೇಶದ ಅಯೋಧ್ಯಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ, ಸಂಜೆ 5.45ಕ್ಕೆ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ರಾಮ ಮಂದಿರ ನಿರ್ಮಾಣಾ ಕಾರ್ಯ ವೀಕ್ಷಿಸಿ, ಶ್ರೀರಾಮ ಕಥಾ ಪಾರ್ಕ್‍ನಲ್ಲಿ ಶ್ರೀರಾಮನಿಗೆ ಜರುಗಲಿರುವ ಸಾಂಕೇತಿಕ ರಾಜ್ಯಾಭಿಷೇಕದಲ್ಲಿ ಭಾಗಿಯಾಗಲಿದ್ದಾರೆ. ಸಂಜೆ 6.30ಕ್ಕೆ ಸರಯೂ ನದಿ ತೀರದ ಮಹಾ ಆರತಿಯಲ್ಲಿ ಪಾಲ್ಗೊಂಡು, ರಾಮ್ ಕಿ ಪೌಡಿಯಲ್ಲಿ ನಡೆಯಲಿರುವ 3-ಡಿ ‘ಹೊಲೊಗ್ರಾಫಿಕ್ ಪ್ರೊಜೆಕ್ಷನ್ ಮ್ಯಾಪಿಂಗ್ ಶೋ’ ಮತ್ತು ಮ್ಯೂಸಿಕಲ್ ಲೇಸರ್ ಶೋಗೆ ಸಾಕ್ಷಿಯಾಗಲಿದ್ದಾರೆ.
Advertisement
PM Modi will witness aarti at New Ghat, Saryu river, which will be followed by the kickstart of the grand Deepotsav celebrations by the Prime Minister: PMO
— ANI (@ANI) October 23, 2022
ಇನ್ನು ಇದೇ ವೇಳೆ ರಾಮಲಲ್ಲಾಗೆ ಸಂಬಂಧಿಸಿದ 11 ವಿವಿಧ ರಾಜ್ಯಗಳ ಸ್ತಬ್ಧ ಚಿತ್ರ ಪ್ರದರ್ಶನವಾಗಲಿದೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಪ್ರಧಾನಿ ಮೋದಿ ನಾಳೆ ಸೈನಿಕರ ಜೊತೆಗೆ ದೀಪಾವಳಿ ಆಚರಿಸಲಿದ್ದಾರೆ.