– ಸಹಿಸಲಾಗದೇ ಪತ್ನಿ ಸೀರೆಗೆ ಕೊರಳೊಡ್ಡಿ ಪತಿಯೂ ನೇಣಿಗೆ ಶರಣು
ಜೈಪುರ: ಕರ್ವಾ ಚೌತ್‌ನ ದಿನದಂದು ಪತಿ ಮನೆಗೆ ತಡವಾಗಿ ಬಂದ ಕಾರಣ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಯ ಸಾವನ್ನು ಸಹಿಸಲಾಗದೇ ಪತಿಯು ನೇಣಿಗೆ ಶರಣಾಗಿರುವ ಘಟನೆ ರಾಜಸ್ಥಾನದ (Rajasthan) ಜೈಪುರದ (Jaipur) ಹರ್ಮಡಾ ಪ್ರದೇಶದಲ್ಲಿ ನಡೆದಿದೆ.
ಮೃತ ದಂಪತಿಯನ್ನು ಮೋನಿಕಾ (35) ಹಾಗೂ ಘನಶ್ಯಾಮ್ ಬಂಕರ್ (38) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಜಾತ್ಯಾತೀತ ರಾಷ್ಟ್ರದಲ್ಲಿ ಜಾತಿ ಗಣತಿ ಯಾಕೆ? – ವಿಶ್ವಪ್ರಸನ್ನ ತೀರ್ಥ ಶ್ರೀ
ಪೊಲೀಸರ ಮಾಹಿತಿ ಪ್ರಕಾರ, ಅ.20 ರಂದು ಈ ಘಟನೆ ನಡೆದಿದೆ. ಕರ್ವಾ ಚೌತ್‌ನ ದಿನದಂದು ಪತಿ ಘನಶ್ಯಾಮ್ ಮನೆಗೆ ತಡವಾಗಿ ಬಂದಿದ್ದಾನೆ. ತಡವಾಗಿ ಬಂದಿದ್ದಕ್ಕೆ ಪತ್ನಿ ಮೋನಿಕಾ ಪತಿಯೊಂದಿಗೆ ಜಗಳವಾಡಿದ್ದಾಳೆ. ಜಗಳವಾಡಿದ ನಂತರ ಪತಿ ಆಕೆಯ ಮನವೊಲಿಸಲು ಪ್ರಯತ್ನಿಸಿದ್ದಾನೆ. ಅದ್ಯಾವುದಕ್ಕೂ ಬಗ್ಗದೇ ಅಲ್ಲಿಂದ ಹೊರಬಂದಿದ್ದಾಳೆ. ಹೊರಬಂದ ಪತ್ನಿ ವೇಗವಾಗಿ ಬರುತ್ತಿದ್ದ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇದನ್ನು ಕಂಡ ಆಕೆಯ ಪತಿ, ಪತ್ನಿಯ ಸಾವನ್ನು ಸಹಿಸಿಕೊಳ್ಳಲಾಗದೇ ಆಕೆಯ ಸೀರೆಯಿಂದಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.
ಆತ್ಮಹತ್ಯೆಗೆ ಶರಣಾಗುವ ಮುನ್ನ ಘನಶ್ಯಾಮ್ ತನ್ನ ಸಹೋದರನಿಗೆ `ಸಹೋದರ ನಾನು ಸೋತಿದ್ದೇನೆ, ಕ್ಷಮಿಸಿ. ನೀವು ಗಣಪತ್ ಜೀ ಹಾಗೂ ಘನಶ್ಯಾಮ್ ಕಂಡೇಲ್ ಅವರೊಂದಿಗೆ ಮಾತನಾಡಿ. ಅವರು ನಿಮಗೆ ಸಹಾಯ ಮಾಡುತ್ತಾರೆ. ನೀವು ಈಗ ನನ್ನ ಐಡಿಯಿಂದ ಕೆಲಸ ಮಾಡಬೇಕು ಎಂದು ತಿಳಿಸಿ ಕೊನೆಗೆ ನನ್ನ ಹೆಂಡತಿ ಬರುತ್ತಿರುವ ರೈಲಿನ ಎದುರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮಸೇಜ್‌ವೊಂದನ್ನು ಕಳುಹಿಸಿದ್ದಾನೆ.
ಘಟನೆಯ ಸಂಬಂಧ ಜೈಪುರ ಪೊಲೀಸ್ (Jaipur Police) ಅಧಿಕಾರಿಯೊಬ್ಬರು ಮಾತನಾಡಿ, ನೆಟ್‌ವರ್ಕ್ ಮಾರ್ಕೆಟಿಂಗ್ ಕಂಪನಿಯಲ್ಲಿ ಘನಶ್ಯಾಮ್ ಕೆಲಸ ಮಾಡುತ್ತಿದ್ದರು. ಅವರು ಕರ್ವಾ ಚೌತ್‌ನ ದಿನ ಮನೆಗೆ ತಡವಾಗಿ ಬಂದಿದ್ದರು. ಇದು ಅವರ ಮತ್ತು ಅವರ ಪತ್ನಿ ನಡುವೆ ಜಗಳಕ್ಕೆ ಕಾರಣವಾಯಿತು. ಇದರಿಂದ ಅವರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದು, ಬಳಿಕ ಘನಶ್ಯಾಮ್ ನೇಣಿಗೆ ಶರಣಾದರು ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಪಬ್ಲಿಕ್ ಟಿವಿಯ `ಬೆಳಕು’ ಇಂಪ್ಯಾಕ್ಟ್: ಜಂಗ್ಲಿ ಗ್ರಾಮದ ವಿದ್ಯಾರ್ಥಿಗಳಿಗೆ ಸ್ವಂತ ಹಣದಲ್ಲಿ ಬಸ್ ಕೊಡಿಸಿದ ರೆಡ್ಡಿ