ಮಡಿಕೇರಿ: ಕನ್ನಡ ರಾಜ್ಯೋತ್ಸವದ (Kannada Rajyotsava) ದಿನ ಕುಶಾಲನಗರದ ಚಿತ್ರಮಂದಿರವೊಂದರಲ್ಲಿ ತಮಿಳು ಸಿನಿಮಾ ಪ್ರದರ್ಶನ ಮಾಡಿದ್ದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಅಲ್ಲದೇ ಥಿಯೇಟರ್ ಮುಂದೆ ಪ್ರತಿಭಟನೆ ಕೂಡ ನಡೆಸಿವೆ.
ರಾಜ್ಯದ ಎಲ್ಲೆಡೆಯೂ ಇಂದು (ಬುಧವಾರ) 68ನೇ ಕರ್ನಾಟಕ ರಾಜ್ಯೋತ್ಸವನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಯಿತು. ರಾಜ್ಯದ ಅನೇಕ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳು ಪ್ರದರ್ಶನವಾಗುತ್ತಿವೆ. ಈ ನಡುವೆ ಕೊಡಗು (Kodagu) ಜಿಲ್ಲೆಯ ಕುಶಾಲನಗರದ ಚಿತ್ರಮಂದಿರದಲ್ಲಿ ವಿಜಯ್ ನಟನೆಯ ತಮಿಳಿನ ಲಿಯೋ ಚಿತ್ರ ಪ್ರದರ್ಶನವಾಗುತ್ತಿದ್ದ ಹಿನ್ನೆಲೆ ಕನ್ನಡಪರ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇದನ್ನೂ ಓದಿ: ಬೆಳಗಾವಿಯಲ್ಲಿ ರಾಜಕಾರಣವೇ ಇಲ್ಲ: ಜಾರ್ಜ್
Advertisement
Advertisement
ಚಿತ್ರಮಂದಿರ ಹಾಗೂ ಮಾಲೀಕನ ವಿರುದ್ಧ ಅಕ್ರೋಶ ವ್ಯಕ್ತಪಡಿಸಿ ಚಿತ್ರಮಂದಿರದ ಮಾಲೀಕರ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ವಿಜಯ್ ಭಾವಚಿತ್ರ ಇರುವ ಫ್ಲೆಕ್ಸ್‌ಗೆ ಮಸಿ ಬಳಿದು ಚಿತ್ರವನ್ನು ನಿಲ್ಲಿಸುವಂತೆ ಅಗ್ರಾಹಿಸಿದರು.
Advertisement
ಪ್ರತಿಭಟನೆ ಹೆಚ್ಚಾದ ಹಿನ್ನೆಲೆಯಲ್ಲಿ ಕುಶಾಲನಗರದ ನಗರಠಾಣೆಯ ಪೊಲೀಸರ ಚಿತ್ರಮಂದಿರಕ್ಕೆ ಅಗಮಿಸಿ, ಚಿತ್ರ ಪ್ರದರ್ಶನವಾಗುವ ಸಂದರ್ಭದಲ್ಲಿ ಪ್ರೇಕ್ಷಕರಿಗೆ ತೊಂದರೆ ಆಗದ ರೀತಿಯಲ್ಲಿ ಪ್ರತಿಭಟನೆ ಮಾಡಿ. ಚಿತ್ರಮಂದಿರದ ಮಾಲೀಕರನ್ನು ಕರೆಸುತ್ತೇವೆ. ನಿಮ್ಮ ಅಬಿಫ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳಿ ಎಂದು ಪ್ರತಿಭಟನಾಕಾರರ ಮನವೊಲಿಸಿದರು. ಇದನ್ನೂ ಓದಿ: ನಮ್ಮ ಬಸ್‌ಗೆ ಹಾನಿ ಮಾಡಿದವರ ಮೇಲೆ ಕ್ರಮ, ಮಹಾರಾಷ್ಟ್ರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇವೆ: ರಾಮಲಿಂಗಾರೆಡ್ಡಿ
Advertisement
ಕುಶಾಲನಗರ ನಗರ ಠಾಣೆಯ ಪೊಲೀಸ್ ಅಧಿಕಾರಿ ಚಂದ್ರಶೇಖರ್ ಮನವಿ ಮಾಡಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಚಿತ್ರಮಂದಿರ ಹೊರಗೆ ಪ್ರತಿಭಟನೆ ನಡೆಸಿದರು.
Web Stories