ಜನ್ಮದಿನದ ಶುಭಾಶಯ ಕೋರಿ ವಿಶೇಷ ಫೋಟೋ ಹಂಚಿಕೊಂಡ ಸ್ಮೃತಿ ಇರಾನಿ ಪತಿ

Public TV
1 Min Read
Smriti Irani a

– ಅಮೇಥಿಯಲ್ಲಿ ಗೆದ್ದು ಬನ್ನಿ ಎಂದ್ರು ಮೋದಿ

ನವದೆಹಲಿ: 43ನೇ ವಸಂತಕ್ಕೆ ಕಾಲಿಟ್ಟ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಪತಿ ಝುಬಿನ್ ಇರಾನಿ ಜನ್ಮದಿನದ ಶುಭಾಶಯ ಕೋರಿ ಪತ್ನಿಯೊಂದಿಗಿನ ವಿಶೇಷ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಪೋಸ್ಟ್ ಮಾಡಿರುವ ಇರಾನಿ ಅವರು, ನಾನು ನಿನ್ನನ್ನು ಮದುವೆಯಾದ ದಿನ ಭಾರೀ ಸಾಲವನ್ನ ಮಾಡಿದೆ. ಈ ವೇಳೆ ನನಗೆ ಅಪರಿಮಿತ ಪ್ರೀತಿ, ಎಂದಿಗೂ ಅಂತ್ಯವಾಗದ ಬದ್ಧತೆ ಲಭಿಸಿತ್ತು. ನಾನು ಕೊಟ್ಟ ಮಾತಿನಂತೆ ನನ್ನ ಕೊನೆಯ ಉಸಿರಿರುವ ತನಕ ಈ ಸಾಲವನ್ನ ಮರುಪಾವತಿಸುತ್ತೇನೆ ಎಂದು ಪ್ರೀತಿಯ ಪತ್ನಿಗೆ ಸಂದೇಶ ರವಾನಿಸಿದ್ದಾರೆ.

https://www.instagram.com/p/BvVcgSunOdb/

2019 ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರ ವಿರುದ್ಧ ಸ್ಪರ್ಧೆಗಿಳಿದಿರುವ ಸ್ಮೃತಿ ಇರಾನಿ ಅವರಿಗೆ ಪ್ರಧಾನಿ ಮೋದಿ ಸೇರಿದಂತೆ, ಬಿಜೆಪಿಯ ಹಲವು ನಾಯಕರು ಶುಭಾಶಯ ತಿಳಿಸಿದ್ದಾರೆ.

ಗೆದ್ದು ಬನ್ನಿ: ಸ್ಮೃತಿ ಇರಾನಿ ಅವರಿಗೆ ಜನ್ಮದಿನದ ಶುಭಾಶಯಗಳು. ಸರ್ಕಾರದಲ್ಲಿ ಒಳ್ಳೆಯ ಯೋಜನೆಗಳನ್ನು ಜಾರಿಗೊಳಿಸಲು ಸಾಕಷ್ಟು ಕೆಲಸ ಮಾಡಿದ್ದೀರಿ. ದೇವರು ನಿಮಗೆ ದೀರ್ಘಾಯಸ್ಸು ಹಾಗು ಉತ್ತಮ ಆರೋಗ್ಯ ನೀಡಲಿ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬನ್ನಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಸ್ಮೃತಿ ಇರಾನಿ ಸ್ಪರ್ಧೆ ಮಾಡಿದ್ದರು. 2014ರಲ್ಲಿ ಅಮೇಥಿ ಕ್ಷೇತ್ರ ಇಡೀ ದೇಶದ ಗಮನವನ್ನ ಸೆಳೆದಿತ್ತು. 1998ರಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿ ಸಂಜಯ್ ಸಿಂಗ್ ಗೆಲುವು ಸಾಧಿಸಿದ್ದರು. ತದನಂತರ ಎದುರಾದ ಎಲ್ಲ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಜಯಭೇರಿ ಸಾಧಿಸಿದೆ. ಸ್ಮೃತಿ ಇರಾನಿ ಅವರು 2014ರ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರಿಗೆ ತೀವ್ರ ಪೈಪೋಟಿಯನ್ನು ನೀಡಿದ್ದರು. ರಾಹುಲ್ ಗಾಂಧಿ 4,08,651 ಮತಗಳನ್ನು ಪಡೆದ್ರೆ ಸ್ಮೃತಿ ಇರಾನಿ 3,00,748 ಮತ ಪಡೆಯುವ ಮೂಲಕ ಸೋಲು ಕಂಡಿದ್ದರು.

https://www.instagram.com/p/BpEI1HonGsg/

https://www.instagram.com/p/BpyFMJOnyYD/

https://www.instagram.com/p/BTrQID2h6jq/

Share This Article
Leave a Comment

Leave a Reply

Your email address will not be published. Required fields are marked *