ಕಲಬುರಗಿ: ಇಲ್ಲಿನ ತಾಲೂಕ ಪಂಚಾಯತ್ ಕಚೇರಿ ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ (job Fair) 189 ಜನರಿಗೆ ಸ್ಥಳದಲ್ಲಿಯೇ ನೇಮಕಾತಿ ಆದೇಶ ನೀಡಲಾಯಿತು.
ಕಲಬುರಗಿ, ಬೆಂಗಳೂರು (Bengaluru), ಹೈದರಾಬಾದ್, ಪುಣೆ ಮೂಲದ ಸುಮಾರು 30 ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದವು, 1,349 ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದರು. ಸ್ಥಳದಲ್ಲಿಯೇ 189 ಜನರು ನೇಮಕವಾಗಿದ್ದು, ಉಳಿದಂತೆ 300 ಅಭ್ಯರ್ಥಿಗಳನ್ನು ಕಂಪನಿಗಳು (Private Company) ಶಾರ್ಟ್ ಲಿಸ್ಟ್ ಮಾಡಿದ್ದು, ಮುಂದೆ ಅವರನ್ನು ಸಂಪರ್ಕಿಸಿ ಅಂತಿಮ ಹಂತದ ಸಂದರ್ಶನ ನಡೆಸಿ ನೇಮಕಾತಿ ಮಾಡಲಾಗುವುದೆಂದು ತಿಳಿಸಿವೆ. ಇದನ್ನೂ ಓದಿ: ವರ್ತೂರ್ ಪ್ರಕಾಶ್ ಹೆಸರಲ್ಲಿ ಶ್ವೇತಾಗೌಡ ವಂಚನೆ ಕೇಸ್ – 2.1 ಕೆಜಿ ಚಿನ್ನಾಭರಣದ ಮೂಲ ಪತ್ತೆ
Advertisement
Advertisement
ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕಲಬುರಗಿ ಜಿಲ್ಲಾ ಪಂಚಾಯತ್ ಹಾಗೂ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಇವರ ಸಹಯೋಗದಲ್ಲಿ ನಡೆದ ಬೃಹತ್ ಉದ್ಯೋಗ ಮೇಳವನ್ನು ಜಿಲ್ಲಾ ಪಂಚಾಯ್ ಸಿಇಓ ಭಂವರ್ ಸಿಂಗ್ ಮೀನಾ ಉದ್ಘಾಟಿಸಿದರು.
Advertisement
ಈ ಸಂದರ್ಭದಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಿರುದ್ಯೋಗ ಯುವಕ- ಯುವತಿಯರನ್ನು ಉದ್ಯೋಗ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಈ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಮೇಳದಲ್ಲಿ ಸುಮಾರು 30 ಕಂಪನಿಗಳು ಭಾಗವಹಿಸಿ, ಉದ್ಯೋಗಾಕಾಂಕ್ಷಿಗಳಿಗೆ ಸಂದರ್ಶನ ನಡೆಸಿದ್ದಾರೆ. ಉದ್ಯೋಗ ಪಡೆದುಕೊಂಡವರು ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಬೇಕೆಂದು ಕರೆ ನೀಡಿದ ಅವರು, ಸಾಂಕೇತಿಕವಾಗಿ 5 ಜನ ಯುವಕ-ಯುವತಿಯರಿಗೆ ಉದ್ಯೋಗದ ಆದೇಶ ಪತ್ರ ನೀಡಿದರು. ಇದನ್ನೂ ಓದಿ: Champions Trophy | ಯಾವ ವರ್ಷ – ಯಾರು ಚಾಂಪಿಯನ್ಸ್? – ಭಾರತ ಕೊನೇ ಬಾರಿ ಟ್ರೋಫಿ ಗೆದ್ದಿದ್ದು ಯಾವಾಗ?
Advertisement
ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಜಗದೇವಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯತ್ ಇಓ ಎಂ.ಡಿ ಸೈಯದ್ ಪಟೇಲ್, ಸ್ಟೇಟ್ ಬ್ಯಾಂಕ್ ಇಂಡಿಯಾದ ಕಲಬುರಗಿ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಕೇಂದ್ರದ ನಿರ್ದೇಶಕ ನಂದಕಿಶೋರ ಸೇರಿದಂತೆ ಅನೇಕರು ಇದ್ದರು. ಜಿಲ್ಲಾ ಪಂಚಾಯತಿಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಲೋಹಿತ್ ಕುಮಾರ್ ನಿರೂಪಿಸಿದರೆ ಅರುಣ್ ಕುಮಾರ್ ವಂದಿಸಿದರು. ಇದನ್ನೂ ಓದಿ: ಸಿಎಂ ಬದಲಾವಣೆ ವಿಚಾರ ಹೈಕಮಾಂಡ್‌ಗೆ ಬಿಟ್ಟದ್ದು: ಬಿ.ಕೆ ಹರಿಪ್ರಸಾದ್