ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮನೆಯಲ್ಲಿ ಮಣಿಪುರದ ರಾಜಕಾರಣಿಗಳ ಗುಂಪೊಂದು ತಮ್ಮ ಶೂಗಳನ್ನು ತೆಗೆಯುವಂತೆ ಒತ್ತಾಯಿಸಲಾಗಿತ್ತು ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆರೋಪಕ್ಕೆ ಆಡಳಿತಾರೂಢ ಬಿಜೆಪಿಯಿಂದ ಆಕ್ರೋಶ ವ್ಯಕ್ತವಾಯಿತು.
ಸರ್ಕಾರದ ನೀತಿಗಳ ಕುರಿತು ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡುವಾಗ ಕಾಂಗ್ರೆಸ್ ನಾಯಕರು ಸಂಸತ್ತಿನಲ್ಲಿ ಈ ಗಂಭೀರ ಆರೋಪ ಮಾಡಿದರು. ಇದನ್ನೂ ಓದಿ: ಯುಪಿ ಚುನಾವಣೆಯಲ್ಲಿ ಅಖಿಲೇಶ್ ಯಾದವ್‍ರನ್ನು ನಾವು ಬೆಂಬಲಿಸುತ್ತೇವೆ: ಮಮತಾ ಬ್ಯಾನರ್ಜಿ
Advertisement
Advertisement
ಅಮಿತ್ ಶಾ ಅವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಭಾಷಣ ಮಾಡಿದ ರಾಹುಲ್ ಗಾಂಧಿ ಅವರು, ಗೃಹ ಸಚಿವರು ಕ್ಷಮೆಯಾಚಿಸಬೇಕು. ಕೆಲವು ದಿನಗಳ ಹಿಂದೆ ಮಣಿಪುರದಿಂದ ಕೆಲವು ರಾಜಕೀಯ ನಾಯಕರು ನನ್ನ ಬಳಿಗೆ ಬಂದರು. ಅವರು ತುಂಬಾ ಉದ್ರೇಕಗೊಂಡಿದ್ದರು. ಮಣಿಪುರದ ರಾಜಕಾರಣಿಗಳ ನಿಯೋಗವು ಗೃಹ ಸಚಿವರನ್ನು ನೋಡಲು ಹೋಗಿತ್ತು. ಅವರ ಮನೆಯ ಹೊರಗೆ ರಾಜಕಾರಣಿಗಳ ಬೂಟುಗಳನ್ನು ತೆಗೆಯುವಂತೆ ಒತ್ತಾಯಿಸಿದ್ದರು. ಆದರೆ ಮನೆಯೊಳಗಡೆ ಗೃಹ ಸಚಿವರು ಚಪ್ಪಲಿ ಧರಿಸಿದ್ದನ್ನು ಕಂಡಿದ್ದೆವು ಎಂದು ರಾಜಕಾರಣಿಗಳು ದೂರಿದ್ದಾರೆ ಎಂದು ರಾಹುಲ್ ಗಾಂಧಿ ತಿಳಿಸಿದ್ದರು.
Advertisement
Advertisement
ಏನಿದರ ಅರ್ಥ? ಗೃಹ ಸಚಿವರು ತಮ್ಮ ಮನೆಯಲ್ಲಿ ಚಪ್ಪಲಿ ಧರಿಸಬಹುದು. ಆದರೆ ಅವರನ್ನು ಭೇಟಿಯಾಗಲು ಹೋದವರು ಮಾತ್ರ ಧರಿಸಬಾರದು ಎಂದರೆ ಅರ್ಥವೇನು? ಇದು ಭಾರತದ ಜನರೊಂದಿಗೆ ವ್ಯವಹರಿಸುವ ಮಾರ್ಗವಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದ್ದರು. ಇದನ್ನೂ ಓದಿ: ಬೆಂಗಳೂರು ಜನತೆಗೆ ಮತ್ತೊಂದು ಶಾಕ್ ಕೊಟ್ಟ BBMP!
ರಾಹುಲ್ ಗಾಂಧಿ ಅವರ ಈ ಆರೋಪವನ್ನು ಬಿಜೆಪಿ ಸಂಸದರು ಅಲ್ಲಗಳೆದು, ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.