ಕೋಲ್ಕತ್ತಾ: ತಾಯಂದಿರ ದಿನದ (Mother’s Day) ಸಂದರ್ಭದಲ್ಲಿ, ಪಶ್ಚಿಮ ಬಂಗಾಳದ (West Bengal) ಹೂಗ್ಲಿಯಲ್ಲಿ ನಡೆದ ಚುನಾವಣಾ ರ‍್ಯಾಲಿ ವೇಳೆ ಪ್ರಧಾನಿ ನರೇಂದ್ರ ಮೋದಿಯವರಿಗೆ (Narendra Modi) ಇಬ್ಬರು ಯುವಕರು ಮೋದಿಯವರ ತಾಯಿ ದಿ.ಹೀರಾಬೆನ್ (Heeraben Modi) ಅವರ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ.
ಉಡುಗೊರೆ ಸ್ವೀಕರಿಸಿದ ಮೋದಿ ಯುವಕನಿಗೆ ಧನ್ಯವಾದ ಹೇಳಿದ್ದಾರೆ. ಬಳಿಕ ಮಾತನಾಡಿದ ಅವರು, ಪಾಶ್ಚಿಮಾತ್ಯ ಜಗತ್ತು ಇಂದು ತಾಯಂದಿರ ದಿನವನ್ನು ಆಚರಿಸುತ್ತಿದೆ. ನಾವು ಭಾರತದಲ್ಲಿ ತಾಯಿ, ಕಾಳಿ ದೇವತೆ, ದುರ್ಗಾ ದೇವತೆ ಮತ್ತು ತಾಯಿ ಭಾರತಕ್ಕಾಗಿ ವರ್ಷವಿಡೀ ಪ್ರಾರ್ಥಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ‘ಲೋಕ’ ಚುನಾವಣೆಯಲ್ಲಿ ಎಎಪಿ ಗೆದ್ದರೆ ವಿದ್ಯುತ್, ಆರೋಗ್ಯ ಸೇವೆ ಉಚಿತ – 10 ಗ್ಯಾರಂಟಿ ಘೋಷಿಸಿದ ಕೇಜ್ರಿವಾಲ್
ಯುವಕ ನೀಡಿದ ಒಂದು ಚಿತ್ರದಲ್ಲಿ, ಮೋದಿ ನೆಲದ ಮೇಲೆ ಕುಳಿತು ತಾಯಿಯ ಕಾಲ್ಗಳ ಮೇಲೆ ಕೈ ಇಟ್ಟುಕೊಂಡು ಮಾತನಾಡುತ್ತಿರುವ ರೀತಿಯಲ್ಲಿದೆ. ಇನ್ನೊಂದು ಚಿತ್ರದಲ್ಲಿ ತಾಯಿ ಮೋದಿಯವರ ಭುಜದ ಮೇಲೆ ಕೈ ಇರಿಸಿ ನಗುತ್ತಿರುವ ರೀತಿಯಲ್ಲಿದೆ.
ಹೀರಾಬೆನ್ ಅವರು ಗುಜರಾತ್‍ನ ಅಹಮದಾಬಾದ್‍ನಲ್ಲಿ 2022ರ ಡಿ.30 ರಂದು ನಿಧನರಾದರು. ಇತ್ತೀಚೆಗೆ, ಮೂರನೇ ಹಂತದ ಚುನಾವಣೆಯಲ್ಲಿ ಅಹಮದಾಬಾದ್ ಮತಗಟ್ಟೆಯಿಂದ ಮತ ಚಲಾಯಿಸಿದ ಬಳಿಕ ಮೋದಿಯವರು ತಮ್ಮ ದಿವಂಗತ ತಾಯಿಯನ್ನು ನೆನಪಿಸಿಕೊಂಡಿದ್ದರು. ಇದನ್ನೂ ಓದಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉದ್ವಿಗ್ನ – ಪ್ರತಿಭಟನಾಕಾರರು, ಪೊಲೀಸರ ನಡುವೆ ಘರ್ಷಣೆ