ಕಾನೂನಿಗಿಂತ ಧರ್ಮ ದೊಡ್ಡದಲ್ಲ ಎಂಬುದನ್ನು ಮುಸ್ಲಿಮರು ಅರಿಯಬೇಕು: ರಾಜ್‌ ಠಾಕ್ರೆ

Public TV
1 Min Read
Raj Thackeray

ಮುಂಬೈ: ಶಿವಸೇನೆ ಸೇನೆ ನಾಯಕ ಸಂಜಯ್ ರಾವತ್ ಅವರ ಆರೋಪಕ್ಕೆ ಕಿಡಿಕಾರಿರುವ ಎಂಎನ್‌ಎಸ್ ನಾಯಕ ರಾಜ್ ಠಾಕ್ರೆ ಅವರು, ಕಾನೂನಿಗಿಂತ ಧರ್ಮ ದೊಡ್ಡದಲ್ಲ ಎಂಬುದನ್ನು ಮುಸ್ಲಿಮರು ಅರ್ಥಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ನಮಗೆ ಮಹಾರಾಷ್ಟ್ರದಲ್ಲಿ ಗಲಭೆ ಬೇಡ. ಪ್ರಾರ್ಥನೆ ಸಲ್ಲಿಸುವುದನ್ನು ಯಾರೂ ವಿರೋಧಿಸುವುದಿಲ್ಲ. ಆದರೆ ಮುಸ್ಲಿಮರು ಇದನ್ನು ಧ್ವನಿವರ್ಧಕಗಳಲ್ಲಿ ಮಾಡಿದರೆ, ನಾವೂ ಪ್ರತಿಯಾಗಿ ಧ್ವನಿವರ್ಧಕಗಳನ್ನು ಬಳಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೇಶದಲ್ಲಿ ಹಿಜಬ್‌ಗೆ ಯಾವುದೇ ನಿಷೇಧವಿಲ್ಲ: ಕೇಂದ್ರ ಸಚಿವ ಮುಖ್ತರ್‌ ಅಬ್ಬಾಸ್‌

Raj Thackeray

ಕಾನೂನಿಗಿಂತ ಧರ್ಮ ದೊಡ್ಡದಲ್ಲ ಎಂಬುದನ್ನು ಮುಸ್ಲಿಮರು ಅರ್ಥಮಾಡಿಕೊಳ್ಳಬೇಕು. ಮೇ 3ರ ನಂತರ ಏನು ಮಾಡಬೇಕೆಂದು ನಾನು ನೋಡುತ್ತೇನೆ. ಅಷ್ಟರಲ್ಲಿ ಧ್ವನಿವರ್ಧಕಗಳನ್ನು ನಿಷೇಧಿಸದೇ ಇದ್ದರೆ ನಮ್ಮ ಪಕ್ಷವು ಮಸೀದಿಗಳ ಮುಂದೆ ಹನುಮಾನ್ ಚಾಲೀಸಾ ಪಠಿಸಬೇಕಾಗುತ್ತದೆ ಎಂದು ಗುಡುಗಿದ್ದಾರೆ.

ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಅವರು ಮಸೀದಿಗಳಲ್ಲಿ ಧ್ವನಿವರ್ಧಕಗಳ ಮೇಲೆ ನಿಷೇಧ ಹೇರಲು ಒತ್ತಾಯಿಸುತ್ತಿರುವಂತೆಯೇ, ಅವರನ್ನು ಆಡಳಿತ ಪಕ್ಷವಾಗಿರುವ ಶಿವಸೇನೆ ಹಿಂದೂ ಓವೈಸಿ ಎಂದು ಕರೆದಿದ್ದು, ಹೊಸ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಹನುಮಾನ್ ಮೆರವಣಿಗೆಗೆ ಪುಷ್ಪವೃಷ್ಟಿ ಸುರಿಸಿದ ಮುಸ್ಲಿಮರು

`ಮಹಾರಾಷ್ಟ್ರದಲ್ಲಿ ಶಾಂತಿಗೆ ಧಕ್ಕೆ ತರುವ ಪ್ರಯತ್ನಗಳು ನಡೆದಿವೆ. ಆದರೆ ಇಲ್ಲಿನ ಜನರು ಮತ್ತು ಪೊಲೀಸರು ಶಾಂತಿ ಕಾಪಾಡಿದ್ದಾರೆ. ಆದರೆ ಹಿಂದೂ ಓವೈಸಿಯಂಥವರು (ರಾಜ್ ಠಾಕ್ರೆ) ರಾಮ-ಹನುಮನ ಹೆಸರಿನಲ್ಲಿ ಗಲಭೆ ಎಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ನಾವು ಅವಕಾಶ ನೀಡುವುದಿಲ್ಲ’ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಪ್ರತಿಕ್ರಿಯಿಸಿದ್ದರು.

`ನಾನು ಯಾರ ಹೆಸರನ್ನೂ ತೆಗೆದುಕೊಂಡಿಲ್ಲ. ಯುಪಿ ಚುನಾವಣೆಯಲ್ಲಿ ಗೆಲ್ಲಲು ಎಐಎಂಐಎಂನ ಓವೈಸಿ ಬಿಜೆಪಿಗೆ ಮಾಡಿದ ಕೆಲಸವನ್ನೇ ಮಹಾರಾಷ್ಟ್ರದ ಹೊಸ ಹಿಂದೂ ಓವೈಸಿಯಿಂದ ಬಿಜೆಪಿ ಕೇಳುತ್ತಿದೆ’ ಎಂದು ರಾವುತ್ ಕಿಡಿಕಾರಿದ್ದರು.

Share This Article
Leave a Comment

Leave a Reply

Your email address will not be published. Required fields are marked *