ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ರಘುಬರ್‍ದಾಸ್ ಗುರುವಾರ ರಾತ್ರಿ ಹೆಲ್ಮೆಟ್ ಧರಿಸದೆ ಸ್ಕೂಟಿ ರೈಡ್ ಮಾಡಿರುವ ವಿಡಿಯೋ ವೈರಲ್ ಆಗಿದೆ.
ದೀಪಾವಳಿಯ ಪ್ರಯುಕ್ತ ಸಿಎಂ ರಘುಬರ್‍ದಾಸ್ ಅವರು ತಮ್ಮ ಅಭಿಮಾನಿಗಳೊಂದಿಗೆ ನಗರದಲ್ಲಿ ಸ್ಕೂಟಿ ರೈಡ್ ಮಾಡಿದ್ದು, ಈ ವೇಳೆ ಹೆಲ್ಮೆಟ್ ಧರಿಸಿರಲಿಲ್ಲ. ದೀಪಾಳಿಯ ಶುಭಾಶಯಗಳನ್ನು ತಿಳಿಸಿದ್ದ ಅವರು ಪೂಜೆ ಮಾಡುತ್ತಿರುವ ಫೋಟೋವನ್ನ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದರು. ರಘುಬರ್‍ದಾಸ್ ಅವರು ಹೆಲ್ಮೆಟ್ ಇಲ್ಲದೆ ಸ್ಕೂಟಿ ರೈಡ್ ಮಾಡುತ್ತಿರುವ ವಿಡಿಯೋವನ್ನು ಸುದ್ದಿ ಸಂಸ್ಥೆ ಬಿಡುಗಡೆ ಮಾಡಿದೆ.
- Advertisement
ಸಿಎಂ ಸ್ಕೂಟಿ ರೈಡ್ ವಿಕ್ಷೀಸಿರುವ ಹಲವರು ಹೆಲ್ಮೆಟ್ ಇಲ್ಲದೆ ಸ್ಕೂಟಿ ರೈಡ್ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರಾದ ಸುಬೋಧ್ ಕಾಂತ್ ಸಹಯ್ ಅವರು ಹೆಲ್ಮೆಟ್ ಧರಿಸದೆ ಸ್ಕೂಟಿ ಚಾಲನೆ ಮಾಡಿದ್ದಕ್ಕೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಕೋರಿದ್ದು, ಮುಖ್ಯಮಂತ್ರಿಗಳು ಹೇಳುವ ಮಾತುಗಳು ಹಾಗೂ ಮಾಡುವ ಕಾರ್ಯಗಳಲ್ಲಿ ಯಾವುದೇ ಸಾಮ್ಯತೆ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.
- Advertisement
ವಿಡಿಯೋದಲ್ಲಿ ಸಿಎಂ ರಘುಬರ್‍ದಾಸ್ ಅವರು ತಮ್ಮ ಬೆಂಬಲಿಗರೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚಾರವನ್ನು ನಡೆಸಿದ್ದಾರೆ. ಈ ಹಿಂದೆಯು ಗುರುಪುರ್ಣಿಮಾ ಹಬ್ಬದ ಪ್ರಯುಕ್ತ ಇಬ್ಬರು ಮಹಿಳೆಯರು ಸಿಎಂ ರಘುಬರ್‍ದಾಸ್ ಅವರ ಕಾಲುಗಳನ್ನು ತೊಳೆದು ಪಾದ ಪೂಜೆ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು.
2014ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಆಲ್ ಜಾರ್ಖಂಡ್ ಸ್ಟೂಡೆಂಟ್ ಯುನಿಯನ್(ಎಜೆಎಸ್‍ಯು) ಪಕ್ಷಗಳು ಚುನಾವಣೆ ಗೆದ್ದ ಬಳಿಕ ಜಾರ್ಖಂಡ್‍ನ ಬುಡಕಟ್ಟು ಜನಾಂಗದವರಲ್ಲದ ಮೊದಲ ಸಿಎಂ ಆಗಿ ರಘುಬರ್ ದಾಸ್ ಅಧಿಕಾರ ಸ್ವೀಕರಿಸಿದ್ದರು.