ಮೈಸೂರು: ಸರ್ಕಾರ ಹಾಗೂ ನೌಕರರ ನಡುವಿನ ಜಟಾಪಟಿಯಿಂದ ನಾಡ ದೇವತೆ ಚಾಮುಂಡೇಶ್ವರಿ ಭಕ್ತರಿಗೆ ಸಂಕಷ್ಟ ಸೃಷ್ಟಿಯಾಗುವ ಸಾಧ್ಯತೆ ಇದೆ.
ಚಾಮುಂಡೇಶ್ವರಿ ದೇಗುಲದಲ್ಲಿನ ನೌಕರರು ಪ್ರತಿಭಟನೆಗೆ ಮುಂದಾಗಿದ್ದು ಡಿಸೆಂಬರ್ 14ರಂದು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಕರ್ತವ್ಯ ಸ್ಥಗಿತಗೊಳಿಸಲು ಮುಂದಾಗಿದ್ದಾರೆ. ಪುರೋಹಿತರು ಮತ್ತು ದೇವಾಲಯದ ಇತರೆ ನೌಕರರಿಂದ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದೆ. ಹೀಗಾಗಿ ಡಿಸೆಂಬರ್ 14ರ ನಂತರ ಧಾರ್ಮಿಕ ಕೈಂಕರ್ಯಗಳಿಗೆ ತೊಂದರೆ ಆಗಲಿದೆ.
ಶ್ರೀ ಚಾಮುಂಡೇಶ್ವರಿ ಸಮೂಹ ದೇವಾಲಯಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ 183 ನೌಕರರೂ ಕರ್ತವ್ಯ ಬಹಿಷ್ಕಾರಕ್ಕೆ ನಿರ್ಧಾರ ಮಾಡಿದ್ದಾರೆ. 6ನೇ ವೇತನ ಆಯೋಗದ ನಿಯಮಾನುಸಾರ, ಶೇ.30ರಷ್ಟು ವೇತನ ಹೆಚ್ಚಿಸಬೇಕು. ಹೆಚ್ಚುವರಿ ತುಟ್ಟಿಭತ್ಯೆ ಮಂಜೂರು ಮಾಡಿಕೊಳ್ಳಲು ಖಾಯಂ ಆದೇಶ ನೀಡಬೇಕು. ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದರೂ ಸುಮಾರು 70ಕ್ಕೂ ಹೆಚ್ಚು ನೌಕರರನ್ನು ಖಾಯಂ ಮಾಡಿಕೊಳ್ಳಬೇಕು ಎಂದು ನೌಕರರು ಬೇಡಿಕೆ ಇಟ್ಟಿದ್ದಾರೆ.
ಒಂದು ವೇಳೆ ಈ ಬೇಡಿಕೆಯನ್ನು ಈಡೇರಿಸದೇ ಇದ್ದರೆ ಡಿಸೆಂಬರ್ 14 ರಂದು ದೇವಾಲಯದಲ್ಲಿ ಪೂಜೆಯನ್ನು ಸ್ಥಗಿತಗೊಳಿಸಲು ಅರ್ಚಕರು ನಿರ್ಧರಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv