ಕಾರು ಚಾಲಕಿಯ ಹುಚ್ಚಾಟ – ನಿಂತಿದ್ದ ಕಾರಿಗೆ ಐದು ಬಾರಿ ಡಿಕ್ಕಿ :ವಿಡಿಯೋ ನೋಡಿ

Public TV
1 Min Read
4dc6c52c28471c344fcb5e59ac4b4112

ಮುಂಬೈ: ಗೇಟಿನ ಬಳಿ ನಿಂತಿದ್ದ ಕಾರಿಗೆ ಮಹಿಳಾ ಚಾಲಕಿಯೊಬ್ಬಳು ತನ್ನ ಕಾರಿನಿಂದ ಐದು ಬಾರಿ ಡಿಕ್ಕಿ ಹೊಡೆದು ಜಖಂ ಮಾಡಿರುವ ಘಟನೆ ಮುಂಬೈನ ಪುಣೆಯಲ್ಲಿ ನಡೆದಿದೆ.

ಮನೆಯ ಗೇಟ್‍ವೊಂದರ ಬಳಿ ನಿಲ್ಲಿಸಿದ್ದ ಇಂಡಿಕಾ ಕಾರಿಗೆ ಡಸ್ಟರ್ ಕಾರಿನಲ್ಲಿ ಬಂದ ಮಹಿಳೆಯೊಬ್ಬರು ಐದು ಬಾರಿ ಡಿಕ್ಕಿ ಹೊಡೆದಿರುವ ದೃಶ್ಯ ಸ್ಥಳದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಮಹಿಳೆ ಈ ರೀತಿ ಏಕೆ ಮಾಡಿದ್ದಾರೆ ಎಂದು ತಿಳಿದುಬಂದಿಲ್ಲ.

ಈ ಘಟನೆ ಸಾರ್ವಜನಿಕರ ಎದುರೇ ನಡೆದಿದ್ದು, ನಿಂತಿದ್ದ ಕಾರಿಗೆ ಮೊದಲು ಹಿಂಬದಿಯಿಂದ ಮಹಿಳೆ ಕಾರಿನಲ್ಲಿ ಡಿಕ್ಕಿ ಹೊಡೆಸುತ್ತಾರೆ. ಆ ಬಳಿಕ ಮತ್ತೆ ವಾಪಸ್ ತಿರುಗಿಸಿಕೊಂಡು ಮುಂದಿನಿಂದಲೂ ಡಿಕ್ಕಿ ಹೊಡೆಯುತ್ತದೆ. ಹೀಗೆ ಜನರ ಮುಂದೆಯೇ ಒಂದು ಕಾರಿಗೆ ಐದು ಬಾರಿ ಡಿಕ್ಕಿ ಹೊಡೆದು ನಂತರ ವೇಗವಾಗಿ ಕಾರು ಚಲಾಯಿಸಿಕೊಂಡು ಸ್ಥಳದಿಂದ ಪರಾರಿಯಾಗುತ್ತಾರೆ. ಈ ಎಲ್ಲ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಈ ವಿಚಾರದ ಬಗ್ಗೆ ಮಾತನಾಡಿರುವ ಪುಣೆಯ ಹೆಚ್ಚುವರಿ ಪೊಲೀಸ್ ಆಯುಕ್ತ ಪಿಂಪ್ರಿ ಚಿಂಚವಾಡ್, ಈ ಕಾರು ಸೇರಿ ರಾಮ್‍ನಗರ ಪ್ರದೇಶದಲ್ಲಿ ಇನ್ನೂ ಮೂರು ಕಾರುಗಳನ್ನು ಜಖಂಗೊಳಿಸಿದ್ದಾರೆ. ಕಾರಿನ ಚಲಾಕಿ ವಿರುದ್ಧ ಪ್ರಕರಣವನ್ನು ನೋಂದಾಯಿಸಲಾಗಿದೆ, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *