ನವದೆಹಲಿ: ಜಮೀನು ವಿವಾದದ ವಿಚಾರವಾಗಿ ಹರಿಯಾಣದ (Congress) ಫರಿದಾಬಾದ್‍ನಲ್ಲಿ ಕಾಂಗ್ರೆಸ್ (Congress) ಮುಖಂಡರೊಬ್ಬರ ಸಹೋದರನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಹತ್ಯೆಗೀಡಾದ ವ್ಯಕ್ತಿಯನ್ನು ಕುನಾಲ್ ಭದನಾ ಎಂದು ಗುರುತಿಸಲಾಗಿದೆ. ಮಸೀದಿ ಚೌಕ್ ಬಳಿ ಕುನಾಲ್ ನಿಂತಿದ್ದಾಗ ದುಷ್ಕರ್ಮಿಗಳು ಅವರ ಸಮೀಪ ಬಂದು ಗಲಾಟೆ ಮಾಡಿದ್ದಾರೆ. ಬಳಿಕ ಅವರನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಹತ್ಯೆಗೈದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿಗೆ ತಲೆಬಾಗಿ ನಮಿಸಿದ್ದು ಸರಿಯಲ್ಲ- ಸ್ಪೀಕರ್ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ಕುನಾಲ್ ಸ್ಥಳೀಯ ಕಾಂಗ್ರೆಸ್ ನಾಯಕ ಜ್ಯೋತೇಂದರ್ ಭದಾನ ಅವರ ಸಹೋದರ. ವಿಜಯ್ ಎಂಬ ವ್ಯಕ್ತಿಯೊಂದಿಗೆ ಫೋನ್‍ನಲ್ಲಿ ಕೆಲವು ವಿಷಯದ ಕುರಿತು ಅವರು ಮಾತನಾಡಿದ್ದಾರೆ. ನಂತರ ವಿಜಯ್ ಅವರ ಸಹೋದರ ಬಿಲ್ಲು ಮತ್ತು ಇತರ ಇಬ್ಬರು ಸಹಚರರು ಅವರನ್ನು ಕೊಲೆ ಮಾಡಿದ್ದಾರೆ ಎಂದು ಘಟನೆಯ ಸಮಯದಲ್ಲಿ ಕುನಾಲ್ ಜೊತೆಗಿದ್ದ ಸ್ನೇಹಿತ ಪೊಲೀಸರಿಗೆ ತಿಳಿಸಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜ್ಯೋತೇಂದರ್ ಭದಾನ, ನನ್ನ ಸಹೋದರನ ಸ್ನೇಹಿತನಿಂದ ಮಾಹಿತಿ ಪಡೆದು ನಾನು ಸ್ಥಳಕ್ಕೆ ಧಾವಿಸಿದೆ. ವಿಜಯ್ ಅವನ ಎದೆಗೆ ಗುಂಡು ಹಾರಿಸಿದಾಗ ಬಿಲ್ಲು ನನ್ನ ಸಹೋದರನ ಕೈ ಹಿಡಿದಿರುವುದನ್ನು ನಾನು ನೋಡಿದೆ. ನಂತರ ತಮ್ಮ ಸ್ವಿಫ್ಟ್ ಕಾರಿನಲ್ಲಿ ಪರಾರಿಯಾಗಿದ್ದಾರೆ. ಇತರರ ಸಹಾಯದಿಂದ ನಾನು ಕುನಾಲ್‍ನನ್ನು ಚಿಕಿತ್ಸೆಗಾಗಿ ಸೆಕ್ಟರ್ ಏಷ್ಯನ್ ಆಸ್ಪತ್ರೆಗೆ ಕರೆದೊಯ್ದಿದ್ದೆ. ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು ಎಂದು ಅವರು ನೀಡಿದ ದೂರಿನಲ್ಲಿ ದಾಖಲಾಗಿದೆ.
ಈ ಪ್ರಕರಣ ಸಂಬಂಧ ವಿಜಯ್, ಬಿಲ್ಲು ಮತ್ತು ಇತರ ಇಬ್ಬರ ಕೊಲೆ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ರಾಹುಲ್ ಗಾಂಧಿ ಇಡೀ ಹಿಂದೂ ಸಮಾಜ ಅವಮಾನಿಸಿದ್ದಾರೆ: ಅಶ್ವಿನಿ ವೈಷ್ಣವ್