ಜಮ್‍ಶೆಡ್‍ಪುರ: ಮೂರು ವರ್ಷದ ಬಾಲಕಿಯನ್ನ ಅಪಹರಿಸಿ, ಆಕೆಯ ಮೇಲೆ ಗ್ಯಾಂಗ್ ರೇಪ್ ಮಾಡಿ ಬಳಿಕ ಶಿರಚ್ಛೇದ ಗೈದು ಕೊಲೆ ಮಾಡಿರುವ ಪೈಶಾಚಿಕ ಕೃತ್ಯ ಜಮ್‍ಶೆಡ್‍ಪುರದಲ್ಲಿ ನಡೆದಿದೆ.
ಜಾರ್ಖಂಡ್‍ನ ಜಮ್‍ಶೆಡ್‍ಪುರ ರೈಲ್ವೆ ನಿಲ್ದಾಣದ ಬಳಿ ಜುಲೈ 25ರ ಗುರುವಾರ ರಾತ್ರಿ ಘಟನೆ ನಡೆದಿದೆ. ಬಾಲಕಿ ಫೋಷಕರೊಂದಿಗೆ ಮಲಗಿದ್ದ ಸಮಯದಲ್ಲಿ ದುಷ್ಕರ್ಮಿಗಳು ಕಳೆದ ಆಕೆಯನ್ನು ಅಪಹರಣ ಮಾಡಿದ್ದರು. ಈ ಸುದ್ದಿ ರಾಷ್ಟ್ರಮಟ್ಟದಲ್ಲಿ ಶಾಕ್ ಉಂಟು ಮಾಡಿತ್ತು. ಪೋಷಕರ ಮಗ್ಗುಲಲ್ಲೇ ಮಲಗಿದ್ದ ಬಾಲಕಿಯ ಅಪಹರಣ ದೃಶ್ಯ ರೈಲ್ವೆ ನಿಲ್ದಾಣದ ಸೆಕ್ಯೂರಿಟಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
Advertisement
Advertisement
ಪ್ರಕರಣದಲ್ಲಿ ರಿಂಕು ಸಾಹು ಎಂಬಾತನನ್ನು ಜುಲೈ 27ರ ಶನಿವಾರ ಬಂಧಿಸಲಾಗಿದ್ದು, ಈತ 2015 ರಲ್ಲಿ ಬಾಲಕಿಯ ಕಿಡ್ನಾಪ್ ಹಾಗೂ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆರೋಪಿ ರಿಂಕು ಆತನ ಸ್ನೇಹಿತ ಕೈಲಾಶ್‍ನೊಂದಿಗೆ ಸೇರಿ ಬರ್ಬರ ಕೃತ್ಯ ನಡೆಸಿದ್ದಾನೆ. ಪೊಲೀಸರ ಎದುರು ಆರೋಪಿಗಳು ನೀಡಿರುವ ಹೇಳಿಕೆಯ ಅನ್ವಯ, ಬಾಲಕಿಯ ದೇಹವನ್ನು ಪ್ಲಾಸ್ಟಿಕ್ ಕವರಿನಲ್ಲಿ ಸುತ್ತಿ ಕಾಲುವೆಗೆ ಎಸೆದಿದ್ದಾರೆ. ಪೊಲೀಸರು ಮಗುವಿನ ಮುಂಡವನ್ನು ಪತ್ತೆ ಮಾಡಿದ್ದು, ಮೃತ ದೇಹದಿಂದ ಕಾಣೆಯಾಗಿದ್ದ ತಲೆಯ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ. ರೈಲ್ವೇ ನಿಲ್ದಾಣದ 4 ಕಿಮೀ ವ್ಯಾಪ್ತಿಯಲ್ಲಿ ಹುಡುಕಾಟ ನಡೆಸಿದ್ದಾರೆ. ಹೆಚ್ಚಿನ ಮಳೆ ಆಗುತ್ತಿರುವುದು ಕಾರ್ಯಾಚರಣೆಗೆ ತಡವಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ.
Advertisement
ಇಬ್ಬರು 30 ವರ್ಷದ ವಯಸ್ಸಿನ ಆರೋಪಿಗಳನ್ನು ಸೈಕೋ ಕಿಲ್ಲರ್‍ಗಳು ಎಂದು ಪೊಲೀಸರು ತಿಳಿಸಿದ್ದಾರೆ. ಟಾಟಾ ನಗರದ ರೈಲ್ವೆ ನಿಲ್ದಾಣದಿಂದ ಬಾಲಕಿ ಕಾಣೆಯಾಗಿದ್ದಳು. ಈ ಬಗ್ಗೆ ಬಾಲಕಿಯ ತಾಯಿಯಿಂದ ದೂರು ಪಡೆದ ಪೊಲೀಸರಿಗೆ ಸಿಸಿಟಿವಿ ದೃಶ್ಯಗಳಲ್ಲಿ ಆರೋಪಿಯ ಚಹರೆ ಪತ್ತೆಯಾಗಿತ್ತು. ಟಿ ಶರ್ಟ್ ಮತ್ತು ಶಾಟ್ರ್ಸ್ ಧರಿಸಿದ್ದ ಆರೋಪಿ ರಿಂಕು ಮಗುವನ್ನು ತೆಗೆದುಕೊಂಡು ಪರಾರಿಯಾಗಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಪ್ರಕರಣ ಬೆಳಕಿಗೆ ಬಂದ ಬಳಿಕ ಬಾಲಕಿಯ ಕಿಡ್ನಾಪ್ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
Advertisement
ಅಂದಹಾಗೇ ಆರೋಪಿ ರಿಂಕು ಸಾಹು ಅವರ ತಾಯಿ ಪೊಲೀಸ್ ಪೇದೆಯಾಗಿದ್ದಾರೆ. ಅವರು ರಿಂಕು ಜೈಲಿನಿಂದ ಬಿಡುಗಡೆಯಾಗಲು ಸಹಾಯ ಮಾಡಿದ್ದರು ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಅಲ್ಲದೇ ಆರೋಪಿ ರಿಂಕು ಕೂಡ 3 ಮಕ್ಕಳ ತಂದೆಯಾಗಿದ್ದು, ಈ ಹಿಂದೆ ಹಲವು ಮಕ್ಕಳನ್ನು ಕಿಡ್ನಾಪ್ ಮಾಡಿ ಕಿರುಕುಳ ನೀಡಿದ ಆರೋಪವಿದೆ. ಆತನ ಸ್ನೇಹಿತ ಕೈಲಾಶ್ ತಂದೆ ಕೂಡ ಯೋಧರಾಗಿದ್ದು, ಜಮ್ಮು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
Jharkhand: Minor girl allegedly raped & beheaded in Jamshedpur on 25th July. Mustafa Ansari, DSP Rail says, “2 people have been arrested. Accused is a psycho killer, he has been jailed earlier in similar cases. Head of victim not recovered yet.” pic.twitter.com/Lhav2h0jLa
— ANI (@ANI) August 1, 2019