ಕೋಲ್ಕತ್ತಾ: ಸುಂದರಬನ್ಸ್‌ನಲ್ಲಿ (Sundarbans) ಅರಣ್ಯ ಇಲಾಖೆ (Forest Department) ಸಿಬ್ಬಂದಿ ಮೇಲೆ ಹುಲಿ ದಾಳಿ (Tiger Attack) ನಡೆಸಿದ ಘಟನೆ ನಡೆದಿದೆ. ಹುಲಿ ದಾಳಿಗೊಳಗಾದ ಅರಣ್ಯ ಇಲಾಖೆ ನೌಕರನನ್ನು ತಕ್ಷಣ ಸಹೋದ್ಯೋಗಿಗಳು ರಕ್ಷಿಸಿದ್ದಾರೆ. ನೌಕರನನ್ನು ರಕ್ಷಿಸುತ್ತಿರುವ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸುಂದರಬನ್ಸ್ ಅಭಯಾರಣ್ಯದಲ್ಲಿ ಸೋಮವಾರ ಬೆಳಿಗ್ಗೆ ಅರಣ್ಯ ಇಲಾಖೆಯ ಸಿಬ್ಬಂದಿ ಹುಲಿಯನ್ನು ಅಜ್ಮಲ್ಮರಿ ಅರಣ್ಯಕ್ಕೆ ಅಟ್ಟಲು ಯತ್ನಿಸುತ್ತಿದ್ದರು. ಈ ವೇಳೆ ನೌಕರನ ಮೇಲೆ ಹುಲಿ ದಾಳಿ ಮಾಡಿದೆ.
Advertisement
#ManAnimalConflict #WestBengal
A Royal Bengal Tiger enters a populated area, attacks forest department worker in Moipith area of South 24 Parganas district of West Bengal.
Forest department worker was eventually rescued from the clutches of the tiger and rushed to hospital… pic.twitter.com/WBCQKQ63ro
— Saurabh Gupta(Micky) (@MickyGupta84) February 10, 2025
Advertisement
ಎಂಟರಿಂದ ಹತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಹುಲಿಯನ್ನು ಮತ್ತೆ ಕಾಡಿಗೆ ಓಡಿಸಲು ಪ್ರಯತ್ನಿಸುತ್ತಿದ್ದರು. ಇದ್ದಕ್ಕಿದ್ದಂತೆ ಹುಲಿ ಸಿಬ್ಬಂದಿ ಕಡೆಗೆ ಬಂದಿದೆ. ಈ ವೇಳೆ ಅವರು ಕಿರುಚಿದ್ದಾರೆ. ಈ ವೇಳೆ ಹುಲಿ ಒಬ್ಬರ ಮೇಲೆ ಎರಗಿದೆ. ಅಷ್ಟರಲ್ಲೇ ಅಲ್ಲೇ ಇದ್ದ ಸಹೋದ್ಯೋಗಿಗಳು ಕೋಲುಗಳಿಂದ ಹುಲಿಗೆ ಬಡಿದಿದ್ದಾರೆ. ಈ ವೇಳೆ ಹುಲಿ ಆ ವ್ಯಕ್ತಿಯನ್ನು ಬಿಟ್ಟು ಕಾಡಿಗೆ ಓಡಿಹೋಗಿದೆ.
Advertisement
Advertisement
ದೇಹದ ಮೇಲೆ ಹಲವಾರು ಗಾಯಗಳಾಗಿವೆ. ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡಿದರೆ, ನಾವು ಅವರನ್ನು ಕೋಲ್ಕತ್ತಾದ ಆಸ್ಪತ್ರೆಗೆ ಸ್ಥಳಾಂತರಿಸುತ್ತೇವೆ. ಘಟನೆಯಲ್ಲಿ ಓರ್ವ ಸಿಬ್ಬಂದಿ ಹೊರತುಪಡಿಸಿ ಮತ್ಯಾರಿಗೂ ಗಾಯಗಳಾಗಿಲ್ಲ ಎಂದು ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್‌ಒ) ನಿಶಾ ಗೋಸ್ವಾಮಿ ತಿಳಿಸಿದ್ದಾರೆ.
ನಮ್ಮ ತಂಡವು ಟ್ರ್ಯಾಂಕ್ವಿಲೈಜರ್ ಗನ್‌ಗಳು, ಪಂಜರ ಮತ್ತು ಬೆಟ್‌ನೊಂದಿಗೆ ಶಸ್ತ್ರಸಜ್ಜಿತವಾಗಿದೆ. ಹುಲಿ ಓಡಾಡುತ್ತಿರುವ ಪ್ರದೇಶದಲ್ಲಿ ನೈಲಾನ್ ಬಲೆಗಳಿಂದ ಬೇಲಿ ಹಾಕಲಾಗುತ್ತಿದೆ ಮತ್ತು ಗ್ರಾಮಸ್ಥರು ದನಗಳನ್ನು ಮೇಯಲು ಬಿಡದಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.