ಮುಂಬೈ: ಆಟದ ವೇಳೆ ಕ್ರೀಸ್‌ನಲ್ಲಿ ಮುನ್ನುಗ್ಗಿ ಸಿಕ್ಸರ್ ಬಾರಿಸಿದ 7 ಸೆಕೆಂಡುಗಳಲ್ಲೇ ಹೃದಯಾಘಾತ (Heart Attack) ಸಂಭವಿಸಿ ಕ್ರಿಕೆಟಿಗನೊಬ್ಬ (Cricketer) ಮೈದಾನದಲ್ಲೇ ಪ್ರಾಣಬಿಟ್ಟ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
???? छक्का जड़ते ही बल्लेबाज को आया हार्ट अटैक
???? क्रिकेट के मैदान में ही हो गई मौत
???? #T20IWorldCup2024 के बीच आई बुरी खबर
???? सामने आया दिल दहला देने वाला वीडियो#Mumbai #MiraRod #Maharashtra #HeartAttack #Cricket #India #ViralVideo pic.twitter.com/eZAnoboy6F
— Deepak Dilliwar (@DeepakDilliwar) June 3, 2024
ಮಹಾರಾಷ್ಟ್ರದ (Maharashtra) ಥಾಣೆಯ ಮೀರಾ ರೋಡ್ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಕ್ರಿಕೆಟಿಗ ಪ್ರಾಣಬಿಟ್ಟಿದ್ದಾರೆ. ಆತ ಯಾರು – ಏನು ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಏರ್ ಇಂಡಿಯಾ ಸಿಬ್ಬಂದಿ ಮೇಲೆ ಹಲ್ಲೆಗೈದು ಡೋರ್ ತೆಗೆಯಲು ಯತ್ನ- ಆರೋಪಿ ಅರೆಸ್ಟ್
ಪಿಂಕ್ ಬಣ್ಣದ ಜೆರ್ಸಿ ಧರಿಸಿದ ಕ್ರಿಕೆಟಿಗ ನೆಟ್ ಕ್ರಿಕೆಟ್ ಆಡುತ್ತಿದ್ದ ವೇಳೆ ಭರ್ಜರಿ ಸಿಕ್ಸರ್ ಬಾರಿಸಿದ್ದಾನೆ. ಬಳಿಕ ಮುಂದಿನ ಎಸೆತ ಎದುರಿಸಲು ಕ್ರೀಸ್‌ನಲ್ಲಿ ನಿಂತ 7 ಸೆಕೆಂಡುಗಳಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಸಹ ಆಟಗಾರರು ಕೂಡಲೇ ಸಹಾಯಕ್ಕೆ ಧಾವಿಸಿದ್ದಾರೆ, ಅಷ್ಟರಲ್ಲಿ ಆಟಗಾರ ಮೃತಪಟ್ಟಿರುವುದು ಗೊತ್ತಾಗಿದೆ. ಇದನ್ನೂ ಓದಿ: 64.2 ಕೋಟಿ ಜನರಿಂದ ಮತದಾನ – ಸಾರ್ವತ್ರಿಕ ಚುನಾವಣೆಯಲ್ಲಿ ಭಾರತ ವಿಶ್ವದಾಖಲೆ
ಹೃದಯಾಘಾತದ ಮುನ್ಸೂಚನೆ
* ಎದೆ ನೋವು, ಒತ್ತಡ ಹಾಗೂ ಎದೆಯ ಬಿಗಿತ, ಎದೆ ಮಧ್ಯಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು
* ತೋಳಿನ ಭಾಗದಲ್ಲಿ ನೋವು
* ಗಂಟಲು ಮತ್ತು ದವಡೆಗಳಲ್ಲಿ ನೋವು
* ಹೊಟ್ಟೆ ನೋವು, ಅತಿಯಾದ ಬೆವರುವಿಕೆ
* ಅಜೀರ್ಣ, ವಿಪರೀತ ಸುಸ್ತು ಇವೆಲ್ಲವೂ ಹೃದಯಾಘಾತಕ್ಕೆ ಕಾರಣ ಎಂದು ತಜ್ಞ ವೈದ್ಯರು ತಿಳಿಸಿದ್ದಾರೆ.