ಚೆನ್ನೈ: ಹೆದ್ದಾರಿ ಕಾಮಗಾರಿ ವೇಳೆ ಟ್ರಕ್‌ನಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡ (Cylinder Blast) ಘಟನೆ ತಮಿಳುನಾಡಿನ (Tamil Nadu) ಚಿನ್ನಪ್ಪಂಪಟ್ಟಿಯಲ್ಲಿ ಗುರುವಾರ ಸಂಜೆ ನಡೆದಿದೆ. ಸ್ಫೋಟದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚತುಷ್ಪಥ ಹೆದ್ದಾರಿ ವೈಟ್ ಲೈನ್ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಟ್ರಕ್‌ನಲ್ಲಿ ಇರಿಸಲಾಗಿದ್ದ ಸಿಲಿಂಡರ್ ಸ್ಫೋಟಗೊಂಡಿದೆ. ಅದರಲ್ಲಿದ್ದ ಸಿಲಿಂಡರ್‌ಗಳನ್ನು ರಸ್ತೆಯ ಮೇಲೆ ಬಿಳಿ ರೇಖೆಗಳನ್ನು ಎಳೆಯಲು ಬಳಸಲಾಗುತ್ತಿತ್ತು.
Advertisement
ಹೆದ್ದಾರಿ ಕಾಮಗಾರಿ ವೇಳೆ ಸಿಲಿಂಡರ್ ಸ್ಫೋಟ – ಟ್ರಕ್ ಛಿದ್ರ!
Advertisement
ಸ್ಫೋಟದಿಂದ ವಾಹನ ಸವಾರರಲ್ಲಿ ಕೆಲಕಾಲ ಆತಂಕ ಮನೆ ಮಾಡಿತ್ತು. ಕಾರ್ಮಿಕರಿದ್ದ ಸ್ವಲ್ಪ ದೂರದಲ್ಲೇ ಈ ಸ್ಫೋಟ ಸಂಭವಿಸಿದ್ದು, ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Advertisement
Advertisement
ಘಟನೆಯ ಮೊದಲು ಟ್ರಕ್‌ನಲ್ಲಿ ಸಣ್ಣ ಬೆಂಕಿ ಕಾಣಿಸಿಕೊಂಡಿದೆ. ನಂತರ ವ್ಯಕ್ತಿಯೊಬ್ಬರು ಬಕೆಟ್‌ನಲ್ಲಿ ನೀರನ್ನು ಬಳಸಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ. ಇದಾದ ಕೆಲವೇ ಸೆಕೆಂಡ್‌ಗಳಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ.
ಅದೃಷ್ಟವಶಾತ್, ಘಟನೆಯಲ್ಲಿ ಪ್ರಾಣಾಪಾಯ ಹಾಗೂ ಗಾಯಗಳಾಗಿಲ್ಲ.