– ಕ್ಷಣದಲ್ಲಿ ಹಾರಿಹೋಯ್ತು ಡಾಕ್ಟರ್ ಕನಸು ಕಂಡಿದ್ದ ವಿದ್ಯಾರ್ಥಿನಿಯ ಪ್ರಾಣ ಪಕ್ಷಿ
ಮುಂಬೈ: ಇತ್ತೀಚಿನ ದಿನಗಳಲ್ಲಿ ಸಾವು ಯಾರಿಗೆ? ಯಾವಾಗ? ಹೇಗೆ ಬರುತ್ತದೆ? ಅನ್ನೋದೇ ತಿಳಿಯುತ್ತಿಲ್ಲ. ಬದಲಾದ ಜೀವನ ಶೈಲಿ, ಕೆಲಸದ ಒತ್ತಡ, ಜೀವನದ ಜಂಜಾಟಗಳಲ್ಲಿ ಸಿಲುಕಿ ನಿಂತಲ್ಲಿ, ಕುಳಿತಲ್ಲೇ ಕುಸಿದು ಬಿದ್ದು ಸಾವಿಗೀಡಾಗುತ್ತಿರುವ ಘಟನೆ ಆಗಾಗ್ಗೆ ಕಂಡುಬರುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎನ್ನುವಂತೆ ಮಹಾರಾಷ್ಟ್ರದಲ್ಲೊಂದು (Maharashtra) ಘಟನೆ ನಡೆದಿದೆ.
ಅಯ್ಯೋ ವಿಧಿಯೇ… ಕಾಲೇಜಿನಲ್ಲಿ ವಿದಾಯ ಭಾಷಣ ಮಾಡುತ್ತಲೇ ಕುಸಿದು ಬಿದ್ದು 20 ವರ್ಷದ ವಿದ್ಯಾರ್ಥಿನಿ ಸಾವು – ಮನಕಲುಕುವ ವಿಡಿಯೋ ನೋಡಿ… https://t.co/fPFNPWtI3d#CollegeStudent #FarewellParty #Maharashtra #BSCStudent #HeartAttack pic.twitter.com/8V1Y2SG1bt
— PublicTV (@publictvnews) April 6, 2025
ಮಹಾರಾಷ್ಟ್ರದ ಧಾರಶಿವ್ ಜಿಲ್ಲೆಯ ಕಾಲೇಜೊಂದರಲ್ಲಿ 20 ವರ್ಷದ ಕಾಲೇಜು ವಿದ್ಯಾರ್ಥಿನಿ (College Student) ಸೆಂಡಾಫ್ ಪಾರ್ಟಿಯಲ್ಲಿ ವಿದಾಯ ಭಾಷಣ ಮಾಡುತ್ತಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ವರ್ಷಾ ಖಾರತ್ (20) ಮೃತ ವಿದ್ಯಾರ್ಥಿನಿಯಾಗಿದ್ದು, ಆರ್‌ಜಿ ಶಿಂಧೆ ಕಾಲೇಜಿನಲ್ಲಿ (RG Shinde College) ಅಂತಿಮ ವರ್ಷದ ಬಿಎಸ್‌ಸಿ ವ್ಯಾಸಂಗ ಮಾಡುತ್ತಿದ್ದಳು. ಇದನ್ನೂ ಓದಿ: ಸಮುದ್ರದಲ್ಲಿ ಪಾಕ್ ವ್ಯಕ್ತಿಗೆ ಎದುರಾದ ಸಂಕಷ್ಟ – 3 ಗಂಟೆ ಕಾಲ ಶಸ್ತ್ರಚಿಕಿತ್ಸೆ ನೀಡಿ ಜೀವ ಉಳಿಸಿದ ಭಾರತೀಯ ನೌಕಾಪಡೆ ಸಿಬ್ಬಂದಿ
ಅಯ್ಯೋ ವಿಧಿಯೇ
ಏಪ್ರಿಲ್ 5ರಂದು ಘಟನೆ ನಡೆದಿದ್ದು, ವಿದ್ಯಾರ್ಥಿನಿ ಕುಸಿದು ಬಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. 32 ಸೆಕೆಂಡುಗಳ ವಿಡಿಯೋ ಕ್ಲಿಪ್‌ನಲ್ಲಿ ಮನಕಲುಕುವ ದೃಶ್ಯ ಸೆರೆಯಾಗಿದೆ. ಅಂದ ಚೆಂದದ ಸೀರೆಯುಟ್ಟು ಮುದ್ದಾಗಿ ರೆಡಿಯಾಗಿದ್ದ ವಿದ್ಯಾರ್ಥಿನಿ ಸೆಂಡಾಫ್ ಪಾರ್ಟಿ ವೇಳೆ ವಿದಾಯ ಭಾಷಣ ಮಾಡುತ್ತಿದ್ದಳು. ಭಾವುಕಳಾಗಿ ಮಾತನಾಡುತ್ತಿದ್ದಂತೆ ಕುಸಿದು ಬಿದ್ದಿದ್ದಾಳೆ. ಕೂಡಲೇ ಆಕೆಯನ್ನ ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು, ಅಷ್ಟರಲ್ಲಿ ಆಕೆ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದರು. ಇದನ್ನೂ ಓದಿ: ಅಯೋಧ್ಯೆ ಸೂರ್ಯ ತಿಲಕದ ವೇಳೆಯೇ ರಾಮಸೇತು ದರ್ಶನ ಪಡೆದ ಮೋದಿ
ಹೃದಯ ಸಂಬಂಧಿ ಕಾಯಿಲೆ ಇತ್ತು
ಮೃತ ವಿದ್ಯಾರ್ಥಿನಿ ವರ್ಷಾಳ ಚಿಕ್ಕಪ್ಪ ಹೇಳುವಂತೆ, ಆಕೆಗೆ ಹೃದಯ ಸಂಬಂಧಿ ಕಾಯಿಲೆ ಇತ್ತು. 7 ವರ್ಷಗಳ ಹಿಂದೆಯೇ ಬೈಪಾಸ್ ಸರ್ಜರಿ ಮಾಡಿಸಲಾಗಿತ್ತು. ಶಸ್ತ್ರ ಚಿಕಿತ್ಸೆ ಬಳಿಕ ಆಕೆ ಪ್ರತಿದಿನ ಔಷಧಿ ತೆಗೆದುಕೊಳ್ಳಬೇಕಿತ್ತು. ಆದ್ರೆ ಕಾಲೇಜು ಸೆಂಡಾಫ್ ಪಾರ್ಟಿ ಇದ್ದ ಕಾರಣ ಕಾಲೇಜಿಗೆ ಹೋಗುವ ಆತುರದಲ್ಲಿ ಮಾತ್ರೆ ತೆಗೆದುಕೊಳ್ಳುವುದನ್ನು ಮರೆತಿದ್ದಳು. ಆದ್ರೆ ಇದೇ ಸಾವಿಗೆ ನಿಖರ ಕಾರಣ ಎಂದು ಹೇಳಲಾಗದು, ಹಠಾತ್ ಹೃದಯಾಘಾತ (Heart Attack) ಸಂಭವಿಸಿರಬಹುದು ಎಂದು ತಿಳಿದುಬಂದಿದೆ. ಇದನ್ನೂ ಓದಿ: ದೇಶದ ಮೊದಲ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಲೋಕಾರ್ಪಣೆ ಮಾಡಿದ ಮೋದಿ – ಈ ಸೇತುವೆ ವಿಶೇಷತೆ ಏನು?
ಡಾಕ್ಟರ್ ಕನಸು ಕಂಡಿದ್ದ ವರ್ಷಾ
ವರ್ಷಾಳ ಪೋಷಕರು ಮೂಲತಃ ಕೃಷಿಕರು, ಕಾಲೇಜಿನಲ್ಲೂ ಉತ್ತಮ ವಿದ್ಯಾರ್ಥಿಯಾಗಿದ್ದ ವರ್ಷಾ ಮುಂದೆ ಡಾಕ್ಟರ್ ಆಗುವ ಕನಸು ಕಂಡಿದ್ದಳು. ಆದ್ರೆ ವಿಧಿ ಆಟವೇ ಬೇರೆಯಾಗಿತ್ತು. ಆಕೆಗೆ ಒಬ್ಬರು ಅಕ್ಕ, ಒಬ್ಬ ತಮ್ಮ ಸಹ ಇದ್ದರು. ಇದನ್ನೂ ಓದಿ: ಕಟೀಲ್‌ಗೆ ಮತ್ತೆ ರಾಜಕೀಯ ಸ್ಥಾನಮಾನ ಸಿಗಲಿ: ಮಧೂರು ದೇವಸ್ಥಾನದಲ್ಲಿ ಡಿಕೆಶಿ ಪ್ರಾರ್ಥನೆ