– ಬಂಗಾಳದ ಹೋಟೆಲ್‌ನಲ್ಲಿ ಶಂಕಿತ ಉಗ್ರರು ಲಾಕ್ ಆಗಿದ್ಹೇಗೆ?
ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ (Rameshwaram Cafe) ಸ್ಫೋಟ ಪ್ರಕರಣದಲ್ಲಿ ಪಶ್ಚಿಮ ಬಂಗಾಳದಲ್ಲಿ (West Bengal) ತಲೆಮರೆಸಿಕೊಂಡಿದ್ದ ಶಂಕಿತ ಉಗ್ರರು ಪೊಲೀಸರ ಕಣ್ತಪ್ಪಿಸಲು ನಾನಾ ತಂತ್ರಗಳನ್ನು ರೂಪಿಸಿದ್ದರು. ಪಶ್ಚಿಮ ಬಂಗಾಳದ 4 ಹೋಟೆಲ್‌ಗಳಲ್ಲಿ ಒಂದೊಂದು ಹೆಸರು, ಕಾರಣ ನೀಡಿ ವಾಸ್ತವ್ಯ ಹೂಡಿದ್ದರು.
Advertisement
ಹೋಟೆಲ್‌ನಲ್ಲಿ ಉಳಿದುಕೊಳ್ಳಲು ಬೇರೆ ಬೇರೆ ಹೆಸರುಗಳನ್ನು ಬಳಸಿಕೊಂಡಿದ್ದರು. ಅದರಲ್ಲಿ ಕಲಬುರಗಿಯ ವ್ಯಕ್ತಿಯೊಬ್ಬರ ಹೆಸರು ಕೂಡ ಇದೆ. ಹಾಗಾದ್ರೆ, ಎಲ್ಲೆಲ್ಲಿ, ಏನೇನು ಹೆಸರು ನೀಡಿ ಉಳಿದುಕೊಳ್ಳುತ್ತಿದ್ದರು? ಎನ್‌ಐಎ ಅಧಿಕಾರಿಗಳಿಗೆ ಲಾಕ್ ಆಗಿದ್ದು ಹೇಗೆ ಎಂಬ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ – ಶಂಕಿತರು ಎನ್‍ಐಎ ಕಸ್ಟಡಿಗೆ
Advertisement
Advertisement
1) ಮಾರ್ಚ್ 13: ಶಂಕಿತ ಉಗ್ರರು ಲೆನಿನ್ ಸರಾನಿ ಬಳಿಯ ಹೋಟೆಲ್ ಪ್ಯಾರಡೈಸ್‌ನಲ್ಲಿ ಮೊದಲು ಉಳಿದುಕೊಂಡಿದ್ದರು. 700 ರೂ. ರೂಮ್ ಬಾಡಿಗೆಯಾಗಿ ಪಾವತಿಸಿದ್ದರು. ಡಾರ್ಜಿಲಿಂಗ್‌ನಿಂದ ಚೆನ್ನೈಗೆ ಹೊರಟಿರುವ ಪ್ರವಾಸಿಗರು ಎಂದು ಹೋಟೆಲ್ ದಾಖಲೆಗಳಲ್ಲಿ ನಮೂದಿಸಿದ್ದಾರೆ. ವಿಘ್ನೇಶ್ ಎಂದು ಹೆಸರು ಬರೆದು ನಂತರ ಅಳಿಸಿ ಅನ್ಮೋಲ್ ಕುಲಕರ್ಣಿ ಎಂದು ನಮೂದು ಮಾಡಿದ್ದಾರೆ. ಮಹಾರಾಷ್ಟ್ರದ ಥಾಣೆಯ ಯುಶಾ ಶಾನವಾಜ್ ಪಟೇಲ್ ಹಾಗೂ ಕರ್ನಾಟಕ ಕಲಬುರಗಿಯ ಅನ್ಮೋಲ್ ಕುಲಕರ್ಣಿ ಎಂಬ ದಾಖಲೆ ಇರುವ ಆಧಾರ್ ಸಲ್ಲಿಕೆ ಮಾಡಿದ್ದರು.
Advertisement
2) ನಂತರ ಡೈಮಂಡ್ ಹಾರ್ಬರ್ ರಸ್ತೆ ಬಳಿಕ ಗಾರ್ಡನ್ ಗೆಸ್ಟ್ ಹೌಸ್‌ನಲ್ಲಿ ಸಂಜು ಅಗರ್ವಾಲ್ (36) ಎಂದು ಹೆಸರು ನಮೂದಿಸಿದ್ದರು. ಸ್ನೇಹಿತನ ಜೊತೆ ಜಮ್ಮು-ಕಾಶ್ಮೀರದಿಂದ ಚಿಕಿತ್ಸೆಗೆ ಬಂದಿದ್ದೇವೆ. ಇಲ್ಲಿಂದ ನಾವು ಮತ್ತೆ ಜಾರ್ಖಂಡ್‌ಗೆ ಹೋಗಬೇಕು. ಈ ಗೆಸ್ಟ್‌ಹೌಸ್‌ನಲ್ಲಿದ್ದ ವೇಳೆ ಲೋಕಲ್ ಮಾರ್ಕೆಟ್‌ಗೆ ತೆರಳಿದ್ದರು. ಲಿಫ್ಟ್ ಇದ್ದರೂ ಪ್ರತಿ ಬಾರಿ ಸ್ಟೇರ್‌ಕೇಸ್ ಮೂಲಕವೇ ಓಡಾಡುತ್ತಿದ್ದರು. ಇದನ್ನೂ ಓದಿ: ಬೆಂಗಳೂರು ಕೆಫೆ ಬ್ಲಾಸ್ಟ್ ಪ್ರಕರಣ; ಶಂಕಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ ಎನ್‌ಐಎ
3) ಇಕ್ಬಾಲ್‌ಪುರದ ಡ್ರೀಮ್ ಗೆಸ್ಟ್ ಹೌಸ್‌ಗೆ ಮಾರ್ಚ್ 25 ರಂದು ಬಂದಿದ್ದರು. 1000 ರೂ. ಬಾಡಿಗೆ ನೀಡಿ ಉಳಿದುಕೊಂಡಿದ್ದರು. ನಂತರ ಮಾ.28 ರಂದು ಹೋಟೆಲ್ ರೂಂ ಖಾಲಿ ಮಾಡಿದ್ದರು. ಪ್ರವಾಸಿಗರ ಸೋಗಿನಲ್ಲಿ ರೂಂ ಬುಕ್ ಮಾಡಿದ್ದ ಇವರು ಬಾಡಿಗೆಯನ್ನು ನಗದು ಮೂಕಲವೇ ಪಾವತಿಸಿದ್ದರು.
4) ದಿಘಾ ಎಂಬ ಸ್ಥಳದ ಆಯುಷ್ ಇಂಟರ್‌ನ್ಯಾಷನಲ್ ಹೋಟೆಲ್‌ಗೆ ಏ.10 ರಂದು ಶಂಕಿತರು ಎಂಟ್ರಿ ಕೊಟ್ಟಿದ್ದರು. ಇಲ್ಲಿ 3ನೇ ಮಹಡಿಯ ರೂಂ ನಂಬರ್ 404 ರಲ್ಲಿ ವಾಸ್ತವ್ಯ ಹೂಡಿದ್ದರು. ಖಚಿತ ಸುಳಿವಿನ ಮೇರೆಗೆ ಎನ್‌ಐಎ ಅಧಿಕಾರಿಗಳು ಹೋಟೆಲ್‌ಗೆ ಎಂಟ್ರಿ ಕೊಟ್ಟರು. ಅಧಿಕಾರಿಗಳು ರೂಂ ನಂಬರ್ 404ರ ಎದುರಿನ ರೂಂ ಬುಕ್ ಮಾಡಿದ್ದರು. ತಡರಾತ್ರಿ ಪ.ಬಂಗಾಳ ಪೊಲೀಸರ ಜೊತೆ ಸೇರಿ ಎನ್‌ಐಎ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಇದನ್ನೂ ಓದಿ: ಲಾಡ್ಜ್‌ಗಳಲ್ಲಿ ತಂಗಲು ಕಲಬುರಗಿ ಯುವಕನ ಆಧಾರ್ ನಕಲು ಮಾಡಿದ್ದ ಬಾಂಬರ್; ಸ್ಫೋಟಕ ರಹಸ್ಯ ಬಯಲು