ಪಾಟ್ನಾ: ದಿನಸಿ ಅಂಗಡಿಯೊಂದರಲ್ಲಿ ಕುರ್ಕುರೆ, ಬಿಸ್ಕೆಟ್ (Kurkure, Biscuits) ಪ್ಯಾಕೆಟ್‌ಗಳನ್ನು ಕದ್ದ ಆರೋಪದ ಮೇಲೆ ನಾಲ್ವರು ಬಾಲಕರನ್ನು ಕಂಬಕ್ಕೆ ಕಟ್ಟಿ ಥಳಿಸಿರುವ ಅಮಾನವೀಯ ಘಟನೆ ಬಿಹಾರದ (Bihar) ಬೇಗುಸರಾಯ್ ಜಿಲ್ಲೆಯಲ್ಲಿ ನಡೆದಿದೆ.
ಇದೇ ಅಕ್ಟೋಬರ್ 28 ರಂದು ಘಟನೆ ನಡೆದಿದ್ದು, ಬೀರ್‌ಪುರದ ಫಜಿಲ್‌ಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ (Social Media) ವೀಡಿಯೋ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ವೀಡಿಯೋದಲ್ಲಿ ಜನ ಸಮೂಹದ ಅಂಗಡಿ ಮಾಲೀಕ ನಾಲ್ಕು ಬಾಲಕರನ್ನು ಕಂಬಕ್ಕೆ ಕಟ್ಟಿ ಥಳಿಸಿರುವುದನ್ನು ಕಾಣಬಹುದಾಗಿದೆ. ಘಟನೆ ಬೆಳಕಿಗೆ ಬಂದ ನಂತರ ಅಂಗಡಿ ಮಾಲೀಕನ ವಿರುದ್ಧ ಪೊಲೀಸರು (Bihar Police) ಪ್ರಕರಣ ದಾಖಲಿಸಿದ್ದಾರೆ. ಆದ್ರೆ ಈವರೆಗೆ ಬಂಧಿಸಿಲ್ಲ. ಇದನ್ನೂ ಓದಿ: ಮುಕೇಶ್ ಅಂಬಾನಿಗೆ 3ನೇ ಬಾರಿಗೆ ಕೊಲೆ ಬೆದರಿಕೆ – ಬೇಡಿಕೆ ಮೊತ್ತ 400 ಕೋಟಿಗೆ ಏರಿಕೆ
ಪ್ರಕರಣ ದಾಖಲಿಸಿಕೊಂಡ ಬಳಿಕ ತನಿಖೆ ನಡೆಸುವ ಸಮಯದಲ್ಲಿ ಕೆಲ ಹುಡುಗರು ಅಂಗಡಿಯಿಂದ ಕಳ್ಳತನ ಮಾಡುತ್ತಿರುವುದು ಕಂಡುಬಂದಿದೆ. ಕಳ್ಳತನ ಮಾಡುವಾಗ ಅಂಗಡಿ ಮಾಲೀಕನಿಗೆ ಸಿಕ್ಕಿಬಿದ್ದು ಥಳಿಕಕ್ಕೊಳಗಾಗಿದ್ದಾರೆ. ಒಟ್ಟಿನಲ್ಲಿ ಅಂಗಡಿಯವನು ಥಳಿಸಿದ್ದು, ದೊಡ್ಡ ತಪ್ಪು ಮತ್ತು ಅಮಾನವೀಯ ಎಂದು ಬೇಗುಸರೈ ಎಸ್ಪಿ ಯೋಗೇಂದ್ರ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ 50 ಜನ ಸಿಎಂ ಅಭ್ಯರ್ಥಿಗಳಿದ್ದಾರೆ, ಯಾರು ಸಿಎಂ ಆದ್ರೂ ತಪ್ಪಿಲ್ಲ: ಚೆನ್ನಾರೆಡ್ಡಿ ಪಾಟೀಲ್
ಅಂಗಡಿ ಮಾಲೀಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರೂ ಒತ್ತಾಯಿಸಿದ್ದಾರೆ. ಆದ್ರೆ ಈವರೆಗೆ ಲಿಖಿತ ದೂರು ನೀಡಿಲ್ಲ. ಬೀರ್‌ಪುರ ಪೊಲೀಸ್ ಠಾಣೆ ಸಂಪರ್ಕಿಸಿ ದೂರು ದಾಖಲಿಸುವಂತೆ ನಾವು ಕುಟುಂಬಸ್ಥರಿಗೆ ತಿಳಿಸಿದ್ದೇವೆ. ಅವರು ದೂರು ನೀಡಿದ ನಂತರವೇ ಮುಂದಿನ ಕ್ರಮ ಜರುಗಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೃಹತ್ ಜಯದ ನಿರೀಕ್ಷೆಯಲ್ಲಿ ಪಾಕಿಸ್ತಾನ – ಸೆಮಿಸ್ ಹಾದಿಯ ಲೆಕ್ಕಾಚಾರ ಏನು?
Web Stories