ಬೆಂಗಳೂರು: ಆಗಸ್ಟ್ 22ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಬಲ ಪ್ರದರ್ಶನ ಮಾಡಲಿದ್ದು, ಆಗಸ್ಟ್ 23ಕ್ಕೆ ಕಾಂಗ್ರೆಸ್ ಹೈಕಮಾಂಡ್‌ಗೆ ಸಂಪೂರ್ಣ ವರದಿ ಕೊಡಲಿದ್ದಾರೆ. ಒಳ-ಹೊರ ವಿರೋಧಿಗಳಿಗೆ ಸಿದ್ದರಾಮಯ್ಯ ಸಂದೇಶ ಕಳುಹಿಸುವ ಪ್ಲ್ಯಾನ್ ನಡೆದಿದ್ದು, ಶಾಸಕರು ನನ್ನ ಪರ ಇದ್ದಾರೆ ಎಂಬ ಸಂದೇಶ ರವಾನಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಶಾಸಕರಿಗೆ ಮನವರಿಕೆ ಮಾಡಿಕೊಡುವ ನೆಪ. ಆದರೆ ಅಸಲಿ ಗೇಮ್ ಬೇರೆ ಇದೆ ಎಂಬ ಬಗ್ಗೆ ರಾಜಕೀಯ ಚರ್ಚೆ ಜೋರಾಗಿದೆ. ಆ.22ಕ್ಕೆ ಗುರುವಾರ ಬೆಳಗ್ಗೆ ಸಚಿವ ಸಚಿವ ಸಂಪುಟ ಸಭೆ ಇದ್ದು, ಅಂದೇ ಸಂಜೆ 4 ಗಂಟೆಗೆ ಶಾಸಕಾಂಗ ಪಕ್ಷ ಕರೆದಿದ್ದಾರೆ. ಈಗಾಗಲೇ ಸಚಿವ ಸಂಪುಟ ಸಭೆ ಕರೆದು ಸಚಿವರ ಬೆಂಬಲ ಪ್ರದರ್ಶನ ಆಗಿದೆ. ಎಲ್ಲ ಸಚಿವರು ಸಿದ್ದರಾಮಯ್ಯ ಪರ ಎಂದಿದ್ದಾರೆ. ಕಾಂಗ್ರೆಸ್ ಹೈಕಮಾಂಡ್, ಸಚಿವರು, ಆಪ್ತರು ಜೊತೆ ಇದ್ದಾರೆ ಎಂಬ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್: ಜಾಮೀನಿಗೆ ಅರ್ಜಿ ಸಲ್ಲಿಸಿದ A1 ಆರೋಪಿ ಪವಿತ್ರಾಗೌಡ
Advertisement
Advertisement
ಅದೇ ರೀತಿ ಕಾಂಗ್ರೆಸ್ ಶಾಸಕರ ಜೊತೆಯೂ ಸಭೆ ನಡೆಸಿ ಕೇಸ್ ಬಗ್ಗೆ ಮನವರಿಕೆಗೆ ಯತ್ನ ಎನ್ನಲಾಗಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಬಳಿಕ ಆ.23 ರಂದು ದೆಹಲಿಗೆ ತೆರಳುವ ಸಿಎಂ ಸಿದ್ದರಾಮಯ್ಯ, ಹೈಕಮಾಂಡ್‌ಗೆ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆ, ಪಕ್ಷದೊಳಗಿನ ವಿದ್ಯಾಮಾನಗಳ ಬಗ್ಗೆ ವರದಿ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯುವ ತಂತ್ರಕ್ಕೆ ಕೈ ಹಾಕಿದ್ರಾ ಸಿದ್ದರಾಮಯ್ಯ ಎಂಬ ಚರ್ಚೆ ಜೋರಾಗಿದ್ದು, ಎಲ್ಲದಕ್ಕೂ ಕಾಲವೇ ಉತ್ತರಿಸಬೇಕಿದೆ. ಇದನ್ನೂ ಓದಿ: ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದಕ್ಕೆ ಖುಷಿ ಪಡೋರು ಕಾಂಗ್ರೆಸ್ ನಾಯಕರೇ: ಶೆಟ್ಟರ್
Advertisement