ಬೆಂಗಳೂರು: ನಗರದ ಹಲವೆಡೆ ದಿಢೀರ್ ಎಂದು ಮಳೆಯ ಸಿಂಚನ ಆಗಿದ್ದು, ಮುಂದಿನ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
ಸಂಜೆಯಾಗುತ್ತಿದಂತೆ ನಗರದ ಕಬ್ಬನ್ ಪಾರ್ಕ್, ಬಸವನಗುಡಿ, ಬನಶಂಕರಿ, ಕಾರ್ಪೋರೇಷನ್ ಸೇರಿದಂತೆ ಹಲವೆಡೆ ಮಳೆಯಾಗಿದ್ದು, ಅನಿರೀಕ್ಷಿತ ಮಳೆಗೆ ಸಾರ್ವಜನಿಕರು, ವಾಹನ ಸವಾರರು ಪರದಾಡಿದರು. ಪರಿಣಾಮ ಹಲವೆಡೆ ಟ್ರಾಫಿಕ್ ಸಮಸ್ಯೆ ಎದುರಾದರೆ, ನಿಮ್ಹಾನ್ಸ್ ಬಳಿ ಮರವೊಂದು ಧರೆಗುರುಳಿದಿದೆ. ರಸ್ತೆ ಮಧ್ಯೆಯೇ ಮರ ಉರುಳಿದ ಕಾರಣ ಕೆಲ ಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಆಗಿತ್ತು. ಆ ಬಳಿಕ ಮರ ತೆರವು ಕಾರ್ಯ ನಡೆಸಲಾಯಿತು.
Advertisement
Advertisement
ದಿಢೀರ್ ಮಳೆಯಿಂದ ನಗರದಲ್ಲಿ ಕೂಲ್ ಕೂಲ್ ವಾತಾವಣ ನಿರ್ಮಾಣ ಆಗಿದೆ. ಇನ್ನು ಬೆಂಗಳೂರು ಸೇರಿದಂತೆ, ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು. ಸಂಜೆಯಾಗುತ್ತಿದ್ದಂತೆ ಮಳೆ ಆಗಮಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv