ಮುಂಬೈ: ಮಾಜಿ ವಿಶ್ವಸುಂದರಿ, ಬಾಲಿವುಡ್ ತಾರೆಹಾಗೂ ನೀಲಿಕಣ್ಣಿನ ಚೆಲುವೆ ಐಶ್ವರ್ಯಾ ರೈಗೆ ಇಂದು 44ನೇ ಹುಟ್ಟು ಹಬ್ಬದ ಸಂಭ್ರಮ. ಆದ್ರೆ ಈ ಬಾರಿ ರೈಯವರು ತಮ್ಮ ಹುಟ್ಟುಹಬ್ಬವನ್ನು ಅಷ್ಟೊಂದು ಅದ್ಧೂರಿಯಾಗಿ ಆಚರಿಸುತ್ತಿಲ್ಲ.
ಕಳೆದ ಮಾರ್ಚ್‍ನಲ್ಲಿ ಐಶ್ವರ್ಯಾ ರೈ ಅವರ ತಂದೆ ಕೃಷ್ಣ ರಾಜ್ ರೈ ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಐಶ್ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿಲ್ಲ. ಮೂಲಗಳ ಪ್ರಕಾರ ಐಶ್ವರ್ಯಾ ರೈ ಇಂದು ತಮ್ಮ ಇಡೀ ದಿನವನ್ನು ಕುಟುಂಬದೊಂದಿಗೆ ಕಳೆಯಲಿದ್ದಾರೆ. ಬೆಳಗ್ಗೆ ಮಗಳು ಆರಾಧ್ಯಳನ್ನು ಶಾಲೆಗೆ ಡ್ರಾಪ್ ಮಾಡಿ ಅಲ್ಲಿಂದ ನೇರವಾಗಿ ಮುಂಬೈನಲ್ಲಿರೋ ಬಾಂದ್ರಾ ಅಪಾರ್ಟ್‍ನಲ್ಲಿ ನೆಲೆಸಿರೋ ತನ್ನ ತಾಯಿಯ ಜೊತೆ ಅಮೂಲ್ಯ ಸಮಯ ಕಳೆಯಲಿದ್ದಾರೆ. ನಂತ್ರ ನಗರದಲ್ಲಿರೋ ಸಿದ್ದಿವಿನಾಯಕ ದೇವಸ್ಥಾನಕ್ಕೆ ತೆರಳಲಿದ್ದಾರೆ ಅಂತ ಐಶ್ವರ್ಯಾ ಆಪ್ತ ಮೂಲಗಳು ತಿಳಿಸಿವೆ.
Advertisement
Advertisement
ಇತ್ತ ಪತಿ ಅಭಿಷೇಕ್ ಬಚ್ಚನ್ ಹಾಗೂ ಮಗಳು ಆರಾಧ್ಯ ಸೇರಿ ಐಶ್ವರ್ಯಾ ರೈ ನೆಚ್ಚಿನ ಕೇಕ್ ಆರ್ಡರ್ ಮಾಡಿದ್ದಾರೆ. ಇಂದು ಸಂಜೆ ಕುಟುಂಬದೊಂದಿಗೆ ಇದ್ದು ಐಶ್ವರ್ಯಾ ಈ ಕೇಕ್ ಕತ್ತರಿಸಿ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
Advertisement
ಪ್ರತಿ ವರ್ಷ ಐಶ್ವರ್ಯಾ ರೈ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು. ಕಳೆದ ವರ್ಷ ತಮ್ಮ ಬರ್ತ್ ಡೇ ದಿನದಂದು ಸುಮಾರು 100 ಸೀಳು ತುಟಿಯ ಮಕ್ಕಳ ಸರ್ಜರಿಗೆ ಧನಸಹಾಯ ಮಾಡಿದ್ದರು. ಈ ಬಾರಿ ಅನಾಥ ಮಕ್ಕಳಿಗೆ ಅನ್ನದಾನ ಮಾಡಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
Advertisement
ಕರ್ನಾಟಕದ ಮಂಗಳೂರಿನಲ್ಲಿ ತಂದೆ ಕೃಷ್ಣರಾಜ್ ರೈ ಮತ್ತು ತಾಯಿ ಬೃಂದಾ ರೈ ಮಗಳಾಗಿ 1973ರ ನವೆಂಬರ್ 1 ರಂದು ಐಶ್ವರ್ಯಾ ರೈ ಜನಿಸಿದ್ದಾರೆ. ಮುಂಬಯಿ ನಗರದಲ್ಲಿ ಡಿ ಜಿ ರೂಪಾರೆಲ್ ಕಾಲೇಜ್ ಮತ್ತು ಆರ್ಯ ವಿದ್ಯಾ ಕಾಲೇಜಿನಲ್ಲಿ ಓದಿದ ಐಶ್ವರ್ಯಾ ಒಂಬತ್ತನೆಯ ತರಗತಿಯಲ್ಲಿ ಇದ್ದ ಸಂದರ್ಭದಲ್ಲಿಯೇ ಕ್ಯಾಮೆಲಿನ್ ಸಂಸ್ಥೆಗೆ ಮಾಡೆಲ್ ಆಗಿ ಕೆಲಸ ಮಾಡಿದ್ದರು. ನಂತರ ಅನೇಕ ಜಾಹೀರಾತುಗಳಲ್ಲಿ ನಟಿಸಿದ ಐಶ್ವರ್ಯಾ ಪ್ರಪಂಚಸುಂದರಿ ಪ್ರಶಸ್ತಿಯನ್ನು ಗೆದ್ದ ಮೇಲೆ ಪ್ರಸಿದ್ಧರಾದರು. ಇದರ ನಂತರ ಅನೇಕ ಚಿತ್ರಗಳಲ್ಲಿ ಮತ್ತು ಜಾಹೀರಾತುಗಳಲ್ಲಿ ನಟಿಸಿದ್ದಾರೆ.
2007ರಲ್ಲಿ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರನ್ನು ವಿವಾಹದ ನಟಿ ಐಶ್ವರ್ಯಾ ರೈ 2011ರ ನವೆಂಬರ್ 16ರಂದು ಆರಾಧ್ಯಳಿಗೆ ಜನ್ಮ ನೀಡಿದ್ದರು.
https://www.instagram.com/p/Ba79sh6AJKA/?taken-by=manishmalhotra05
https://www.instagram.com/p/Ba7E0mgAz0x/?taken-by=karanjohar