ಲಂಡನ್: ಕಳೆದ ಮೂರು ವರ್ಷಗಳಿಂದ ವಿಶ್ವಕಪ್ ಟೂರ್ನಿಯಲ್ಲಿ ಆಡಬೇಕು ಎಂಬುವುದು ನನ್ನ ಗುರಿಯಾಗಿದ್ದು, ಅದಕ್ಕಾಗಿ ಹೆಚ್ಚು ಶ್ರಮ ವಹಿಸಿದ್ದೇನೆ ಎಂದು ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಹಿನ್ನೆಲೆಯಲ್ಲಿ ಐಸಿಸಿ ಸಂದರ್ಶನದಲ್ಲಿ ಮಾತನಾಡಿದ ಹಾರ್ದಿಕ್, ಸದ್ಯ ನಾನು ಇಂಗ್ಲೆಂಡಿನಲ್ಲಿರುವುದು ಕೇವಲ ವಿಶ್ವಕಪ್ ಗೆಲುವು ಪಡೆಯಲು ಮಾತ್ರ. ತನ್ನ ಜೀವನದಲ್ಲಿ ಭಾರತ ಪರ ವಿಶ್ವಕಪ್ ಕ್ರಿಕೆಟ್ ಆಡವುದು ನನ್ನ ಕೋರಿಕೆ ಆಗಿತ್ತು. ಅದಕ್ಕಾಗಿಯೇ ಸಾಕಷ್ಟು ಶ್ರಮ ವಹಿಸಿದ್ದೆ ಎಂದಿದ್ದಾರೆ.
Advertisement
" ???????? means everything to me. This is my life."
"I am a happy soul no matter what happens"
"On 14th July I want to have the ???? in my hand"
How will #TeamIndia's rockstar Hardik Pandya fare in #CWC19 today? pic.twitter.com/kTZNoY2IlN
— ICC Cricket World Cup (@cricketworldcup) June 13, 2019
Advertisement
ಟೀಂ ಇಂಡಿಯಾ ನನಗೆ ಬೇಕಾದ ಎಲ್ಲವನ್ನು ನೀಡಿದ್ದು, ಕ್ರಿಕೆಟ್ ನನ್ನ ಜೀವನವೇ ಆಗಿದೆ. ಟೀಂ ಇಂಡಿಯಾ ಪರ ಆಡುವುದನ್ನು ಎಷ್ಟು ಪ್ರೀತಿಸುತ್ತೇನೆ ಅಷ್ಟೇ ಆಟದಲ್ಲಿ ಎದುರಾಗುವ ಚಾಲೆಂಜ್‍ಗಳನ್ನು ಸ್ವೀಕರಿಸಲು ಇಷ್ಟ ಪಡುತ್ತೇನೆ. ಇಂದು ಅಂತಹ ಚಾಲೆಂಜ್ ಎದುರಿಸುವ ಸಮಯ ಬಂದಿದ್ದು, ಜುಲೈ 14 ರಂದು ವಿಶ್ವಕಪ್ ನನ್ನ ಕೈಯಲ್ಲಿರಬೇಕು ಎಂದು ಆಸೆ ಪಡುತ್ತಿದ್ದೇನೆ. 2011ರ ವಿಶ್ವಕಪ್ ನನ್ನ ಗೆದ್ದ ಸಂದರ್ಭವನ್ನು ನೆನಪಿಸಿಕೊಂಡರೆ ಈಗಲು ನನಗೆ ಅಷ್ಟೇ ಥ್ರಿಲ್ ಆಗುತ್ತದೆ. 2019ರ ವಿಶ್ವಕಪ್ ಗೆಲ್ಲಲು ಸರ್ವ ಪ್ರಯತ್ನವನ್ನು ಹಾಕುತ್ತಿದ್ದೇನೆ ಎಂದ ಪಾಂಡ್ಯ ಹೇಳಿದ್ದಾರೆ.
Advertisement
ಇದೇ ಸಂದರ್ಭದಲ್ಲಿ ವಿಶ್ವಕಪ್ ಒತ್ತಡ ಕುರಿತ ಪ್ರಶ್ನೆಗೆ ಉತ್ತರಿಸುವ ಪಾಂಡ್ಯ, ನನಗೆ ಯವುದೇ ರೀತಿಯ ಒತ್ತಡ ಇಲ್ಲ. ಏಕೆಂದರೆ 1.5 ಬಿಲಿಯನ್ ಜನರು ಇದನ್ನೇ ಆಸೆ ಪಡುತ್ತಿದ್ದಾರೆ ಎಂದಿದ್ದಾರೆ.
Advertisement
As we gear up for #TeamIndia's fixture in Trent Bridge, @imkuldeep18 & @hardikpandya7 relive their Nottingham memories #CWC19 pic.twitter.com/H9AEorEoa1
— BCCI (@BCCI) June 13, 2019
ಇತ್ತ ನ್ಯೂಜಿಲೆಂಡ್ ವಿರುದ್ಧ ಪಂದ್ಯಕ್ಕೆ ವರುಣ ಅಡ್ಡಿಪಡಿಸಿದ್ದು, ಈಗಾಗಲೇ ಪಂದ್ಯದ ಟಾಸ್ ಕೂಡ ತಡವಾಗಿದೆ. ಭಾರತೀಯ ಕಾಲಮಾನ ಅನ್ವಯ 2.30ಕ್ಕೆ ಟಾಸ್ ಆಗಬೇಕಿತ್ತು. ಆದರೆ ಮಳೆಯ ಮತ್ತೆ ಅಡ್ಡಿಪಡಿಸಿದ ಕಾರಣ ಟಾಸ್ ವಿಳಂಬವಾಗಿದೆ. ಈಗಾಗಲೇ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ 3 ಪಂದ್ಯಗಳು ಮಳೆಯಿಂದ ರದ್ದಾಗಿದ್ದು ತೀವ್ರ ನಿರಾಸೆ ಮೂಡಿಸಿದೆ.