ಬೆಂಗಳೂರು: ಡೆಡ್ಲಿ ಕೊರೊನಾ ಮತ್ತೆ ಕಮ್ ಬ್ಯಾಕ್ ಮಾಡಿದೆ. ಈ ಬಾರಿಯ ಹೊಸ ತಳಿ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ನಾಲ್ಕು ರಾಷ್ಟ್ರಗಳಲ್ಲಿ ಸೋಂಕು ಹಬ್ಬುತ್ತಿದ್ದಂತೆ ಭಾರತ ಸರ್ಕಾರವೂ ಫುಲ್ ಅಲರ್ಟ್ ಆಗಿದೆ. ಜೊತೆಗೆ ಕರ್ನಟಕ ಸೇರಿದಂತೆ ಎಲ್ಲಾ ರಾಜ್ಯಗಳು ಕೂಡ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.
Advertisement
ಇಡೀ ಮನುಕುಲವನ್ನು 2 ವರ್ಷಗಳಿಂದ ಬಿಟ್ಟುಬಿಡದೆ ಕಾಡುತ್ತಿರುವ ಕೊರೊನಾ ಮತ್ತೆ ವಕ್ಕರಿಸಿದೆ. ಕೊರೊನಾ ಕತೆ ಮುಗೀತು ಅಂತ ಇಡೀ ಜಗತ್ತು ಭಾವಿಸಿದ ಹೊತ್ತಲ್ಲಿ, ಓಮಿಕ್ರಾನ್ ಅಥವಾ B.1.1.529 ರೂಪ ಪಡೆದು ಹೆಮ್ಮಾರಿಯಾಗಿ ಮರುಪ್ರವೇಶವಾಗಿದೆ. ರೂಪಾಂತರಿಗಳಿಗಿಂತ ಭಯಂಕರ, ಡೆಲ್ಟಾಗಿಂತಲೂ ಅಪಾಯಕಾರಿ ಎನ್ನಲಾಗಿರುವ ಈ ವೈರಸ್ ಗುಣಲಕ್ಷಣವೇ ಬದಲಾಗಿದೆ. ಅತ್ಯಂತ ವೇಗವಾಗಿ ಜಗತ್ತನ್ನು ಆವರಿಸುವ ಶಕ್ತಿ ಪಡೆದಿರುವ ಓಮಿಕ್ರಾನ್ ಭಾರೀ ಡೇಂಜರಸ್ ಆಗಿದೆ. ಇದನ್ನೂ ಓದಿ: ಸರ್ಕಾರಿ ಕಚೇರಿ, ಮಾಲ್, ಹೋಟೆಲ್‍ಗಳಲ್ಲಿ ಕೆಲಸ ಮಾಡೋರಿಗೆ ಎರಡು ಡೋಸ್ ಕಡ್ಡಾಯ: ಆರ್. ಅಶೋಕ್
Advertisement
Advertisement
ದಕ್ಷಿಣ ಆಫ್ರಿಕಾದಲ್ಲಿ ಹೊಸ ರೂಪಾಂತರಿ ತಳಿಯ ಓಮಿಕ್ರಾನ್ ಅಥವಾ B.1.1.529 ಎಂದು ಹೆಸರಿಟ್ಟಿರುವ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಈ ತಳಿಯಿಂದ ಒಬ್ಬ ವ್ಯಕ್ತಿಯಿಂದ ಉಳಿದವರಿಗೆ ಸೋಂಕು ಹಬ್ಬುವ ಪ್ರಮಾಣ ಉಳಿದ ರೂಪಾಂತರಿಗಿಂತ ಅಧಿಕವಾಗಿದೆ. ಈಗಾಗಲೇ ದಕ್ಷಿಣ ಆಫ್ರಿಕಾದಲ್ಲಿ 77 ಮಂದಿಯಲ್ಲಿ ಕಾಣಿಸಿಕೊಂಡಿದ್ದು, ವಿಶ್ವಾದ್ಯಂತ 87 ಮಂದಿಯಲ್ಲಿ ಕಾಣಿಸಿಕೊಂಡಿದೆ. ಹಾಗಾಗಿ ಭಾರತಕ್ಕೆ ದಕ್ಷಿಣ ಆಫ್ರಿಕಾ ಸೇರಿದಂತೆ 10 ಹೈರಿಸ್ಕ್ ದೇಶಗಳ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ಇಡಲಾಗಿದ್ದು, 10 ದೇಶಗಳಿಂದ ಕಳೆದ ಹತ್ತು ದಿನಗಳಲ್ಲಿ 584 ಜನ ಬಂದಿದ್ದಾರೆ. ಅವರಲ್ಲಿ ದಕ್ಷಿಣ ಆಫ್ರಿಕಾದಿಂದ 94 ಜನ ಪ್ರಯಾಣಿಕರು ಬೆಂಗಳೂರಿಗೆ ಆಗಮಿಸಿದ್ದಾರೆ. ಅವರ ಪೈಕಿ ಇಬ್ಬರಲ್ಲಿ ಕೊರೊನಾ ಸೊಂಕು ಪತ್ತೆಯಾಗಿದೆ. ಇದನ್ನೂ ಓದಿ: ಲಸಿಕೆ ಪಡೆದವರಲ್ಲಿಯೂ ಒಮಿಕ್ರಾನ್ ಹೊಸ ತಳಿ ಪತ್ತೆ – ಆತಂಕ ಯಾಕೆ?
Advertisement
2 ಡೋಸ್ ಆಗಿದ್ರೂ ತಪ್ಪಿಸಿಕೊಳ್ಳೋಕೆ ಕಷ್ಟ:
ಎರಡು ಡೋಸ್ ತೆಗೆದುಕೊಂಡವರಲ್ಲಿಯೂ ಇದು ಕಂಡುಬರ್ತಿರೋದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಈವರೆಗೂ ಡಬಲ್ ಡೋಸ್ ಪಡೆದವರ ಪ್ರಮಾಣ ಶೇಕಡಾ 24 ಹೀಗಾಗಿ ಅಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ ಶರವೇಗದಲ್ಲಿ ಹೆಚ್ಚುತ್ತಿದೆ. ಮನುಷ್ಯನಲ್ಲಿನ ರೋಗನಿರೋಧಕ ಶಕ್ತಿಯನ್ನು ವಂಚಿಸುವ ಸಾಮರ್ಥ್ಯ ಹೊಂದಿರುವ ಈ ವೈರಸ್, ರೋಗನಿರೋಧಕ ವ್ಯವಸ್ಥೆಯ ಇತರೆ ಭಾಗಗಳ ಮೇಲೆ ದಾಳಿ ಮಾಡಲಿದೆ. ಹೀಗಾಗಿ, 2 ಡೋಸ್ ವ್ಯಾಕ್ಸಿನ್ ಪ್ರಭಾವ ಇದರ ಮೇಲೆ ಶೇ.60ರಷ್ಟು ಆಗುವ ಸಾಧ್ಯತೆ ಇದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ಆತಂಕ- ಅಂತಾರಾಷ್ಟ್ರೀಯ ವಿಮಾನಯಾನ ನಿರ್ಬಂಧ ಸಡಿಲಗೊಳಿಸುವ ಯೋಜನೆ ಪರಾಮರ್ಶಿಸಲು ಪ್ರಧಾನಿ ಸೂಚನೆ
ಹೊಸ ವೈರಸ್, ಹೊಸ ಲಕ್ಷಣ:
ಹೆಚ್ಚು ಸುಸ್ತು, 5 ದಿನದ ಬಳಿಕ ಜ್ವರ ಜಾಸ್ತಿ, ಬಿಟ್ಟು ಬಿಟ್ಟು ಜ್ವರ, ಶೀತ, ಕೆಮ್ಮು, ನೆಗಡಿ, ಉಸಿರಾಟದ ಸಮಸ್ಯೆ, ಮೈ ನಡುಗುವಿಕೆ, ಸ್ನಾಯು ಸೆಳೆತ, ತಲೆ ನೋವು, ಗಂಟಲು ನೋವು, ರುಚಿ, ವಾಸನೆ ಕಳೆದುಕೊಳ್ಳುವುದು ಇನ್ನಿತರ ಲಕ್ಷಣಗಳು ಕಂಡು ಬರುತ್ತಿವೆ ಎಂದು ತಜ್ಞರು ತಿಳಿಸಿದ್ದಾರೆ.
ಹೊಸ ತಳಿ ಆತಂಕ ಯಾಕೆ?:
ಮೂಲ ಕೊರೊನಾ ವೈರಾಣುವಿನಲ್ಲಿದ್ದ ಸ್ಪೈಕ್ ಪ್ರೊಟೀನ್‍ಗಳು ಮನುಷ್ಯನ ದೇಹವನ್ನು ಸೇರಲು ನೆರವಾಗುವ ಮುಳ್ಳುಗಳ ಸಂಖ್ಯೆ ಕಡಿಮೆ ಇತ್ತು. ಆದರೆ ಆಲ್ಫಾ ತಳಿಯಲ್ಲಿ ಈ ಸಂಖ್ಯೆ ಸ್ವಲ್ಪ ಹೆಚ್ಚಾಗಿತ್ತು. ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ತಳಿಗಳಲ್ಲಿ ಇವುಗಳ ಸಂಖ್ಯೆ ಅಪಾಯಕಾರಿ ಮಟ್ಟಕ್ಕೆ ಏರಿಕೆಯಾಗಿತ್ತು. ಇವುಗಳ ಸಂಖ್ಯೆ ಹೆಚ್ಚಿದ್ದಷ್ಟೂ, ಸೂಪರ್ ಸ್ಪ್ರೆಡ್ ಆಗುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಬಿ.1.1.529 ತಳಿಯ ಪ್ರತೀ ವೈರಾಣುವಿನಲ್ಲಿ ಇಂತಹ 50 ಸ್ಪೈಕ್ ಪ್ರೊಟೀನ್‍ಗಳು ಇವೆ. ಹೀಗಾಗಿ ಇದು ಡೇಂಜರ್ ಎನ್ನಲಾಗಿದೆ.
ಡೇಂಜರ್ ಡೆಲ್ಟಾವನ್ನೂ ಮೀರಿಸಿದ ಓಮಿಕ್ರಾನ್
ಡೆಲ್ಟಾ ವೈರಸ್‍ಗಿಂತ ಓಮಿಕ್ರಾನ್ ಹೆಚ್ಚು ಎಫೆಕ್ಟಿವ್ ಆಗಿದೆ. ಹಾಗಾಗಿ, ಇದನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬೇಕು. ಮುಂಜಾಗ್ರತಾ ಕ್ರಮಗಳನ್ನು ವಹಿಸಿದರೆ ತೊಂದರೆಯಾಗುವುದಿಲ್ಲ. ಬದಲಾಗಿ ನಿರ್ಲಕ್ಷ ವಹಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಪ್ರಾರಂಭಿಕ ಹಂತದಲ್ಲೇ ಇದನ್ನು ತಡೆಯೋದು ಸೂಕ್ತ. ಜನರಲ್ಲಿ ಇಮ್ಯೂನಿಟಿ ಕಡಿಮೆ ಆಗುತ್ತಿದೆ. ಎಲ್ಲರೂ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಎಂದು ತಜ್ಞ ವೈದ್ಯರು ಎಚ್ಚರಿಸಿದ್ದಾರೆ.