ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್-19 ರೂಪಾಂತರ ಓಮಿಕ್ರಾನ್ ಹರಡುವಿಕೆ ದಿನೇ ದಿನೇ ಹೆಚ್ಚಾಗುತ್ತಿದ್ದು, ನಿನ್ನೆ ಸಂಜೆ ವೇಳೆ ಒಂದೇ ದಿನ 26 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರಿಂದಾಗಿ ರಾಜ್ಯದಲ್ಲಿ ಸೋಂಕು ಪೀಡಿತರ ಸಂಖ್ಯೆ 167 ಕ್ಕೆ ಏರಿದೆ.
26 ಹೊಸ ಪ್ರಕರಣಗಳಲ್ಲಿ, ಇಬ್ಬರು ಅಪಾಯ ಇರುವ ದೇಶಗಳಿಂದ ಬಂದವರಾಗಿದ್ದು, ಉಳಿದವರು ಅಂತಾರಾಷ್ಟ್ರೀಯ ಪ್ರಯಾಣದ ಇತಿಹಾಸವನ್ನು ಹೊಂದಿದ್ದಾರೆ. ಸೋಂಕಿಗೆ ಒಳಗಾದವರಲ್ಲಿ 14 ಪುರುಷರು ಮತ್ತು 12 ಮಹಿಳೆಯರು, ನಾಲ್ವರು 18 ವರ್ಷದೊಳಗಿನವರಾಗಿದ್ದಾರೆ. ಇಬ್ಬರು 60 ವರ್ಷಕ್ಕಿಂತ ಮೇಲ್ಪಟ್ಟವರು. ಇಲ್ಲಿಯವರೆಗೆ ರಾಜ್ಯದಲ್ಲಿ 167 ಪ್ರಕರಣಗಳು ದೃಢಪಟ್ಟಿದ್ದು, 72 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಸೆರಮ್ ಸಂಸ್ಥೆಯ 2ನೇ ಲಸಿಕೆ ಕೋವೊವ್ಯಾಕ್ಸ್ ತುರ್ತು ಬಳಕೆಗೆ ಶಿಫಾರಸು
Advertisement
Advertisement
ಮಹಾರಾಷ್ಟ್ರ ಸರ್ಕಾರದ ಕೋವಿಡ್-19 ಕಾರ್ಯಪಡೆಯ ಸದಸ್ಯರು, ರಾಜ್ಯದಲ್ಲಿ ಕೊರೊನಾ ವೈರಸ್ ಹೊಸ ರೂಪಾಂತರದ ಪ್ರಕರಣಗಳು ಹೆಚ್ಚುತ್ತಲೇ ಇದ್ದರೆ ಅಲ್ಪಾವಧಿಗೆ ನಿರ್ಬಂಧಗಳನ್ನು ಪರಿಗಣಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Advertisement
ನಗರದ ಆಸ್ಪತ್ರೆಯೊಂದರಲ್ಲಿ ಸಾಂಕ್ರಾಮಿಕ ರೋಗಗಳ ಸಲಹೆಗಾರ ಡಾ.ವಸಂತ್ ನಾಗ್ವೇಕರ್, ಓಮಿಕ್ರಾನ್ ಖಂಡಿತವಾಗಿಯೂ ಸವಾಲುಗಳನ್ನು ಒಡ್ಡುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ಭೀತಿ – ಡಿ.30ರಿಂದ ಕೇರಳದಲ್ಲಿ ನೈಟ್ ಕರ್ಫ್ಯೂ
Advertisement