-ಗಾಳಿ ಸುದ್ದಿ ನಂಬಿ ಗ್ರಾಮೀಣ ಭಾಗದಲ್ಲಿ ಮೌಢ್ಯತೆ ಆಚರಣೆ
ಯಾದಗಿರಿ: ದೇಶದಲ್ಲಿ ಕೊರೊನಾ ಮೂರನೇ ಅಲೆ ಮತ್ತು ಓಮಿಕ್ರಾನ್ ವೈರಸ್ ಆತಂಕದ ಹೆಚ್ಚಾಗಿದೆ. ಓಮಿಕ್ರಾನ್ ತಡೆಗಟ್ಟಲು ಇಡೀ ವೈದ್ಯಕೀಯ ಲೋಕವೆ ತಲೆ ಕೆಡಿಸಿಕೊಂಡಿದೆ. ಆದರೆ ಯಾದಗಿರಿಯಲ್ಲಿ ಮಾತ್ರ ಓಮಿಕ್ರಾನ್ ಬಾರದಂತೆ ಬೇವಿನ ಮರಕ್ಕೆ ಭರ್ಜರಿ ಪೂಜೆ ಮಾಡಲಾಗಿದೆ.
Advertisement
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಓಮಿಕ್ರಾನ್ ಮಾರಮ್ಮ ಬಾರದಂತೆ ಇಂದು, ಬೇವಿನ ಮರಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಲಾಗಿದೆ. ಕೋವಿಡ್ ಮೂರನೇ ಅಲೆ ಬಾರದಂತೆ ಬೇವಿನ ಮರಕ್ಕೆ ಪೂಜೆ ಮಾಡಲು ಗ್ರಾಮೀಣ ಜನ ಮುಂದಾಗಿದ್ದಾರೆ. ಬೇವಿನ ಮರಕ್ಕೆ ಪೂಜೆ ಮಾಡಿ ಹೊಳಿಗೆ ಎಡೆಯಿಡಲಾಯಿತ್ತು. ಇದನ್ನೂ ಓದಿ ಕೊರೊನಾ ಆತಂಕ- ಯಾದಗಿರಿಯಲ್ಲಿ ಸಿದ್ಧವಾಯ್ತಿ ಹೈಟೆಕ್ ಐಸಿಯು ವಾರ್ಡ್
Advertisement
Advertisement
ಓಮಿಕ್ರಾನ್ ಮಕ್ಕಳಿಗೆ ಬರಬೇಕಿತ್ತು, ಆದರೆ ಬೇವಿನ ಮರಕ್ಕೆ ಬಂದಿದೆ. ಬೇವಿನ ಮರ ಓಮಿಕ್ರಾನ್ ರೋಗವನ್ನು ತಾನು ತೆಗೆದುಕೊಂಡು, ಮನುಷ್ಯ ಕುಲವನ್ನು ಉಳಿಸಿದೆ ಅಂತ ಯಾರೋ ಸ್ವಾಮೀಜಿ ಹೇಳಿದ್ದಾರೆಂಬ ಗಾಳಿ ಸುದ್ದಿ ಹಬ್ಬಿದೆ. ಈ ಗಾಳಿ ಸುದ್ದಿ ನಂಬಿ ಜನರು ಈ ರೀತಿಯ ಮೌಢ್ಯತೆ ಆಚರಣೆಯಲ್ಲಿ ತೊಡಗಿದ್ದಾರೆ. ಇದನ್ನೂ ಓದಿ: ವಿಚ್ಛೇದನದ ಬಳಿಕ ಕುಗ್ಗಿಹೋಗಿ, ಸಾಯುವ ಹಂತ ತಲುಪುತ್ತೇನೆ ಎಂದುಕೊಂಡಿದ್ದೆ: ಸಮಂತಾ