ಬೆಂಗಳೂರು: ಕೊರೊನಾ ವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆದವರಿಗಾಗಿ ಕರ್ನಾಟಕ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿಯೊಂದನ್ನು ಹೊರಡಿಸಿದೆ.
Advertisement
ಭಾರತದಲ್ಲೇ ಮೊದಲ ಬಾರಿಗೆ ಕರ್ನಾಟಕ ರಾಜ್ಯದಲ್ಲಿ ಎರಡು ಓಮಿಕ್ರಾನ್ ಪ್ರಕರಣಗಳು ದೃಢಪಟ್ಟಿದ್ದವು. ಓಮಿಕ್ರಾನ್ ರಾಜ್ಯಕ್ಕೆ ವಕ್ಕರಿಸಿದರೂ ರಾಜ್ಯ ಸರ್ಕಾರ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಓಮಿಕ್ರಾನ್ ರೋಗಿಗಳಿಗೆ ಚಿಕಿತ್ಸೆ ಪ್ರಕ್ರಿಯೆ, ಡಿಸ್ಚಾರ್ಜ್ ಆದ ನಂತರ ಹೇಗಿರಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಯಾವುದೇ ಮಾರ್ಗಸೂಚಿ ಹೊರಡಿಸಿಲ್ಲ ಎಂದು ಪ್ರತಿಪಕ್ಷಗಳು ತರಾಟೆಗೆ ತೆಗೆದುಕೊಂಡಿದ್ದವು. ಇದರಿಂದ ಎಚ್ಚೆತ್ತ ಸರ್ಕಾರ ಇದೀಗ ಮಾರ್ಗಸೂಚಿ ಹೊರಡಿಸಿದೆ. ಇದನ್ನೂ ಓದಿ: ಅಧಿವೇಶನಕ್ಕೆ ಹಾಜರಾಗುವವರಿಗೆ ಎರಡು ಡೋಸ್ ಲಸಿಕೆ, ಆರ್‌ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ದಾಯ: ವೆಂಕಟೇಶ್ ಕುಮಾರ್
Advertisement
Advertisement
ಮಾರ್ಗಸೂಚಿಯಲ್ಲಿ ಏನಿದೆ?
ಓಮಿಕ್ರಾನ್ ಸೋಂಕಿಗೆ ಒಳಗಾದ ರೋಗಿಯು ಆರೋಗ್ಯ ಇಲಾಖೆಯ ಮಾನದಂಡಗಳನ್ನು ಪೂರೈಸಿದರೆ, 10 ದಿನಗಳ ನಂತರ ಅವರನ್ನು ಬಿಡುಗಡೆ ಮಾಡಬಹುದು. ಅದಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಹೊರಡಿಸಿದೆ.
Advertisement
Discharge Policy – COVID-19 (Omicron) recovered persons from
Hospitals.@cmofKarnataka @mla_sudhakar @Comm_dhfwka @HubballiRailway@KodaguConnect @IChangeMyCity@WeAreBangalore @bangalore@Belagavi_infra @PIBBengaluru @KarnatakaVarthe pic.twitter.com/InJKiYM224
— K'taka Health Dept (@DHFWKA) December 10, 2021
ಸತತ ಮೂರು ದಿನಗಳು ಯಾವುದೇ ರೋಗಲಕ್ಷಣಗಳಿಲ್ಲದಿದ್ದರೆ, ಸತತ ನಾಲ್ಕು ದಿನಗಳವರೆಗೆ O2 ಮಟ್ಟ ಶೇ. 95 ಇದ್ದರೆ (ಆಮ್ಲಜನಕ ಸಪೋರ್ಟ್ ಇಲ್ಲದೇ), 24 ಗಂಟೆ ಅವಧಿಯಲ್ಲಿ 2 ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದ್ದರೆ ಅಂತಹವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಬಹುದು.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ವ್ಯಕ್ತಿ, ಒಂದು ವಾರದ ಅವಧಿಗೆ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕು. ನಂತರ ರೋಗಲಕ್ಷಣಗಳ ಬಗ್ಗೆ ಸ್ವಯಂ ನಿಗಾವಹಿಸಬೇಕು. ಅದಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿರುತ್ತದೆ. ಇದನ್ನೂ ಓದಿ: ಮಹಾರಾಷ್ಟ್ರದ ಮೊದಲ ಓಮಿಕ್ರಾನ್ ಸೋಂಕಿತ ಗುಣಮುಖ- ಆಸ್ಪತ್ರೆಯಿಂದ ಡಿಸ್ಚಾರ್ಜ್
ಹೋಂ ಕ್ವಾರಂಟೈನ್‌ನಲ್ಲಿದ್ದು 6ನೇ ದಿನ ಆರ್‌ಟಿ-ಪಿಸಿಆರ್ ಪರೀಕ್ಷೆ ಮಾಡಿಸಿದಾಗ ನೆಗೆಟಿವ್ ಬಂದರೆ ಅಂತಹವರು ಕ್ವಾರಂಟೈನ್ ಅನ್ನು ಕೊನೆಗೊಳಿಸಬಹುದು.
ತೀವ್ರತರವಾದ ಪ್ರಕರಣಗಳಲ್ಲಿ, ರೋಗಿಯು ಸಂಪೂರ್ಣ ಗುಣಮುಖನಾದ ನಂತರ ಮೂರು ದಿನದ ನಂತರ 24 ಗಂಟೆಗಳ ಅವಧಿಯಲ್ಲಿ 2 ಆರ್‌ಟಿ-ಪಿಸಿಆರ್ ಪರೀಕ್ಷೆ ಮಾಡಿಸಿ ನೆಗೆಟಿವ್ ಬರಬೇಕು.