ಕೋಲ್ಕತ್ತಾ: ಪಶ್ಚಿಮ ಬಂಗಾಳದ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರೊಬ್ಬರಲ್ಲಿ ಕೊರೊನಾ ರೂಪಾಂತರಿ ಓಮಿಕ್ರಾನ್ ಕಂಡುಬಂದಿದೆ. ಇತ್ತೀಚೆಗೆ ಅವರು ಯಾವುದೇ ಪ್ರಯಾಣ ಮಾಡಿಲ್ಲ ಎಂಬ ಮಾಹಿತಿ ಆತಂಕ ಮೂಡಿಸಿದೆ.
ವೈದ್ಯನಲ್ಲಿ ಕೋವಿಡ್ ಸೋಂಕಿನ ಲಕ್ಷಣ ಕಂಡು ಬಂದಿದ್ದು, ಅವರನ್ನು ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಶುಕ್ರವಾರ ಅವರ ವರದಿ ಪಾಸಿಟಿವ್ ಬಂದಿದೆ.
Advertisement
ವೈದ್ಯ ನಾಡಿಯಾ ಜಿಲ್ಲೆಯ ಕೃಷ್ಣನಗರದವರಾಗಿದ್ದು, ಯಾವುದೇ ಅಂತಾರಾಷ್ಟ್ರೀಯ ಪ್ರಯಾಣದ ಇತಿಹಾಸ ಹೊಂದಿಲ್ಲ. ಸದ್ಯ ರೋಗಿಯನ್ನು ಕೋಲ್ಕತ್ತಾದ ಬೆಳೆಘಾಟಾ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇದನ್ನೂ ಓದಿ: ವಡಿವೇಲುಗೆ ಕೊರೊನಾ- ಓಮಿಕ್ರಾನ್ ಸೋಂಕು ಶಂಕೆ
Advertisement
Advertisement
ಪಶ್ಚಿಮ ಬಂಗಾಳದಲ್ಲಿ ಡಿಸೆಂಬರ್ 15ರಂದು ಮೊದಲ ಓಮಿಕ್ರಾನ್ ಪ್ರಕರಣ ವರದಿಯಾಗಿತ್ತು. ಅಬುದಾಭಿಯಿಂದ ಹಿಂದಿರುಗಿದ್ದ 7 ವರ್ಷದ ಬಾಲಕನಲ್ಲಿ ಓಮಿಕ್ರಾನ್ ಸೋಂಕು ಕಂಡು ಬಂದಿತ್ತು. ಡಿಸೆಂಬರ್ 23 ರಂದು ಇನ್ನೂ ಎರಡು ಪ್ರಕರಣಗಳು ದಾಖಲಾಗಿದ್ದು, ಶುಕ್ರವಾರದ ವರದಿಯಿಂದ ಅಲ್ಲಿನ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 4ಕ್ಕೆ ಏರಿದೆ. ಇದನ್ನೂ ಓದಿ: ಬಟ್ಟೆ ಮಾಸ್ಕ್ ಬೇಡ.. ಎನ್95, ಕೆ95 ಮಾಸ್ಕ್‌ಗಳನ್ನೇ ಬಳಸಿ – ತಜ್ಞರ ಸಲಹೆ