CoronaLatestMain PostNational

ಫೆಬ್ರವರಿ ತಿಂಗಳಲ್ಲಿ ಕೋವಿಡ್‌ 3ನೇ ಅಲೆ ಸಾಧ್ಯತೆ: ಪ್ರೊ. ಮಣೀಂದ್ರ ಅಗರವಾಲ್‌

ನವದೆಹಲಿ: ಕೊರೊನಾ ವೈರಸ್‌ ಹೊಸ ರೂಪಾಂತರಿ ಓಮಿಕ್ರಾನ್‌ ಸೋಂಕು ಈಗಾಗಲೇ ಭಾರತದ ಕೆಲವು ರಾಜ್ಯಗಳಲ್ಲಿ ಕಾಣಿಸಿಕೊಂಡಿದ್ದು, ಫೆಬ್ರವರಿ ತಿಂಗಳಿಂದ ಮೂರನೇ ಅಲೆ ಭಾರತದಲ್ಲಿ ಆರಂಭವಾಗುವ ಸಾಧ್ಯತೆ ಇದೆ ಎಂದು ಐಐಟಿ ವಿಜ್ಞಾನಿ ಪ್ರೊ. ಮಣೀಂದ್ರ ಅಗರವಾಲ್‌ ತಿಳಿಸಿದ್ದಾರೆ.

ಗಣಿತಶಾಸ್ತ್ರೀಯ ಆಧಾರದ ಮೇಲೆ ಅವರು ಈ ಅಂದಾಜು ಮಾಡಿದ್ದಾರೆ. ಹೊಸ ರೂಪಾಂತರಿ ಓಮಿಕ್ರಾನ್‌ ಫೆಬ್ರವರಿ ತಿಂಗಳ ವೇಳೆಗೆ ದೇಶದಲ್ಲಿ ಮೂರನೇ ಅಲೆ ಪರಿಣಾಮವನ್ನು ನೋಡಬಹುದಾಗಿದೆ. ಆದರೆ ಇದು ಎರಡನೇ ಅಲೆಗಿಂತ ಸೌಮ್ಯವಾಗಿರುತ್ತದೆ. ಓಮಿಕ್ರಾನ್‌ ತೀವ್ರತೆಯು ಡೆಲ್ಟಾ ರೂಪಾಂತರದಂತೆ ಕಂಡುಬರುವುದಿಲ್ಲ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಕೇರಳದಿಂದ ಬಂದವರ ಮೇಲೆ ತೀವ್ರ ನಿಗಾ: ಮಾಧುಸ್ವಾಮಿ

ಓಮಿಕ್ರಾನ್‌ನ ಹೆಚ್ಚು ಪ್ರಕರಣಗಳು ವರದಿಯಾಗಿರುವ ದಕ್ಷಿಣ ಆಫ್ರಿಕಾದ ಬೆಳವಣಿಗೆಯನ್ನು ನಾವು ಗಮನಿಸಬಹುದು. ಅಲ್ಲಿ ಈವರೆಗೆ ಯಾರೂ ಆಸ್ಪತ್ರೆಗೆ ಸೇರುವಷ್ಟು ಸಮಸ್ಯೆ ಕಂಡುಬಂದಿಲ್ಲ ಎಂದು ಅಗರವಲ್‌ ವಿವರಿಸಿದ್ದಾರೆ.

ಓಮಿಕ್ರಾನ್‌ ಕುರಿತ ಅಂಕಿ-ಅಂಶ ಹಾಗೂ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ಸೇರುವವರ ಸಂಖ್ಯೆಯು ವೈರಸ್‌ ಹರಡುವಿಕೆಯ ಸ್ಪಷ್ಟ ಚಿತ್ರಣವನ್ನು ನೀಡಲಿದೆ. ಓಮಿಕ್ರಾನ್‌ ಅತಿ ವೇಗವಾಗಿ ಹರಡುತ್ತದೆ ಎಂದು ಹೇಳಲಾಗಿದ್ದರೂ, ಅದರ ಪರಿಣಾಮ ಅಷ್ಟಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ವಸತಿ ಶಾಲೆಯಲ್ಲಿ ಕೊರೊನಾ ಸ್ಫೋಟ- 93 ವಿದ್ಯಾರ್ಥಿಗಳು ಸೇರಿ 107 ಮಂದಿಗೆ ಪಾಸಿಟಿವ್

ದೇಶದಲ್ಲಿ ಈಗಾಗಲೇ ಕೆಲವು ರಾಜ್ಯಗಳಲ್ಲಿ ಓಮಿಕ್ರಾನ್‌ ಪ್ರಕರಣಗಳು ದೃಢಪಟ್ಟಿವೆ. ರಾಜಸ್ಥಾನ್‌ನಲ್ಲಿ 9, ಮಹಾರಾಷ್ಟ್ರದಲ್ಲಿ 10, ಕರ್ನಾಟಕದಲ್ಲಿ 2, ಗುಜರಾತ್‌ ಮತ್ತು ನವದೆಹಲಿಯಲ್ಲಿ ತಲಾ 1 ಪ್ರಕರಣ ದೃಢಪಟ್ಟಿದೆ.

Leave a Reply

Your email address will not be published.

Back to top button