ನವದೆಹಲಿ: ಕೊರೊನಾ ರೂಪಾಂತರವಾದ ಓಮಿಕ್ರಾನ್ ಭಯದಿಂದ ಭಾರತ ಅಂತರರಾಷ್ಟ್ರೀಯ ವಿಮಾನಗಳ ಪುನರಾರಂಭ ಮುಂದೂಡಲಾಗಿದೆ.
ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಹೊರಡಿಸಿದ ಸೂಚನೆಯ ಪ್ರಕಾರ, ಕೇಂದ್ರ ಸರ್ಕಾರವು ಪ್ರಸ್ತುತ ಜಾಗತಿಕ ಕೊರೊನಾವೈರಸ್ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ. ಇದನ್ನೂ ಓದಿ: 9ನೇ ತರಗತಿ ವಿದ್ಯಾರ್ಥಿಗೆ ಕೊರೊನಾ ದೃಢ – ಶಾಲೆಗೆ ರಜೆ
Advertisement
Advertisement
ವಿಶೇಷವಾಗಿ ಕೊರೊನಾ ಹೊಸ ರೂಪಾಂತರ ಓಮಿಕ್ರಾನ್ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
Advertisement
— DGCA (@DGCAIndia) December 1, 2021
Advertisement
ಜಾಗತಿಕ ಸನ್ನಿವೇಶದ ದೃಷ್ಟಿಯಿಂದ, ಎಲ್ಲರೊಂದಿಗೆ ಸಮಾಲೋಚಿಸಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಅಂತರರಾಷ್ಟ್ರೀಯ ವಿಮಾನವನ್ನು ಪುನರಾರಂಭ ಮಾಡಲು ದಿನಾಂಕವನ್ನು ಸೂಚಿಸಲು ಇನ್ನೂ ಸಮಯ ಬೇಕು. ಇದಕ್ಕೆ ಸೂಕ್ತ ನಿರ್ಧಾರವನ್ನು ಶೀಘ್ರದಲ್ಲೇ ತೆಗೆದುಕೊಂಡು ತಿಳಿಸಲಾಗುವುದು ಎಂದು ಡಿಜಿಸಿಎ ಟ್ವೀಟ್ ಮಾಡಿದೆ.