CoronaKarnatakaLatestMain Post

ರಾಜ್ಯದಲ್ಲಿ ಮುಂದುವರಿದ ಓಮಿಕ್ರಾನ್‌ ಸ್ಫೋಟ – ಇಂದು ಒಂದೇ ದಿನ 12 ಪ್ರಕರಣ ದೃಢ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್‌ ರೂಪಾಂತರಿ ಓಮಿಕ್ರಾನ್‌ ಹಾವಳಿ ಮುಂದುವರಿದಿದೆ. ಇಂದು ಒಂದೇ ದಿನ 12 ಓಮಿಕ್ರಾನ್‌ ಸೋಂಕು ಪ್ರಕರಣಗಳು ವರದಿಯಾಗಿವೆ.

ಬೆಂಗಳೂರು ಒಂದರಲ್ಲೇ 10 ಓಮಿಕ್ರಾನ್‌ ಸೋಂಕು ಪ್ರಕರಣಗಳು ವರದಿಯಾಗಿವೆ. ಮೈಸೂರಿನಲ್ಲಿ ಮೊದಲ ಬಾರಿಗೆ ಓಮಿಕ್ರಾನ್‌ ಕಾಣಿಸಿಕೊಂಡಿದ್ದು, ವಿದೇಶದಿಂದ ಬಂದಿದ್ದ 9 ವರ್ಷದ ಬಾಲಕಿಯಲ್ಲಿ ಸೋಂಕು ಪತ್ತೆಯಾಗಿದೆ. ಮಂಗಳೂರಿನಲ್ಲಿ 27 ವರ್ಷದ ಯುವಕನಿಗೆ ಸೋಂಕು ತಗುಲಿದೆ. ಇದನ್ನೂ ಓದಿ: ಮೈಸೂರಿನಲ್ಲಿ ಓಮಿಕ್ರಾನ್ ಮೊದಲ ಪ್ರಕರಣ ಪತ್ತೆ – 9 ವರ್ಷದ ಬಾಲಕಿಗೆ ಸೋಂಕು

ಡಿ.14ರಂದು ಬ್ರಿಟನ್‌ನಿಂದ ವಾಪಸ್ಸಾಗಿದ್ದ ಬೆಂಗಳೂರಿನ ಮಹಿಳೆಗೆ ಓಮಿಕ್ರಾನ್‌ ತಗುಲಿತ್ತು. ನಂತರ ಮಹಿಳೆ ಕುಟುಂಬದ ನಾಲ್ವರಿಗೂ ಸೋಂಕು ತಗುಲಿದೆ.

ರಾಜ್ಯದಲ್ಲಿ ಒಟ್ಟು ಓಮಿಕ್ರಾನ್‌ ಸೋಂಕು ಪ್ರಕರಣಗಳ ಸಂಖ್ಯೆ 31 ಕ್ಕೇರಿದೆ. ಇದನ್ನೂ ಓದಿ: ಓಮಿಕ್ರಾನ್‌ ಬಗ್ಗೆ ಸಿಕ್ತು ಗುಡ್‌ ನ್ಯೂಸ್‌ – ಪ್ರಾಥಮಿಕ ಅಧ್ಯಯನ ವರದಿಗಳು ಬಹಿರಂಗ

Leave a Reply

Your email address will not be published.

Back to top button