Connect with us

Bollywood

ಕಂಗನಾ ಸುಲ್ತಾನ್ ಆಫರ್ ನಿರಾಕರಿಸಿದ್ದು ಯಾಕೆ?

Published

on

ಮುಂಬೈ: ಸಲ್ಮಾನ್ ಖಾನ್ ನಟನೆಯ ಬ್ಲಾಕ್‍ ಬಸ್ಟರ್ ಚಿತ್ರ `ಸುಲ್ತಾನ್’ನಲ್ಲಿ ಮಹಿಳಾ ಕುಸ್ತಿಪಟುವಿನ ಪಾತ್ರವನ್ನು ನಿರಾಕರಿಸಿದ್ದು ಯಾಕೆ ಎಂಬ ಬಗ್ಗೆ ಕಂಗನಾ ರನಾವತ್ ಪ್ರತಿಕ್ರಿಯಿಸಿದ್ದಾರೆ.

ಚಿತ್ರದಲ್ಲಿ ಸಲ್ಮಾನ್‍ಗೆ ನಾಯಕಿಯಾಗಿ ಕುಸ್ತಿ ಅಖಾಡದಲ್ಲಿ ಸೆಣಸುವ ಮಹಿಳಾ ಕುಸ್ತಿಪಟುವಿನ ಪಾತ್ರವನ್ನು ಕಂಗನಾ ಅವರಿಗೆ ನೀಡಲಾಗಿತ್ತು. ಆದರೆ ಅವರು ನಿರಾಕರಿಸಿದ್ದರಿಂದ ಅನುಷ್ಕಾ ಶರ್ಮಾ ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರ ಸಾಕಷ್ಟು ಯಶಸ್ವಿಯಾಗಿ ಅನುಷ್ಕಾ ಆ ಪಾತ್ರಕ್ಕಾಗಿ ಎಲ್ಲರ ಮೆಚ್ಚುಗೆಯನ್ನು ಪಡೆದಿದ್ದರು.

ಆದ್ರೆ ಈ ಪಾತ್ರವನ್ನು ನಿರಾಕರಿಸಿದ್ದು ಯಾಕೆ ಎಂದು ಕೇಳಿದ್ದಕ್ಕೆ ಕಂಗನಾ, ಈ ಪಾತ್ರದಲ್ಲಿ ಅಂಥದ್ದೇನೂ ವಿಶೇಷತೆಯಿದೆ ಎಂದು ಅನ್ನಿಸಲಿಲ್ಲ. ಈಗಿನ ದಿನಗಳನ್ನ ನೋಡೋದಾದ್ರೆ ನನಗೆ ಯಾವುದು ಉತ್ತೇಜನ ನೀಡುತ್ತದೋ ಅಂತಹ ಪಾತ್ರಗಳಿಗೆ ಹೋಗ್ತೀನಿ. ಇಲ್ಲವಾದ್ರೆ ನಿದ್ದೆಯಲ್ಲಿ ನಡೆದಾಡಿದಂತೆ ಆಗುತ್ತದೆ. ಆ ಸಂದರ್ಭದಲ್ಲಿ ಸುಲ್ತಾನ್ ಚಿತ್ರದ ಆ ಪಾತ್ರ ಒಬ್ಬ ಹುಡುಗಿ ನಿರ್ವಹಿಸಲು ತುಂಬಾ ದೊಡ್ಡದ್ದೇ ಆಗಿದ್ದರೂ, ಆದ್ರೆ ಅದರಲ್ಲಿ ನನಗೆ ಸಿಗುವಂತದ್ದು ಏನೂ ಇರಲಿಲ್ಲ ಎಂದಿದ್ದಾರೆ.

`ತನು ವೆಡ್ಸ್ ಮನು ರಿಟನ್ಸ್’ ಸಿನಿಮಾದಲ್ಲಿ ಡಬಲ್ ರೋಲ್‍ನಲ್ಲಿ ಕಾಣಿಸಿಕೊಂಡ ನಂತರ ತನಗೆ ಅಲಿ ಅಬ್ಬಾಸ್ ಜಾಫರ್ ಅವರ ಈ ಸಿನಿಮಾದಲ್ಲಿ ಅವಕಾಶ ನೀಡಲಾಗಿತ್ತು. ಒಂದು ಬಾರಿ ಡಬಲ್ ರೋಲ್ ಕಾಣಿಸಿಕೊಂಡು ಹಿಂದಿನ ಚಿತ್ರದಲ್ಲಿ ಅಷ್ಟೊಂದು ಮಾಡಿದ ನಂತರ ಅದಕ್ಕಿಂತ ಸಣ್ಣ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ನನಗೆ ಇಷ್ಟವಿರಲಿಲ್ಲ. ಅದಕ್ಕಾಗಿ ನಾನು ಆ ಪಾತ್ರವನ್ನ ಮಾಡಲಿಲ್ಲ ಅಂದ್ರು.

ಜಾಗರಣ್ ಸಿನಿಮಾ ಸಮಿತ್‍ನಲ್ಲಿ ಚಲನಚಿತ್ರ ವಿಶ್ಲೇಷಕ ಮಾಯಾಂಕ್ ಶೇಖರ್ ಅವರೊಂದಿಗೆ ಮಾತನಾಡುವ ವೇಳೆ ಕಂಗನಾ ಈ ಎಲ್ಲಾ ವಿಚಾರವನ್ನ ಹಂಚಿಕೊಂಡಿದ್ದಾರೆ.

ಆಮಿರ್ ಖಾನ್ ಹಾಗೂ ಅಮಿತಾಬ್ ಬಚ್ಚನ್ ನಟನೆಯ ದಿ ಥಗ್ಸ್ ಆಫ್ ಹಿಂದುಸ್ತಾನ್ ಸಿನಿಮಾದಲ್ಲೂ ಕಂಗನಾಗೆ ಅವಕಾಶ ಸಿಕ್ಕಿತ್ತು ಎಂಬ ವರದಿಗಳಿದ್ದವು. ಆದ್ರೆ ಇದನ್ನು ತಳ್ಳಿಹಾಕಿದ ಕಂಗನಾ, ನನಗೆ ಚಿತ್ರದ ಸ್ಕ್ರಿಪ್ಟ್ ಏನು ಎಂಬುದೇ ಗೊತ್ತಿಲ್ಲ ಅಂದ್ರು.

ಕಂಗನಾ ತಮ್ಮ ಮುಂದಿನ ಸಿನಿಮಾ `ಮನಿಕರ್ಣಿಕಾ-ದಿ ಕ್ವೀನ್ ಆಫ್ ಝಾನ್ಸಿ’ಯಲ್ಲಿ ರಾಣಿ ಲಕ್ಷ್ಮೀ ಬಾಯಿ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಈ ಚಿತ್ರವನ್ನ ಕ್ರಿಷ್ ನಿರ್ದೇಶಿಸುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in