ಬೀದರ್: ಊರಿನಲ್ಲಿ ಶೌಚಾಲಯ ಕಟ್ಟಿಸಲು ಇಟ್ಟಿಗೆ ಉಚಿತ, ಗ್ರಾಮಕ್ಕೆಲ್ಲಾ ಸಿಮೆಂಟ್ ರೋಡ್ ಹಾಗೂ ಬಡವರಿಗೆ ಉಚಿತ ಔಷಧಿ ವಿತರಣೆ ಮಾಡೋ ಓಂ ರೆಡ್ಡಿ ಶಹಬಾಬ್ ಇಂದಿನ ನಮ್ಮ ಪಬ್ಲಿಕ್ ಹೀರೋ.
ಈ ಕಲಿಯುಗದ ಕರ್ಣ ಓಂ ರೆಡ್ಡಿ ಶಹಬಾಬ್ ಬೀದರ್‍ನ ಔರಾದ್ ತಾಲೂಕಿನ ಸಿರ್ಸಿ ಗ್ರಾಮದವರು. ಇವರು ಮೆಡಿಕಲ್ ಶಾಪ್ ಬ್ಯುಸಿನೆಸ್ ಮಾಡುತ್ತಾರೆ. ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿ ಮಾಡಿದರೂ ಅವು ನೆಲ ಕಚ್ಚುತ್ತವೆ. ಆದರೆ ರೆಡ್ಡಿ ಅವರು ಒಮ್ಮೆ ಕೈ ಹಾಕಿದ ಕೆಲಸವನ್ನು ಮುಗಿಸದೇ ಬಿಡುವುದಿಲ್ಲ.
Advertisement
ಅಧಿಕಾರಿಗಳು ಮಾಡಬೇಕಿದ್ದ ಕೆಲಸವನ್ನು ಇವರು ತನ್ನ ಸ್ವಂತ ದುಡ್ಡಲ್ಲೇ ಮಾಡುತ್ತಿದ್ದಾರೆ. ಮಹಿಳೆಯರ ಸಂಕಷ್ಟ ನೋಡಲಾಗದೇ ತಮ್ಮ ಗ್ರಾಮವನ್ನು ಬಯಲು ಮುಕ್ತ ಶೌಚಾಲಯ ಮಾಡಲು ಹೊರಟಿದ್ದಾರೆ. ಅಷ್ಟೆ ಅಲ್ಲದೆ ರಸ್ತೆ ಮಾಡಿಕೊಟ್ಟಿದ್ದಾರೆ. ಬಡವರಿಗೆ ಉಚಿತ ಔಷಧಿ ವಿತರಣೆ ಮಾಡುತ್ತಿದ್ದಾರೆ.
Advertisement
ತಾವು ಹುಟ್ಟಿದ ಗ್ರಾಮದಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಉಚಿತವಾಗಿ ಸಿಮೆಂಟ್ ಇಟ್ಟಿಗೆಗಳನ್ನು ನೀಡಿದ್ದಾರೆ. ಆರು ಸಿಸಿ ರಸ್ತೆಗಳನ್ನು ಮಾಡಿಸಿದ್ದಾರೆ. ಅಷ್ಟೆ ಅಲ್ಲದೆ ಬಡವರಿಗೆ ಉಚಿತ ಔಷಧಿ ವಿತರಣೆ ಮಾಡುತ್ತಾರೆ. ತಮ್ಮ ಗ್ರಾಮದಲ್ಲಿ ಮಾತ್ರವಲ್ಲದೆ ಪಕ್ಕದ ಬೈರನಹಳ್ಳಿ ಗ್ರಾಮದಲ್ಲಿ 25 ಶೌಚಾಲಯಗಳು ಮತ್ತು 2 ಸಿಸಿ ರಸ್ತೆಗಳನ್ನು ಮಾಡಿಸಿದ್ದಾರೆ. ಸರ್ಕಾರದಿಂದ ಅನುದಾನ ಪಡೆದು ಸಾಕಷ್ಟು ಕೆಲಸ ಕೂಡಾ ಮಾಡಿಸಿದ್ದಾರೆ.
Advertisement
ಈ ಕ್ಷೇತ್ರದ ಶಾಸಕ ಮಾನ್ಯ ಅಶೋಕ್ ಖೇಣಿ ಸಾಹೇಬ್ರು ಕ್ಷೇತ್ರವನ್ನು ಸಿಂಗಾಪುರ ಮಾಡುವುದಾಗಿ ಹೇಳಿ ಹೋದವರು ಮತ್ತೆ ಈ ಕಡೆ ಬಂದಿಲ್ಲ. ಆದರೆ ನಮ್ಮ ರೆಡ್ಡಿ ಸಾಹೇಬರು ಯಾವ ಅಪೇಕ್ಷೆ ಇಲ್ಲದೇ ನಮ್ಮ ಸೇವೆ ಮಾಡ್ತಿದ್ದಾರೆ. ಇದರಿಂದ ನಾವೆಲ್ಲರೂ ಖುಷಿ ಪಡುತ್ತಿದ್ದೇವೆ ಅಂತ ಗ್ರಾಮಸ್ಥರು ತಿಳಿಸಿದ್ದಾರೆ.
Advertisement
https://www.youtube.com/watch?v=st5gv-oLHrk