ಚಂಡೀಗಢ: ಹರಿಯಾಣದ ಮಾಜಿ ಸಿಎಂ ಮತ್ತು ಭಾರತೀಯ ರಾಷ್ಟ್ರೀಯ ಲೋಕದಳ (INLD) ಮುಖ್ಯಸ್ಥ ಓಂ ಪ್ರಕಾಶ್ ಚೌತಾಲಾ (89) (Om Prakash Chautala) ಶುಕ್ರವಾರ (ಡಿ.20), ಗುರುಗ್ರಾಮ್ನಲ್ಲಿರುವ ಅವರ ನಿವಾಸದಲ್ಲಿ ನಿಧನರಾದರು.
Advertisement
ಭಾರತದ 6ನೇ ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದ ಚೌಧರಿ ದೇವಿ ಲಾಲ್ ಅವರ ಪುತ್ರನಾಗಿ 1935ರ ಜನವರಿ 1ರಲ್ಲಿ ಚೌತಾಲಾ ಜನಿಸಿದರು. 1989ರಲ್ಲಿ ಮೊದಲಬಾರಿಗೆ ಹರಿಯಾಣ ಮುಖ್ಯಮಂತ್ರಿಯಾಗಿದ್ದ ಚೌತಾಲಾ 6 ತಿಂಗಳ ಕಾಲ ಹುದ್ದೆಯಲ್ಲಿದ್ದರು. ಬಳಿಕ 2 ತಿಂಗಳ ನಂತರ ಮತ್ತೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ರು, ಇದಾದ 5 ದಿನಗಳಲ್ಲೇ ರಾಜೀನಾಮೆ ನೀಡುವ ಪರಿಸ್ಥಿತಿ ಬಂದೊದಗಿತು. ಬಳಿಕ 1991ರಲ್ಲಿ 3ನೇ ಅವಧಿಗೆ ಸಿಎಂ ಆದರು. ಇದಾದ 2 ವಾರಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದ್ದರಿಂದ ಸಿಎಂ ಸ್ಥಾನ ಕಳೆದುಕೊಂಡರು. ನಂತರ 1999 ರಿಂದ 2025ರ ನಡುವೆ ಸತತ 2 ಅವಧಿಗೆ ಸಿಎಂ ಆಗಿ ಸೇವೆ ಸಲ್ಲಿಸಿದ್ದರು.
Advertisement
Advertisement
ಭಾರತೀಯ ರಾಜಕೀಯದಲ್ಲಿ ಧೀಮಂತ ನಾಯಕನಾಗಿ ಗುರುತಿಸಿಕೊಂಡಿದ್ದರು. ಆದ್ರೆ ಅವರ ವೃತ್ತಿ ಜೀವನವು ವಿವಾದಗಳಿಂದಲೇ ಗುರುತಿಸಲ್ಪಟ್ಟಿತ್ತು. ಇದನ್ನೂ ಓದಿ: UI: ಉಪೇಂದ್ರ, ಶಿವಣ್ಣ ಫೋಟೋ ಇಟ್ಟು ಪೂಜೆ- ಫ್ಯಾನ್ಸ್ ಭರ್ಜರಿ ಸೆಲೆಬ್ರೇಶನ್
Advertisement
1999-2000 ಅವಧಿಯಲ್ಲಿ ಹರಿಯಾಣದಲ್ಲಿ ಕಿರಿಯ ಮೂಲ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಹಗರಣರಣದಲ್ಲಿ ಚೌತಾಲಾಗೆ ಕೋರ್ಟ್ ಶಿಕ್ಷೆ ವಿಧಿಸಿತ್ತು. 2013 ರಲ್ಲಿ ಅವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತು.
87ನೇ ವಯಸ್ಸಿನವರಾಗಿದ್ದಾಗ 2021ರಲ್ಲಿ ಜೈಲಿನಿಂದ ಬಿಡುಗಡೆಯಾದರು. ಇದಕ್ಕೂ ಮುನ್ನ ದೆಹಲಿಯ ತಿಹಾರ್ ಜೈಲಿನ (87 ವರ್ಷ ವಯಸ್ಸಿನ) ಅತ್ಯಂತ ಹಳೆಯ ಖೈದಿ ಎಂಬ ದಾಖಲೆಯನ್ನೂ ಹೊಂದಿದ್ದರು. ಇದನ್ನೂ ಓದಿ: ಉಕ್ರೇನ್ ಯುದ್ಧ ಸಂಬಂಧ ಟ್ರಂಪ್ ಜೊತೆ ಮಾತುಕತೆಗೆ ಸಿದ್ಧ: ಪುಟಿನ್