ಮುಂಬೈ: ಟೀಂ ಇಂಡಿಯಾ ಕಂಡ ಯಶಸ್ವಿ ನಾಯಕರಲ್ಲಿ ಒಬ್ಬರಾಗಿರುವ ಕೂಲ್ ಕ್ಯಾಪ್ಟನ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿಗೆ ಇಂದು 41ರ ಹುಟ್ಟುಹಬ್ಬದ ಸಂಭ್ರಮ. ಇಂದು ಧೋನಿ ಹುಟ್ಟುಹಬ್ಬಕ್ಕಾಗಿ ಹಲವು ಮಾಜಿ ಆಟಗಾರರು ಸಹಿತ ಧೋನಿ ಫ್ಯಾನ್ಸ್ ಸಾಮಾಜಿಕ ಜಾಲತಾಣದ ಮೂಲಕ ಧೋನಿಗೆ ಶುಭ ಹಾರೈಸಿದ್ದಾರೆ.
Advertisement
2004ರಲ್ಲಿ ಟೀಂ ಇಂಡಿಯಾಗೆ ಎಂಟ್ರಿಕೊಟ್ಟ ಉದ್ದನೆ ಕೂದಲಿನ ಯುವಕ ಬಳಿಕ ತಮ್ಮ ಸ್ಫೋಟಕ ಬ್ಯಾಟಿಂಗ್‍ನಿಂದ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಆಧಾರ ಸ್ತಂಭವಾಗಿ ಮಿಂಚಿದವರು. ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಮೂಲಕ ಭಾರತ ತಂಡದಲ್ಲಿ ಖಾಯಂ ಸ್ಥಾನ ಪಡೆದ ಧೋನಿ ಮೂರು ಮಾದರಿ ಕ್ರಿಕೆಟ್‍ನಲ್ಲಿ ನಾಯಕನಾಗಿ ಹೆಚ್ಚು ಜನಪ್ರಿಯಗೊಂಡವರು. ಭಾರತ ತಂಡಕ್ಕೆ 2007ರಲ್ಲಿ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್ ಮತ್ತು ಚಾಂಪಿಯನ್ ಟ್ರೋಫಿ ತಂದು ಕೊಟ್ಟು ನಾಯಕರಾಗಿ ಮಿಂಚಿದರು. ಈ ಮೂಲಕ ಐಸಿಸಿ ಮಾದರಿಯ ಮೂರು ಟ್ರೋಫಿ ಗೆದ್ದ ನಾಯಕ ಎಂಬ ಹೆಗ್ಗಳಿಕೆ ಪಾತ್ರರಾದವರು. ಇದನ್ನೂ ಓದಿ: ICC ಟೆಸ್ಟ್ ರ‍್ಯಾಂಕಿಂಗ್: ಕಳಪೆ ಬ್ಯಾಟಿಂಗ್‌ನಿಂದ ಟಾಪ್-10 ಪಟ್ಟಿಯಲ್ಲಿ ಸ್ಥಾನ ಕಳೆದುಕೊಂಡ ಕೊಹ್ಲಿ
Advertisement
Advertisement
2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಧೋನಿ ಆ ಬಳಿಕ ಇದೀಗ ಐಪಿಎಲ್‍ನಲ್ಲಿ ಆಡುತ್ತಿದ್ದಾರೆ. ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಧೋನಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇದನ್ನೂ ಓದಿ: ಭಾರತ – ವೆಸ್ಟ್ಇಂಡೀಸ್ ಏಕದಿನ ಕ್ರಿಕೆಟ್ ಸರಣಿಗೆ ಆಯ್ಕೆ ಪಟ್ಟಿ ಪ್ರಕಟ – ಶಿಖರ್ ಧವನ್ ಕ್ಯಾಪ್ಟನ್
Advertisement
Till the time full stop doesn't come,a sentence isn't completed. Till the time Dhoni is at the crease,match isn't completed.
Not all teams have the fortune to have a person like Dhoni, Happy B'day to a gem of a person & player,MS Dhoni. Om Helicopteraya Namaha #HappyBirthdayDhoni pic.twitter.com/qGFhpcP5so
— Virender Sehwag (@virendersehwag) July 7, 2022
ಇಂದು ಧೋನಿ ಹುಟ್ಟಹಬ್ಬವಾಗಿರುವುದರಿಂದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಟ್ಟಿಟ್ಟರ್ ಮೂಲಕ ವಿಶ್ ಮಾಡಿದ್ದು, ಇನ್ನೂ ಕೂಡ ಅಂತ್ಯಗೊಂಡಿಲ್ಲ. ಧೋನಿ ಕ್ರಿಸ್‍ನಲ್ಲಿ ಇರೋವರೆಗೆ ಪಂದ್ಯ ಮುಗಿದಿರುವುದಿಲ್ಲ. ಧೋನಿಯಂತಹ ಆಟಗಾರ ಭಾರತಕ್ಕೆ ಹೊರತು ಪಡಿಸಿ ವಿಶ್ವದ ಇತರ ತಂಡಕ್ಕೆ ಸಿಕ್ಕಿರಲು ಸಾಧ್ಯವಿಲ್ಲ. ಓಂ ಓಂ ಹೆಲಿಕಾಪ್ಟರಾಯ ನಮಃ ಎಂದು ಬರೆದುಕೊಂಡು ಶುಭಕೋರಿದ್ದಾರೆ.
ಬಿಸಿಸಿಸಿ, ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸ್, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಮಾಜಿ ಆಟಗಾರರಾದ ಸುರೇಶ್ ರೈನಾ, ಮೊಹಮ್ಮದ್ ಕೈಫ್ ಸೇರಿದಂತೆ ಹಲವು ಮಾಜಿ, ಹಾಲಿ ಆಟಗಾರರು ಟ್ಟಿಟ್ಟರ್ ಮೂಲಕ ಧೋನಿಗೆ ಹುಟ್ಟುಹಬ್ಬದ ಶುಭಕೋರಿದ್ದಾರೆ.