Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ನ್ಯಾ. ವರ್ಮಾ ಪ್ರಕರಣ ತನಿಖಾ ಸಮಿತಿ ಮರುರಚಿಸಿದ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ನ್ಯಾ. ವರ್ಮಾ ಪ್ರಕರಣ ತನಿಖಾ ಸಮಿತಿ ಮರುರಚಿಸಿದ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ

Latest

ನ್ಯಾ. ವರ್ಮಾ ಪ್ರಕರಣ ತನಿಖಾ ಸಮಿತಿ ಮರುರಚಿಸಿದ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ

Public TV
Last updated: February 26, 2026 4:02 pm
Public TV
Share
2 Min Read
Om birla Justice yashwant varma
SHARE

ನವದೆಹಲಿ: ದೆಹಲಿ ಹೈಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ತಮ್ಮ ನಿವಾಸದಲ್ಲಿ ಅಪಾರ ಪ್ರಮಾಣದ ಸುಟ್ಟು ಕರಕಲಾದ ನಗದು ರಾಶಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್‌ ಹೈಕೋರ್ಟ್‌ ನ್ಯಾಯಮೂರ್ತಿ ಯಶವಂತ್ ವರ್ಮಾ (Yashwant Varma) ಅವರ ವಿರುದ್ಧದ ತನಿಖೆಗಾಗಿ ರಚಿಸಲಾಗಿದ್ದ ತ್ರಿಸದಸ್ಯ ಸಮಿತಿಯನ್ನು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ (Om Birla) ಮರು ರಚಿಸಿದ್ದಾರೆ.

ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಅವರು ಮಾರ್ಚ್ 6 ರಂದು ನಿವೃತ್ತಿಯಾಗಲಿರುವ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಅವರನ್ನು ಸಮಿತಿಗೆ ಸೇರ್ಪಡೆ ಮಾಡಲಾಗಿದೆ. ಇದನ್ನೂ ಓದಿ: ನ್ಯಾ. ಯಶವಂತ್‌ ವರ್ಮಾ ಮನವಿ ತಿರಸ್ಕರಿಸಿದ ಸುಪ್ರೀಂ – ಲೋಕಸಭಾ ತನಿಖಾ ಸಮಿತಿಗೆ ಗ್ರೀನ್‌ ಸಿಗ್ನಲ್

2025ರ ಆಗಸ್ಟ್ 12ರಂದು ರಚಿಸಲಾಗಿದ್ದ ಮೂಲ ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್, ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಹಾಗೂ ಹಿರಿಯ ವಕೀಲ ಬಿ.ವಿ ಆಚಾರ್ಯ ಸದಸ್ಯರಾಗಿದ್ದರು.

ಗಮನಾರ್ಹ ಅಂಶವೆಂದರೆ ಲೋಕಸಭಾ ಸ್ಪೀಕರ್‌ ರಚಿಸಿರುವ ತ್ರಿಸದಸ್ಯ ಸಮಿತಿ ರದ್ದುಗೊಳಿಸುವಂತೆ ನ್ಯಾ. ವರ್ಮಾ ಅವರು ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಈಚೆಗೆ ತಿರಸ್ಕರಿಸಿತ್ತು. ಕೆಲ ದಿನಗಳ ಹಿಂದೆ ನ್ಯಾ. ವರ್ಮಾ ಅವರು, ಅಗ್ನಿ ಅವಘಡ ಸಂಭವಿಸಿದ ವೇಳೆ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಇರಲಿಲ್ಲ. ಬೆಂಕಿ ನಂದಿಸಲು ಬಂದ ಅಗ್ನಿಶಾಮಕ ದಳ ಆ ಸ್ಥಳದಿಂದ ಯಾವುದೇ ನಗದು ವಶಪಡಿಸಿಕೊಂಡಿರಲಿಲ್ಲ ಎಂದು ತಿಳಿಸಿದ್ದರು.

ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸಂಜೀವ್‌ ಖನ್ನಾ ಅವರು ಘಟನೆಯ ಆಂತರಿಕ ತನಿಖೆಗಾಗಿ ಹೈಕೋರ್ಟ್ ನ್ಯಾಯಮೂರ್ತಿಗಳ ತ್ರಿಸದಸ್ಯ ಸಮಿತಿ ರಚಿಸಿದ್ದರು. ನ್ಯಾಯಮೂರ್ತಿ ವರ್ಮಾ ವಿರುದ್ಧ ಕ್ರಮಕ್ಕೆ ಸಮಿತಿ ಶಿಫಾರಸು ಮಾಡಿತು. ಅವರು ರಾಜೀನಾಮೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ವರದಿಯನ್ನು ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗೆ ಕಳುಹಿಸಿ ನ್ಯಾ. ವರ್ಮಾ ವಿರುದ್ಧ ವಾಗ್ದಂಡನೆಗೆ ದಾರಿ ಮಾಡಿಕೊಡಲಾಯಿತು. ಇದನ್ನೂ ಓದಿ: ಅಗ್ನಿ ಅವಘಡ ಆದಾಗ ನಾನು ಅಲ್ಲಿರಲಿಲ್ಲ, ಮನೆಯಲ್ಲಿ ಯಾವ್ದೇ ಹಣ ಪತ್ತೆಯಾಗಿಲ್ಲ: ನ್ಯಾ. ಯಶವಂತ್ ವರ್ಮಾ

ಸಂವಿಧಾನದ ಕಲಂ 124(4) ಮತ್ತು 218ರ ಪ್ರಕಾರ, ಸಂಸತ್ತಿನ ಎರಡೂ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತದಿಂದ ಅಂಗೀಕಾರ ದೊರೆತ ಬಳಿಕವೇ ರಾಷ್ಟ್ರಪತಿಯವರು ಕಳಂಕಿತ ನ್ಯಾಯಮೂರ್ತಿಗಳನ್ನು ತೆರವುಗೊಳಿಸಬಹುದು. ನ್ಯಾಯಮೂರ್ತಿಗಳ (ತನಿಖೆ) ಕಾಯಿದೆ 1986 ಪ್ರಕಾರ ಸಮಿತಿ ವರದಿ ಸಂಸತ್ತಿನಲ್ಲಿ ಪರಿಗಣನೆಗೆ ಬರುತ್ತದೆ. ಪ್ರಕರಣದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ವರ್ಮಾ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಅವರ ಮೂಲ ಹೈಕೋರ್ಟ್‌ ಆದ ಅಲಾಹಾಬಾದ್‌ ಹೈಕೋರ್ಟ್‌ಗೆ ವರ್ಗಾಯಿಸಲಾಗಿದ್ದು, ಮುಂದಿನ ಕ್ರಮದ ನಿರೀಕ್ಷೆಯಲ್ಲಿ ಅವರ ನ್ಯಾಯಾಂಗ ಕಾರ್ಯಗಳನ್ನು ತಡೆಹಿಡಿಯಲಾಗಿದೆ.

TAGGED:Cash RowOm BirlaYashwant Varmaಓಂ ಬಿರ್ಲಾಯಶವಂತ್‌ ಶರ್ಮಾ
Share This Article
Facebook Whatsapp Whatsapp Telegram

Cinema news

KD Vulgar Song Controversy I will write and release a new song Director Prem apologizes 1
ಹೊಸ ಹಾಡನ್ನು ಬರೆದು ಬಿಡುಗಡೆ ಮಾಡುತ್ತೇನೆ: ಕ್ಷಮೆ ಕೇಳಿದ ಪ್ರೇಮ್‌
Bengaluru City Cinema Districts Latest Main Post
KD The Devil Thanks for opposing the song Nora Fatehi Reacts To Vulgar Song Controversy
ಸಾಂಗ್‌ ವಿರೋಧಿಸಿದ್ದಕ್ಕೆ ಥ್ಯಾಂಕ್ಸ್‌ – ಕೆಡಿಯ ಸರ್ಸೆ ಸೆರಗ ಹಾಡಿಗೆ ನೋರಾ ಕಿಡಿ ಕಿಡಿ
Bollywood Cinema Latest Sandalwood
darshan vijayalakshmi
ಕೋರ್ಟ್ ಆದೇಶವಿದ್ರೂ ದರ್ಶನ್‌ಗೆ ಒಳ ಸಂದರ್ಶನಕ್ಕಿಲ್ಲ ಅವಕಾಶ – ಹೆಂಡ್ತಿ, ಮಗನ ಭೇಟಿ ಇಲ್ಲ
Cinema Latest Sandalwood Top Stories
Sarse Ninna Seraga Sarse song jogi prem
ಜೋಗಿ ಪ್ರೇಮ್‌ಗೆ ಬಿಗ್‌ ಶಾಕ್‌ – ‘ಸರ್ಸೆ ಸೆರಗ ಸರ್ಸೆ’ ವಿವಾದಿತ ಹಾಡು ಬ್ಯಾನ್
Cinema Latest Main Post Sandalwood

You Might Also Like

Bagalkote by election CM Siddaramaiah meeting with HY Meti Family
Bagalkot

ಬಾಗಲಕೋಟೆ ಉಪಚುನಾವಣೆ| ಸಿಎಂ ಕಚೇರಿಯಲ್ಲಿ ಸಂಧಾನ ಸಭೆಗೆ ವ್ಯಾಪಕ ಟೀಕೆ

Public TV
By Public TV
1 minute ago
Kalaburagi Dharwad Benches of the High Court
Districts

ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೋ ಕೇಸ್ – ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ

Public TV
By Public TV
5 minutes ago
HD Devegowda Mallikarjun Kharge
Bengaluru City

ಕಾಂಗ್ರೆಸ್‌ ಜೊತೆ ಬಲವಂತದ ಮದುವೆಯಲ್ಲಿದ್ದೆ, ನಮ್ಮನ್ನು ಬಿಟ್ಟು ಹೋಗಿದ್ದಕ್ಕೆ ವಿಚ್ಛೇದನ ನೀಡಿದ್ದೇನೆ: ಹೆಚ್‌ಡಿಡಿ ತಿರುಗೇಟು

Public TV
By Public TV
44 minutes ago
ಸಾಂದರ್ಭಿಕ ಚಿತ್ರ
Bengaluru City

ಯುಗಾದಿಗೆ `ಗೃಹಲಕ್ಷ್ಮಿ’ಯರಿಗೆ ಗುಡ್‌ನ್ಯೂಸ್ – 27ನೇ ಕಂತಿನ ಹಣ ಬಿಡುಗಡೆ

Public TV
By Public TV
56 minutes ago
Hailstones thunder and lightning heavy rain in Shivamogga 1
Districts

ಆಲಿಕಲ್ಲಿನ ರಾಶಿ, ಗುಡುಗು, ಸಿಡಿಲಿನ ನರ್ತನ – ಮಳೆ ಅಬ್ಬರಕ್ಕೆ ನಲುಗಿದ ಶಿವಮೊಗ್ಗ

Public TV
By Public TV
1 hour ago
PRAJWAL REVANNA
Bengaluru City

70 ಪೆನ್‌ ಡ್ರೈವ್‌ ಬಳಕೆ – ಆಪ್ತ ವ್ಯಕ್ತಿಗಳಿಂದಲೇ ಪ್ರಜ್ವಲ್‌ ರೇವಣ್ಣಗೆ ಖೆಡ್ಡಾ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?