ಪರೀಕ್ಷೆಗೆ ಚೆನ್ನಾಗಿ ಓದಿಲ್ಲ ಅಂತ ಕಬ್ಬಿಣದ ರಾಡ್‌ನಿಂದ ಥಳಿಸಿದ ಅಣ್ಣ – ಸಹೋದರ ಸಾವು

Advertisements

ಭುವನೇಶ್ವರ: ಕಾಲೇಜು ವಿದ್ಯಾರ್ಥಿಯೊಬ್ಬ (College Student) ಪರೀಕ್ಷೆಗೆ ಚೆನ್ನಾಗಿ ಓದಿಲ್ಲ ಅಂತ ಆತನ ಸಹೋದರ (Brother) ಮನಬಂದಂತೆ ಥಳಿಸಿ, ತಮ್ಮನ ಸಾವಿಗೆ ಕಾರಣವಾಗಿರುವ ಘಟನೆ ಒಡಿಶಾದ (Odisha) ಭುವನೇಶ್ವರದಲ್ಲಿ (Bhubaneswar) ನಡೆದಿದೆ. ಕಾಲೇಜು ವಿದ್ಯಾರ್ಥಿ ರಾಜ್‌ಮೋಹನ್ ಸೇನಾಪತಿ(21) ಅಣ್ಣನ ಹೊಡೆತಕ್ಕೆ ಸಾವನ್ನಪ್ಪಿದ ಯುವಕ.

Advertisements

ರಾಜ್‌ಮೋಹನ್ ಬ್ಯಾಚುಲರ್ ಆಫ್ ಸೈನ್ಸ್(Zoology) ಹಾಗೂ ಬ್ಯಾಚುಲರ್ ಇನ್ ಎಜುಕೇಶನ್ ಕೋರ್ಸ್‌ನಲ್ಲಿ ಒಂದೇ ಸಮಯದಲ್ಲಿ ಪದವಿಯನ್ನು ಪಡೆಯುತ್ತಿದ್ದ. ಆತನ ಅಣ್ಣ ಬಿಸ್ವಮೋಹನ್(24), ತನ್ನ ತಮ್ಮ ಅಧ್ಯಯನದ ಮೇಲೆ ಚೆನ್ನಾಗಿ ಗಮನ ಹರಿಸುತ್ತಿಲ್ಲ, ಕುಟುಂಬ ಕಷ್ಟಪಟ್ಟು ದುಡಿದ ಹಣವನ್ನು ಆತ ವ್ಯರ್ಥ ಮಾಡುತ್ತಿದ್ದಾನೆ ಎಂದುಕೊಂಡು ಮನಬಂದಂತೆ ಥಳಿಸಿದ್ದಾನೆ. ಇದನ್ನೂ ಓದಿ: ಚಂಡೀಗಢ ವಿವಿ ಬಳಿಕ ಐಐಟಿ ಬಾಂಬೆ- ಹಾಸ್ಟೆಲ್ ಸ್ನಾನಗೃಹದಲ್ಲಿ ಇಣುಕಿದ ಕ್ಯಾಂಟೀನ್ ಸಿಬ್ಬಂದಿ ಬಂಧನ

Advertisements

 

ಸೋಮವಾರ ಬಿಸ್ವಮೋಹನ್ ತನ್ನ ತಮ್ಮ ಅಧ್ಯಯನದಲ್ಲಿ ಹಿಂದೆ ಉಳಿಯುತ್ತಿರುವುದು ಹಾಗೂ ಬೇಕಾಬಿಟ್ಟಿ ಹಣ ಖರ್ಚು ಮಾಡುತ್ತಿದ್ದುದನ್ನು ಕಂಡು ಛೀಮಾರಿ ಹಾಕಿದ್ದ. ತನ್ನ ಮಾತನ್ನು ಆತ ಕೇಳುತ್ತಿಲ್ಲ ಎಂದು ಸಿಟ್ಟುಗೊಂಡ ಬಿಸ್ವಾಮೋಹನ್ ಕಬ್ಬಿಣದ ರಾಡ್ ತೆಗೆದುಕೊಂಡು ತಮ್ಮನಿಗೆ ಮನಬಂದಂತೆ ಥಳಿಸಿದ್ದಾನೆ. ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ರಾಜ್‌ಮೋಹನ್‌ನನ್ನು ಭುವನೇಶ್ವರದ ಕ್ಯಾಪಿಟಲ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅಲ್ಲಿ ವೈದ್ಯರು ಆತ ಸಾವನ್ನಪ್ಪಿದ್ದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ವೃದ್ಧ ತಂದೆಯನ್ನು ಅಮಾನುಷವಾಗಿ ಹಲಗೆಯಿಂದ ಥಳಿಸಿದ ಪಾಪಿ ಮಗ- ಅರೆಸ್ಟ್

ಘಟನೆಯ ಬಗ್ಗೆ ತಿಳಿದ ಪೊಲೀಸರು ಬಿಸ್ವಾಮೋಹನ್‌ನನ್ನು ಮಂಗಳವಾರ ಬಂಧಿಸಿದ್ದಾರೆ. ಆತನ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 302(Murder) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisements

Live Tv

Advertisements
Exit mobile version