ದಾವಣಗೆರೆ: ಮಾನಸಿಕ ಅಸ್ವಸ್ಥತೆಯುಳ್ಳ ಕರ್ನಾಟಕದ ವೃದ್ಧೆಯೊಬ್ಬರು ನಾಪತ್ತೆಯಾಗಿದ್ದು, ಇದೀಗ ದೂರದ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಪತ್ತೆಯಾಗಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿ ಮೂಲದ ಸುಶೀಲಮ್ಮ (50) ಮಾನಸಿಕ ಅಸ್ವಸ್ಥೆಯಾಗಿದ್ದು, ಕೌಟಂಬಿಕ ಕಲಹದ ಹಿನ್ನೆಲೆಯಲ್ಲಿ ಕರ್ನಾಟಕ ಬಿಟ್ಟು 2014ರಲ್ಲಿ ಹಿಮಾಚಲಪ್ರದೇಶಕ್ಕೆ ಹೋಗಿದ್ದರು.
Advertisement
ಸುಶೀಲಮ್ಮನಿಗೆ ಮಕ್ಕಳಾಗದ ಕಾರಣ ಆಕೆಯ ಪತಿ ಮೂರನೇ ಮದುವೆ ಮಾಡಿಕೊಂಡು ಈಕೆಯನ್ನು ಹೊರ ಹಾಕಿದ್ದರು. ನಂತರ ಅಲ್ಲಿ ಇಲ್ಲಿ ಕೆಲಸ ಮಾಡಿಕೊಂಡು ರೈಲಿನ ಮೂಲಕ ಹಿಮಾಚಲ ಪ್ರದೇಶ ಸೇರಿ ಕೆಲಕಾಲ ಗಾರೆ ಕೆಲಸ ಸೇರಿದಂತೆ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಮಾನಸಿಕ ಅಸ್ವಸ್ಥೆಯಾಗಿದ್ದರು.ಸ್ಥಳೀಯ ಪೊಲೀಸರು ಹಿಮಾಚಲ ಪ್ರದೇಶದ ಮಾನಸಿಕ ಅಸ್ವಸ್ಥರ ಪುನರ್ ಚೇತರಿಕಾ ಕೇಂದ್ರಕ್ಕೆ ಸೇರಿಸಿದ್ದರು.
Advertisement
Advertisement
ಹಿಮಾಚಲ ಪ್ರದೇಶದ ಪ್ರಯಾಸ್ ಎನ್ನುವ ಎನ್‍ಜಿಒ ಮಾನಸಿಕ ಅಸ್ವಸ್ಥರ ಪುನರ್ ಚೇತರಿಕಾ ಕೇಂದ್ರದಲ್ಲಿ 21 ದಿನಗಳ ಕಾಲ ಶಿಬಿರವನ್ನು ಹಮ್ಮಿಕೊಂಡಾಗ ಸುಶೀಲಮ್ಮನ ಬಗ್ಗೆ ಮಾಹಿತಿ ಗೊತ್ತಾಯಿತು. ಕೂಡಲೇ ಎನ್‍ಜಿಒದಲ್ಲಿರುವ ವೈದ್ಯರು ವೃದ್ಧೆಗೆ ಚಿಕಿತ್ಸೆ ನೀಡಿ ತವರೂರಿಗೆ ಕರೆದೊಯ್ಯಲು ಸ್ಥಳೀಯ ಆಡಳಿತದ ಜೊತೆ ಮಾತನಾಡಲು ಮುಂದಾಗಿದ್ದಾರೆ.
Advertisement
ದಾವಣಗೆರೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬೆಂಗಳೂರಿನ ಮಾನಸಿಕ ಅಸ್ವಸ್ಥ ಕೇಂದ್ರದ ಸಿಬ್ಬಂದಿ ಜೊತೆ ಮಾತನಾಡಿದ್ದು ಕೂಡಲೇ ಸುಶೀಲಮ್ಮನವರನ್ನು ಕರೆತರುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ತವರೂರಿಗೆ ಬರಲು ಮಾನಸಿಕ ಅಸ್ವಸ್ಥೆ ಸುಶೀಲಮ್ಮ ರೆಡಿಯಾಗಿದ್ದು, ಸ್ಥಳೀಯ ಅಡಳಿತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರ ಕೂಡಲೇ ಅವರನ್ನು ತವರೂರಿಗೆ ಕರೆತಂದು ಸೂಕ್ತ ಚಿಕಿತ್ಸೆ ಕೊಡಿಸಬೇಕಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv