ತಿರುವನಂತಪುರ: 84 ವರ್ಷದ ಕೇರಳದ ವೃದ್ಧೆ 30 ನಿಮಿಷಗಳ ಅಂತರದಲ್ಲಿ ಎರಡು ಡೋಸ್ ಕೋವಿಡ್-19 ಲಸಿಕೆಯನ್ನು ಸ್ವೀಕರಿಸಿರುವ ಘಟನೆ ಎರ್ನಾಕುಲಂ ಜಿಲ್ಲೆಯ ಅಲುವಾಡದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ವ್ಯಾಕ್ಸಿನ್ ಪಡೆಯಲು ತನ್ನ ಮಗನೊಂದಿಗೆ ಹೊರಟಿದ್ದ ತಾಂಡಮ್ಮ ಪಪ್ಪು, ನನಗೆ ಮೊದಲ ಡೋಸ್ ನೀಡಲಾಯಿತು. ಹಾಗಾಗಿ ನಾನು ಕೊಠಡಿಯಿಂದ ಹಿಂದಿರುಗಿ ಹೊರಗೆ ನಿಂತಿದ್ದೆ. ಈ ವೇಳೆ ನಾನು ನನ್ನ ಪಾದರಕ್ಷೆಯನ್ನು ಮರೆತಿದ್ದೇನೆ ಎಂದು ನನ್ನ ಮಗನಿಗೆ ಹೇಳಿ. ಪಾದರಕ್ಷೆಯನ್ನು ತೆಗೆದುಕೊಳ್ಳಲು ಹೋಗಿದ್ದೆ. ಆಗ ಮಹಿಳಾ ಅಧಿಕಾರಿಯೊಬ್ಬರು ಪಾದರಕ್ಷೆಗಳನ್ನು ಬಿಟ್ಟು ಒಳಗೆ ಬರುವಂತೆ ಹೇಳಿದರು. ಇದನ್ನೂ ಓದಿ: ನಾಯಕತ್ವ ಬದಲಾವಣೆಗೆ ಮುಂದಾದ ಕಾಂಗ್ರೆಸ್- ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ರಾಜೀನಾಮೆ?
Advertisement
Advertisement
ಈ ವೇಳೆ ನಾನು ಏನು ಹೇಳುತ್ತಿದ್ದೇನೆ ಎಂದು ಕೂಡ ಕೇಳದೇ ಒಳಗೆ ಕರೆದುಕೊಂಡು ಹೋಗಿ ಕುರ್ಚಿಯ ಮೇಲೆ ಕುಳಿತುಕೊಳ್ಳುವಂತೆ ತಿಳಿಸಿದರು. ನಾನು ಇನ್ನೇನು ಕುಳಿತುಕೊಳ್ಳುತ್ತಿದ್ದಂತೆಯೇ ಇನ್ನೋರ್ವ ಮಹಿಳೆ ಬಂದು ನನಗೆ ಎರಡನೇ ಡೋಸ್ ಲಸಿಕೆ ನೀಡಿದ್ದಾರೆ. ನಂತರ ಈಗಾಗಲೇ ನಾನು ಲಸಿಕೆ ಪಡೆದುಕೊಂಡಿರುವುದಾಗಿ ಪದೇ, ಪದೇ ಹೇಳಿದ ಬಳಿಕ ಒಂದು ಗಂಟೆಗಳ ಕಾಲ ನನ್ನನ್ನು ಕೋಣೆಯೊಳಗೆ ಕುಳಿತುಕೊಳ್ಳುವಂತೆ ಹೇಳಿದರು. ಎಲ್ಲವೂ ಸರಿಯಾಗಿದೆ ಎಂದು ವೈದ್ಯರು ಖಚಿತ ಪಡಿಸಿದ ನಂತರ ಮರಳಿ ಹೋಗಲು ನನಗೆ ಅನುಮತಿ ನೀಡಿದರು ಎಂದಿದ್ದಾರೆ.
Advertisement
ಈ ಘಟನೆ ನಂತರ ವೃದ್ಧೆ ಹೇಗಿದ್ದಾಳೆ ಎಂದು ತಿಳಿದುಕೊಳ್ಳಲು ಆರೋಗ್ಯ ಅಧಿಕಾರಿಗಳು ಕೆಲವು ಬಾರಿ ಮಹಿಳೆಯನ್ನು ಕರೆಸಿಕೊಂಡು ಪರೀಕ್ಷೆ ನಡೆಸಿದ್ದಾರೆ. ಆಗ ನಾನು ಸಂಪೂರ್ಣ ಆರೋಗ್ಯವಾಗಿದ್ದೇನೆ ಎಂದಿರುವುದಾಗಿ ವೃದ್ಧೆ ತಿಳಿಸಿದ್ದಾರೆ. ಇದನ್ನೂ ಓದಿ: ದಳ ತೊರೆದು ಕೈ ಹಿಡಿಯಲು ನಿರ್ಧರಿಸಿದ ಕೋಲಾರ ಶಾಸಕ ಶ್ರೀನಿವಾಸಗೌಡ
Advertisement