ಚಿಕ್ಕೋಡಿ: ಕಳೆದ ನಾಲ್ಕು ದಿನಗಳ ಹಿಂದೆ ವೃದ್ಧೆಯನ್ನು (OldWoman) ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಸ್ಥರು ಪ್ರತಿಭಟನೆ (Protest) ನಡೆಸಿದರು.
ಬೆಳಗಾವಿ (Belagavi) ಜಿಲ್ಲೆಯ ಅಥಣಿ ತಾಲೂಕಿನ ಬೇವನೂರು ಗ್ರಾಮದಲ್ಲಿ ಬೇವನೂರು ಗ್ರಾಮದ ಫುಲಾಭಾಯಿ ಲಕ್ಷ್ಮಣ ಯಮಗಾರ(65)ಳನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. ಬಾಯಿಗೆ ಬಟ್ಟೆ ಹಾಕಿ ಕಿರುಚದಂತೆ ಮಾಡಿ ಕೊಲೆ ಮಾಡಿ ಮೈಮೇಲಿದ್ದ ಆಭರಣಗಳನ್ನು ದೋಚಿ ಗುಂಪೊಂದು ಪರಾರಿಯಾಗಿತ್ತು.
Advertisement
Advertisement
ಸದ್ಯ ಅಥಣಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ ಸಂಘರ್ಷ ಕಾಂಬಳೆ ಎಂಬಾತನನ್ನು ಬಂಧಿಸಿದ್ದಾರೆ. ಸಂಘರ್ಷ ಕಾಂಬಳೆ ಬಂಧನವಾಗುತ್ತಿದ್ದಂತೆ ಬೇವನೂರು ಗ್ರಾಮದ ಮಹಿಳೆಯರು ಪ್ರತಿಭಟನೆಗೆ ಇಳಿದಿದ್ದಾರೆ. ಇದನ್ನೂ ಓದಿ: ಆಕಸ್ಮಿಕ ಅಗ್ನಿ ಅವಘಡ – 700 ಮಳಿಗೆಗಳು ಭಸ್ಮ
Advertisement
ವೃದ್ಧೆಯನ್ನು ಕೇವಲ ಬಂಗಾರ ದೋಚುವ ಸಲುವಾಗಿ ಕೊಲೆ ಮಾಡಿಲ್ಲ. ಬದಲಾಗಿ ಅದೊಂದು ಅತ್ಯಾಚಾರ ಅಂತ ಗ್ರಾಮದ ಮಹಿಳೆಯರು ಆರೋಪ ಮಾಡುತ್ತಿದ್ದಾರೆ. ಇನ್ನು ವೃದ್ಧೆಯ ಮರಣೋತ್ತರ ಪರೀಕ್ಷೆಯ ವರದಿ ಬಂದ ಮೇಲೆ ಅತ್ಯಾಚಾರ ಆಗಿದೆಯೋ ಇಲ್ಲವೋ ಎಂದು ಗೊತ್ತಾಗಲಿದೆ.
Advertisement
ವೃದ್ಧೆಯದ್ದು ರೇಪ್ ಆಂಡ್ ಮರ್ಡರ್ ಅಂತ ಗ್ರಾಮಸ್ಥರು ಆರೋಪಿಸುತ್ತಿದ್ದು, ಕೊಲೆ ಆರೋಪಿ ಸಂಘರ್ಷ ಕಾಂಬಳೆಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಮಹಿಳೆಯರು ಆಗ್ರಹಿಸುತ್ತಿದ್ದಾರೆ. ಇದನ್ನೂ ಓದಿ: ಸೂರ್ಯಗ್ರಹಣದ ಎಫೆಕ್ಟ್ – ಬಸ್‍ಗಳು, ಹೋಟೆಲ್‍ಗಳು ಖಾಲಿ, ಖಾಲಿ