BagalkotDistrictsKarnatakaLatestMain Post

ಪತಿ ಎಂದು ತಿಳಿದು 4 ದಿನ ಚಾಪೆ ಮೇಲೆ ಹಾವಿನ ಜೊತೆಗಿದ್ದ ವೃದ್ಧೆ

ಬಾಗಲಕೋಟೆ: ಹಾವು ಅಂದ್ರೆ ಎಲ್ಲರಿಗೂ ಭಯ ಸಹಜ. ಹಾವು ಅಂದರೆ ಸಾಕು ಮಾರುದ್ದ ಜಿಗಿಯುತ್ತಾರೆ‌. ಆದ್ರೆ, ಇಲ್ಲೊಬ್ಬ ವೃದ್ಧೆಗೆ ಮಾತ್ರ ಮನೆಗೆ ಹಾವು ಬಂದಾಗ ಭಯವೇ ಆಗಿಲ್ಲ. ಅಷ್ಟೆ ಅಲ್ಲ, ಮನೆಗೆ ಬಂದ ಹಾವು ಸಾಮಾನ್ಯ ಅಲ್ಲ, ಅದು ಎರಡು ವರ್ಷಗಳ ಹಿಂದೆ ಸಾವನ್ನಪ್ಪಿದ್ದ ತನ್ನ ಪತಿಯ ರೂಪ ಅಂತಿದ್ದಾಳೆ. ವಿಚಿತ್ರ ನಂಬಿಕೆಗೆ ಒಳಗಾಗಿದ್ದಲ್ಲದೇ ನಾಲ್ಕು ದಿನಗಳ ಕಾಲ ಅದನ್ನು ಮನೆಯಲ್ಲೆ ಇಟ್ಟುಕೊಂಡು ವೃದ್ಧೆ ಅಚ್ಚರಿ ಮೂಡಿಸಿದ್ದಾಳೆ.

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಕುಲಹಳ್ಳಿ ಗ್ರಾಮದ ನಿವಾಸಿ ಶಾರವ್ವಾ ಮೌನೇಶ್ ಕಂಬಾರ. ಇವರ ಮಾತಿಗೆ ಸ್ಥಳೀಯ ಜನರು ವಿಸ್ಮಯದಂತೆ ಹಾವನ್ನು ನೋಡಲು ಮುಗಿ ಬೀಳುತ್ತಿದ್ದಾರೆ. ಇದನ್ನೂ ಓದಿ: ಕೌಟುಂಬಿಕ ಕಲಹ: ಕೆರೆಗೆ ಹಾರಿದ ಒಂದೇ ಕುಟುಂಬದ ಮೂವರು ಮಹಿಳೆಯರು 

ಚಾಪೆ ಮೇಲೆ ಹಾವು
ಬಡ ಕುಟುಂಬದ ಶಾರವ್ವಾ ಪತಿ ಮೌನೇಶ್ ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಹೀಗಾಗಿ ಶಾರವ್ವ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ರು. ಹೀಗಾಗಿ ಪತಿಯೇ ಈ ಹಾವಿನ ರೂಪದಲ್ಲಿ ಬಂದು ನನ್ನ ಹತ್ತಿರ ಇದ್ದಾರೆ ಅದಕ್ಕೆ ಯಾರು ಧಕ್ಕೆ ಮಾಡಬಾರದು, ಹಿಡಿಯಬಾರದು ಎಂದು ಅದನ್ನ 4 ದಿನಗಳಿಂದ ಅವರ ಚಾಪೆ ಮೇಲೆ ಇರಿಸಿ, ಅದನ್ನು ಜೋಪಾನ ಮಾಡಿದ್ದಾರೆ. ಇದ್ರಿಂದ ವೃದ್ಧೆ ಮಾತನ್ನ ಕೇಳಿ ವಿಷಪೂರಿತ ಹಾವನ್ನು ನೋಡಲು ಸುತ್ತಮುತ್ತಲಿನ ಜನ ಮುಗಿ ಬಿದ್ದಿದ್ದಾರೆ. ಇದನ್ನೂ ಓದಿ: ಅನುಭವ ಮಂಟಪ ದಾಖಲೆಗಳನ್ನು ಪುರಾತತ್ವ ಇಲಾಖೆ ಪರಿಶೀಲಿಸಲಿದೆ: ಬೊಮ್ಮಾಯಿ

ಕಚ್ಚಿ ಸಾಯಿಸು ಎಂದ್ರೂ ಕಚ್ಚಲಿಲ್ಲ
ನಾಲ್ಕು ದಿನಗಳಿಂದ ಆ ಹಾವಿಗೆ ಊಟ ಹಾಲು ಏನು ಇಲ್ಲದೆ ಆ ಅಜ್ಜಿ ಮನೆಯಲ್ಲಿಯೇ ಅಸ್ವಸ್ಥತೆ ಗೊಂಡು ಸುಸ್ತಾಗಿ, ಬಿದ್ದಿದೆ. ಮೊದಲ ದಿನ ಹಾವನ್ನು ಕಂಡಾಗ ಶಾರವ್ವ, ನನ್ನನ್ನು ಕಚ್ಚಿ ಸಾಯುವಂತೆ ಮಾಡು ಎಂದು ಕೇಳಿದೆ. ಆದರೆ ಅದು ನನಗೆ ಏನನ್ನು ಮಾಡಿಲ್ಲ ಎನ್ನುತ್ತಾರೆ. ಆದರೆ ಹಾವು ಇದುವರೆಗೂ ಏನೂ ಮಾಡಿಲ್ಲ ಎಂದು ಅಜ್ಜಿ ಹೇಳ್ತಿದ್ದಾರೆ. ಒಟ್ಟಿನಲ್ಲಿ ವೃದ್ಧೆಯ ಈ ವಿಚಿತ್ರ ವರ್ತನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ.

ಹಿನ್ನೆಲೆ
ಶಾರವ್ವ ಅವರ ಪತಿ ಮೌನೇಶ್ ಎರಡು ವರ್ಷಗಳ ಹಿಂದೆ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರಂತೆ. ಈಕೆಗೆ ಒಂದು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳಿದ್ದು,ಹೆಣ್ಣು ಮಗಳ ಮದುವೆಯಾಗಿದೆ. ಇಬ್ಬರು ಮಕ್ಕಳು ಬೇರೆ ಊರಲ್ಲಿದ್ದು, ಒಬ್ಬ ಮಗ ಆಗಾಗ ಬಂದು ಹೋಗುತ್ತಾನೆ. ಮನೆಯಲ್ಲಿ ಏಕಾಂಗಿತನದಿಂದ ಖಿನ್ನತೆ, ಗಂಡ ಅಗಲಿದ ದುಃಖದಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾಳೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

Leave a Reply

Your email address will not be published.

Back to top button