Connect with us

ಬೈಕ್ ಗುದ್ದಿದ ರಭಸಕ್ಕೆ ಮೇಲಕ್ಕೆ ಹಾರಿ ರಸ್ತೆಗೆ ಬಿದ್ದ ಅಜ್ಜಿ!

ಬೈಕ್ ಗುದ್ದಿದ ರಭಸಕ್ಕೆ ಮೇಲಕ್ಕೆ ಹಾರಿ ರಸ್ತೆಗೆ ಬಿದ್ದ ಅಜ್ಜಿ!

ವಿಜಯಪುರ: ರಸ್ತೆ ದಾಟುವಾಗ ಬೈಕ್ ಸವಾರನೊಬ್ಬ ವೇಗವಾಗಿ ಬಂದು ಅಜ್ಜಿಗೆ ಡಿಕ್ಕಿ ಹೊಡೆದ ಘಟನೆ ವಿಜಯಪುರ ಜಿಲ್ಲೆ ಇಂಡಿಪಟ್ಟಣದ ಶ್ರೀನಿವಾಸ ಚಿತ್ರಮಂದಿರದ ಎದುರು ನಡೆದಿದೆ.

ಇಂಡಿ ನಿವಾಸಿ ಸಂಗಮ್ಮ ಕುಂಬಾರ (70) ಬೈಕ್ ಸವಾರನಿಗೆ ಬಲಿಯಾಗಿದ್ದಾರೆ. ಬೈಕ್ ಗುದ್ದಿದ ರಭಸಕ್ಕೆ ಸಂಗಮ್ಮ ಕುಂಬಾರ ಮೇಲಕ್ಕೆ ಹಾರಿ ರಸ್ತೆಗೆ ಬಿದ್ದಿದ್ದಾರೆ. ಸಂಗಮ್ಮ ಮೃತಪಟ್ಟಿದ್ದನ್ನು ನೋಡಿ ಬೈಕ್ ಸವಾರ ಕೋರ್ಕಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಈ ಘಟನೆ ಎರಡು ದಿನಗಳ ಹಿಂದೆ ನಡೆದಿದ್ದು ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಈ ಅಪಘಾತದ ಬಗ್ಗೆ ಕೇಳಿದ್ದಕ್ಕೆ ಇಂಡಿ ಪೊಲೀಸರು ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಉತ್ತರಿಸಿದ್ದಾರೆ.

ಈ ಹಿಂದೆ ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ ನಿಟ್ಟೂರಿನಲ್ಲಿ ಇನ್ನೋವಾ ಕಾರೊಂದು ಬೈಕಿಗೆ ಗುದ್ದಿದ ಪರಿಣಾಮ ಮೂವರು ಸವಾರರು ಗಂಭೀರವಾಗಿ ಗಾಯಗೊಂಡಿದ್ದರು.

ಬೈಕಿನಲ್ಲಿ ಮೂವರು ಸವಾರರು ನಿಟ್ಟೂರಿನ ಬಾಳಿಗಾ ಫಿಶ್‍ನೆಟ್ ಎದುರಿನಿಂದ ಕೊಡಂಕೂರು ಕಡೆಗೆ ಬಂದಿದ್ದರು. ರಾಷ್ಟ್ರೀಯ ಹೆದ್ದಾರಿ ದಾಟಿ ಹೋಗುತ್ತಿದ್ದಾಗ, ವೇಗವಾಗಿ ಬಂದ ಇನ್ನೋವಾ ಕಾರು ಬೈಕ್ ಗೆ ಡಿಕ್ಕಿ ಹೊಡೆದಿತ್ತು. ವೇಗದ ರಭಸಕ್ಕೆ ಬೈಕ್ ನಲ್ಲಿದ್ದ ಮೂವರು ಏಕಾಏಕಿ ಎಸೆಯಲ್ಪಟ್ಟಿದ್ದರು. ನಂತರ ಗಂಭೀರ ಸ್ಥಿತಿಯಲ್ಲಿದ್ದ ಮೂವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Advertisement
Advertisement