ದಾವಣಗೆರೆ: ಜಿಲ್ಲೆಯ ರೈಲ್ವೆ ನಿಲ್ದಾಣದ ಬಳಿ ಪುರಾತನ ಬಾವಿಯೊಂದು ಪತ್ತೆಯಾಗಿದೆ. ದಾವಣಗೆರೆ ರೈಲ್ವೆ ನಿಲ್ದಾಣದ ಬಳಿ ಎರಡು ತಿಂಗಳಿಂದ ಕಾಮಗಾರಿ ನಡೆಯುತ್ತಿದೆ. ಇಂದು ಮಧ್ಯಾಹ್ನ ಕಾಮಗಾರಿ ನಡೆಯುತ್ತಿದ್ದ ವೇಳೆ ಒಂದು ಬಾವಿ ಪತ್ತೆಯಾಗಿದೆ. ನಂತರ ಜೆಸಿಬಿ ಮೂಲಕ ಮಣ್ಣು, ಕಲ್ಲು ಎಲ್ಲವನ್ನು ಸಡಿಲ ಮಾಡಿ ನೋಡಿದಾಗ ಆಳವಾದ ಬಾವಿ ಪತ್ತೆಯಾಗಿದೆ.
ತಕ್ಷಣ ಅಲ್ಲಿನ ಸಿಬ್ಬಂದಿ ಮೇಲಾಧಿಕಾರಿಗಳಿಗೆ ತಿಳಿಸಿದ್ದಾರೆ. ಮಾಹಿತಿ ತಿಳಿದ ಅವರು ಬಂದು ಬಾವಿಯನ್ನು ನೋಡಿದ್ದಾರೆ. ಇದು ನೂರು ವರ್ಷಕ್ಕೂ ಹಳೆಯ ಬಾವಿ ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ನಂತರ ಅದರ ಪರಿಶೀಲನೆ ಮಾಡಲು ಪುರಾತತ್ವ ಇಲಾಖೆಗೆ ಫೋನ್ ಮಾಡಿ ತಿಳಿಸಿದ್ದಾರೆ.
Advertisement
Advertisement
ಬಾವಿ ನೋಡಲು ತುಂಬ ಆಳವಾಗಿದ್ದು, ನಾಲ್ಕು ಕಡೆಯೂ ಸಣ್ಣ ಕಲ್ಲುಗಳು ಮೆಟ್ಟಿಲು ರೀತಿ ಇದೆ. ಜೊತೆಗೆ ಬಾವಿ ತಳಭಾಗದಲ್ಲಿ ಕಬ್ಬಿಣದ ಸರಳುಗಳನ್ನು ಅಳವಡಿಸಿರುವುದನ್ನು ಕಾಣಬಹುದಾಗಿದೆ. ಸದ್ಯಕ್ಕೆ ಬಾವಿ ಹತ್ತಿರ ಜನರನ್ನು ಬಿಡದೆ ರೈಲ್ವೆ ಸಿಬ್ಬಂದಿ ಎಚ್ಚರ ವಹಿಸುತ್ತಿದ್ದಾರೆ.
Advertisement