ಹಾವೇರಿ: ಹಳೆಯ ಕಾಲದ್ದು ಎನ್ನಲಾದ ಹ್ಯಾಂಡ್ ಗ್ರೆನೇಡ್ ಹಾವೇರಿ ನಗರದ ನೇತಾಜಿ ನಗರದ ಖಾಲಿ ಜಾಗದಲ್ಲಿ ಪತ್ತೆಯಾಗಿದೆ.
ಖಾಲಿ ಜಾಗವನ್ನು ಸ್ವಚ್ಛಗೊಳಿಸುವ ವೇಳೆ ತುಕ್ಕು ಹಿಡಿದ ಸ್ಥಿತಿಯಲ್ಲಿ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿದೆ. ಹ್ಯಾಂಡ್ ಗ್ರೆನೇಡ್ ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Advertisement
Advertisement
ಮನೆ ಕಟ್ಟುವ ಸಲುವಾಗಿ ಖುಲ್ಲಾ ಜಾಗೆಯನ್ನ ಸ್ವಚ್ಛಗೊಳಿಸುವ ವೇಳೆ ರವಿ ಮುಷ್ಠಿ ಅವರಿಗೆ ಸೇರಿದ ಜಾಗದಲ್ಲಿ ಗ್ರೆನೇಡ್ ಪತ್ತೆಯಾಗಿದೆ. ಹಿಂದಿನ ಕಾಲದಲ್ಲಿ ದೊಂಬಿ ನಡೆದಾಗ ಪೊಲೀಸರು ಇದನ್ನು ಬಳಸುತ್ತಿದ್ದರು ಎನ್ನಲಾಗುತ್ತಿದೆ. ಇದನ್ನೂ ಓದಿ: ರಾಗಿಗುಡ್ಡದ ಬಳಿ ಗೋಶಾಲೆ ನಿರ್ಮಾಣಕ್ಕೆ ಸ್ಥಳೀಯರ ವಿರೋಧ
Advertisement
ಎಫ್‍ಐಆರ್ ದಾಖಲಾಗಿದ್ದು, ಹೆಚ್ಚಿನ ತನಿಖೆಯನ್ನ ನಡೆಸಲಾಗುವುದು ಎಂದು ಹಾವೇರಿ ಎಸ್‍ಪಿ ಹನುಮಂತರಾಯ ಮಾಹಿತಿಯನ್ನು ನೀಡಿದ್ದಾರೆ.