ಬಾಗಲಕೋಟೆ: ಒಂದು ಕಡೆ 25 ವರ್ಷಗಳ ಬಳಿಕ ಪ್ರೌಢಶಾಲೆಯಲ್ಲಿ (High School) ಹಳೆ ವಿದ್ಯಾರ್ಥಿಗಳು (Old Students) ಸಮಾಗಮ. ಇನ್ನೊಂದೆಡೆ ಶಿಕ್ಷಕರು (Teacher) ಪಾಠ ಬೋಧನೆ. ಈ ಎಲ್ಲಾ ದೃಶ್ಯ ಕಂಡು ಬಂದಿದ್ದು ಬಾದಾಮಿ ತಾಲೂಕಿನ ಕೆರೂರು (Kerur) ಪಟ್ಟಣದ ಅ.ರಾ ಹಿರೇಮಠ ಹಾಗೂ ಅ.ಚ ಘಟ್ಟದ ಪ್ರೌಢಶಾಲೆಯಲ್ಲಿ.
Advertisement
2000-2001ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು (SSLC Students) ವಿಶಿಷ್ಟ ರೀತಿಯಲ್ಲಿ ಗುರುವಂದನಾ (Guru Vadndana) ಕಾರ್ಯಕ್ರಮ ಆಯೋಜಿಸಿದ್ದರು. ಇದೇ ವೇಳೆ 1997-98 ರಲ್ಲಿ ಪ್ರಾಥಮಿಕ ಶಾಲೆಯಲ್ಲಿ ಬೋಧಿಸಿದ ಗುರುಗಳಿಗೆ ಗುರುವಂದನಾ ಕಾರ್ಯಕ್ರಮ ನಡೆದಿದ್ದು ಮತ್ತೊಂದು ವಿಶೇಷ.
Advertisement
Advertisement
25ನೇ ರಜತ ಮಹೋತ್ಸವದ ಹಿನ್ನೆಲೆಯಲ್ಲಿ ಹಳೆ ವಿದ್ಯಾರ್ಥಿಗಳು ಸೇರಿ ಅಕ್ಷರ ಕಲಿಸಿದ ಗುರುಗಳಿಗೆ ಗೌರವಿಸುವ ಮೂಲಕ ಸಾರ್ಥಕ ಕ್ಷಣವನ್ನು ಸಂಭ್ರಮಿಸಿದರು. ಬೆಳಗ್ಗೆ ಪ್ರೌಢ ಶಾಲಾ ಆವರಣದಲ್ಲಿ ಪ್ರಾರ್ಥನೆ ಬಳಿಕ ಕೊಠಡಿಗೆ ತೆರಳಿ ಪಾಠ ಕೇಳುವ ದೃಶ್ಯ ಮರುಸೃಷ್ಟಿ ಮಾಡಲಾಗಿತ್ತು. ಇದನ್ನೂ ಓದಿ: ದೆಹಲಿ ಗಣರಾಜ್ಯೋತ್ಸವಕ್ಕೆ ಲಕ್ಕುಂಡಿಯ ಬ್ರಹ್ಮ ಜಿನಾಲಯ ಆಯ್ಕೆ – ವಿಶೇಷತೆ ಏನು?
Advertisement
ಕನ್ನಡ ವಿಷಯವನ್ನು ಬೋಧಿಸುತ್ತಿದ್ದ ಸಿ ಎಸ್ ನಾಗನೂರು ಅವರು ವಿದ್ಯಾರ್ಥಿಗಳು ಹಾಜರಾತಿ ತೆಗೆದುಕೊಂಡು ಎಂದಿನಂತೆ ಪಾಠ ಬೋಧನೆ ಮಾಡಿದರು. ಹಳೆ ವಿದ್ಯಾರ್ಥಿಗಳು ಬಿಳಿ ಶರ್ಟ್ ಕಪ್ಪು ಬಣ್ಣದ ಪ್ಯಾಂಟ್, ಹಳೆ ವಿದ್ಯಾರ್ಥಿನಿಯರು ಕೆಂಪು ಬಣ್ಣದ ಸೀರೆ ಧರಿಸಿ ತರಗತಿಗೆ ಹಾಜರಾಗಿದ್ದರು. ಅದೇ ಪಾಠ, ಅದೇ ಹಳೆಯ ನೆನಪಿನಲ್ಲಿ ಸ್ನೇಹಿತರು ತಮ್ಮ ಶೈಕ್ಷಣಿಕ ಜೀವನ ಸದ್ಯ ವೃತ್ತಿ ಜೀವನದ ಬಗ್ಗೆ ಪರಸ್ಪರ ವಿಚಾರವನ್ನು ಹಂಚಿಕೊಂಡರು.
ಬಿಬಿ ನಿಲುಗಲ್ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮಕ್ಕೆ ಕಲಿಸಿದ ಗುರುಗಳನ್ನು ಪುಷ್ಪ ವೃಷ್ಟಿಯ ಮೂಲಕ ಬರಮಾಡಿಕೊಂಡರು. ವೇದಿಕೆ ಮೇಲೆ ಗುರುಗಳಿಗೆ ಶಿಷ್ಯರು ಸನ್ಮಾನಿಸಿ ಸಾರ್ಥಕತೆ ಮೆರೆದರು. 25 ವರ್ಷಗಳ ಬಳಿಕ ಶಿಕ್ಷಕರು ವಿದ್ಯಾರ್ಥಿಗಳು ಸಮಾಗಮದಲ್ಲಿ ಅಗಲಿದ ಶಿಕ್ಷಕರು ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಈ ವೇಳೆ ಹಲವು ಹಳೆ ವಿದ್ಯಾರ್ಥಿಗಳು ತಮ್ಮ ಪ್ರೌಢಶಾಲೆಯಲ್ಲಿನ ಅವಿಸ್ಮರಣೀಯ ಅನುಭವಗಳನ್ನು ಹಂಚಿಕೊಂಡರು. ನಿವೃತ್ತಿಯಾದ ಶಿಕ್ಷಕರಾದ ಡಿಪಿ ಅಮಲಝರಿ, ಆರ್ ಆರ್ ಶೆಟ್ಟರ್, ವೈ ಡಿ ರಡ್ಡೇರ್, ಸಿ ಎಸ್ ನಾಗನೂರು ಹಳೆ ವಿದ್ಯಾರ್ಥಿಗಳು ಆಯೋಜಿಸಿದ ಗುರುವಂದನಾ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮಹಾಂತೇಶ ಮೆಣಸಗಿ ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.