ಹೆಣ್ಣುಮಕ್ಕಳಿಗೆ ಅಮ್ಮ ಎಂದರೆ ಬಿಡಿಸಲಾಗದ ಸುಂದರ ಬಂಧ. ಅಮ್ಮ ಮಾಡಿದ ಅಡುಗೆಯಿಂದ ಹಿಡಿದು ಉಡುವ ಬಟ್ಟೆಯವರೆಗೂ ಅಮ್ಮನೇ ಬೇಕು. ಇತ್ತೀಚಿನ ದಿನಗಳಲ್ಲಿ ಹೆಂಗಳೆಯರು ಅಮ್ಮನ ಮದುವೆ ಸೀರೆಗೆ ಹೊಸ ರೂಪ ಕೊಡುತ್ತಿದ್ದಾರೆ. ಈಗಿನ ಟ್ರೆಂಡ್‌ಗೆ ತಕ್ಕಂತೆ ನವೀಕರಿಸುತ್ತಾರೆ. ಇದನ್ನೂ ಓದಿ:‘ತಾಂಡೇಲ್’ ಸಕ್ಸಸ್ ಬಳಿಕ ಹೊಸ ಸಿನಿಮಾ ಘೋಷಿಸಿದ ನಾಗಚೈತನ್ಯ
20-25 ವರ್ಷ ಹಳೆಯದಾದ ಸೀರೆಗಳು ಕೆಲವೊಮ್ಮೆ ಉಡುವ ಪರಿಸ್ಥಿತಿಯಲ್ಲಿ ಇರೋದಿಲ್ಲ. ಇಂತಹ ವೇಳೆ ಸೀರೆಯನ್ನು ಅನಾರ್ಕಲಿಯಾಗಿ ಬದಲಾಯಿಸಬಹುದು. ಸೀರೆಗೆ ಹೊಂದುವ ರವಿಕೆಯನ್ನ ಟೈಲರ್ ಬಳಿ ನಿಮಗೆ ಹೊಂದುವ ರೀತಿಯಲ್ಲಿ ಹೊಲಿಸಿಕೊಳ್ಳಬಹುದು. ವರ್ಷಗಳು ಕಳೆದಂತೆ ಟ್ರೆಂಡ್‌ಗಳು ಬದಲಾಗುತ್ತಲೇ ಇರುತ್ತದೆ. ಹಳೆಯ ಸೀರೆಗಳನ್ನು ಯಾವ ರೀತಿ ರೀ-ಕ್ರಿಯೇಟ್ ಮಾಡಬಹುದು ಎಂಬುದರ ಮಾಹಿತಿ ಇಲ್ಲಿದೆ. ಇದನ್ನೂ ಓದಿ: ದಳಪತಿ ವಿಜಯ್ ನೋಡಲು ಮರದಿಂದ ಜಿಗಿದು ಅಭಿಮಾನಿಯ ಹುಚ್ಚಾಟ- ವಿಡಿಯೋ ವೈರಲ್
ಅಮ್ಮನ ಸೀರೆಯೊಂದಿಗೆ ಸಹಜವಾಗಿ ಹೆಣ್ಣುಮಕ್ಕಳಿಗೆ ಭಾವನಾತ್ಮಕ ಸಂಬಂಧ ಇದ್ದೇ ಇರುತ್ತದೆ. ಅಂದಿನ ಸೀರೆಗಳನ್ನು ಧರಿಸಲು ಆಗದಿದ್ದರೆ ಚಿಂತೆಯಿಲ್ಲ. ಅದನ್ನು ಇಂದಿನ ಜಮಾನಕ್ಕೆ ಸರಿಹೋಗವಂತೆ ಸಿದ್ಧಪಡಿಸಬಹುದು. ಸೀರೆಯನ್ನು ಲೆಹೆಂಗಾವಾಗಿ ಬದಲಿಸಿ ಉಡಬಹುದು. ಅಷ್ಟೇ ಅಲ್ಲ, ಗೌನ್, ಚೂಡಿದಾರ್, ಹೀಗೆ ನಾನಾ ರೂಪ ನೀಡಿ ಮದುವೆ ಕಾರ್ಯಕ್ರಮಗಳಿಗೆ ಧರಿಸಬಹುದು.
View this post on Instagram
ಸೆಲೆಬ್ರಿಟಿಗಳೇ ಮೊದಲು ಅಮ್ಮನ ಮದುವೆ ಸೀರೆಯನ್ನು ತಮ್ಮ ಮದುವೆಯಲ್ಲೂ ಉಟ್ಟು ಈ ಟ್ರೆಂಡ್‌ನ ಶುರು ಮಾಡಿರೋದು. ಅಷ್ಟಕ್ಕೂ ಯಾರೆಲ್ಲಾ ಅಮ್ಮನ ಮದುವೆ ನೆನಪನ್ನು ಮರುಕಳಿಸಿದ್ದಾರೆ ಅನ್ನೋದನ್ನ ನೋಡೋಣ. ಕಳೆದ ವರ್ಷ ನಟಿ ಮಾನ್ವಿತಾ ಕಾಮತ್ (Manvita Kamath) ಹಸೆಮಣೆ ಏರಿದರು. ಈ ವೇಳೆ, ಅಮ್ಮನ ಸೀರೆಯನ್ನು ನವೀಕರಿಸಿ ಈಗಿನ ಟ್ರೆಂಡ್‌ಗೆ ತಕ್ಕಂತೆ ಹೊಸ ಡ್ರೆಸ್ ರೀತಿಯಲ್ಲಿ ಅವರು ಬದಲಿಸಿದ್ದರು. ಅದನ್ನೇ ಮದುವೆ ಕಾರ್ಯದಲ್ಲಿ ಧರಿಸಿ ಮಿಂಚಿದ್ದರು.
ಪ್ರಿಯಾಂಕಾ ಚೋಪ್ರಾ (Priyanka Chopra) ಮತ್ತು ನಿಕ್ ಜೋನಸ್ ಭಾರತೀಯ ಮತ್ತು ಕ್ರಿಸ್ಟಿಯನ್ ಸಂಪ್ರದಾಯದಂತೆ ವಿವಾಹವಾಗಿದ್ದರು. ಕ್ರಿಸ್ಟಿಯನ್ ಸಂಪ್ರದಾಯದಂತೆ ಅವರು ವಿವಾಹವಾದಾಗ ಅತ್ಯಂತ ಉದ್ದವಾದ ದುಪ್ಪಟ್ಟ ಧರಿಸಿ ಗಮನ ಸೆಳೆದಿದ್ದರು. ನಟಿಯ ದುಪ್ಪಟ್ಟ ಮೇಲೆ ಮಾಡಲಾದ ಕಸೂತಿಗಳು ನಿಕ್ ಜೋನಸ್ ತಾಯಿ ತಮ್ಮ ಮದುವೆಯ ಸಮಯದಲ್ಲಿ ಧರಿಸಿದ್ರಂತೆ.
View this post on Instagram
ಸೌತ್ ನಟಿ ಕೀರ್ತಿ ಸುರೇಶ್ (Keerthy Suresh) ಕೂಡ ತಮ್ಮ ಮದುವೆಯಲ್ಲಿ 30 ವರ್ಷದ ಹಿಂದಿನ ಅಮ್ಮನ ಸೀರೆಯನ್ನು ಉಟ್ಟಿದ್ದರು. ಮೆರೂನ್ ಬಣ್ಣದ ಹೊಸ ಮೆರುಗು ನೀಡಿದ್ದರು. ಅದು ಕೂಡ ಮದುವೆಯಲ್ಲಿ ಹೈಲೆಟ್ ಆಗಿತ್ತು.
ಯಾಮಿ ಗೌತಮಿ ಮದುವೆಯಲ್ಲಿ ತಮ್ಮ ಅಮ್ಮನ ಸೀರೆಯನ್ನೇ ಮದುವೆಯಲ್ಲಿ ಉಟ್ಟಿದ್ದರು. ಇದರೊಂದಿಗೆ ಅಜ್ಜಿ ನೀಡಿದ ಕೆಲ ಆಭರಣಗಳನ್ನು ಧರಿಸಿ ಮದುವೆಯಲ್ಲಿ ಮಿಂಚಿದ್ದರು. ಒಟ್ನಲ್ಲಿ ಹಳೆಯ ಉಡುಗೆಗಳಿಗೆ ಹೊಸ ರೂಪ ನೀಡಲು ನಾನಾ ದಾರಿಗಳಿವೆ ಎಂಬುದಕ್ಕೆ ಇವೆ ಸಾಕ್ಷಿ.